ಮುಂಬೈ ವಿಮಾನ ನಿಲ್ದಾಣದಲ್ಲಿ 80 ಕೋ.ರೂ.ಗೂ ಅಧಿಕ ಮೌಲ್ಯದ ಹೆರಾಯಿನ್ ವಶ
Photo:twitter
ಮುಂಬೈ: ಕಂದಾಯ ಗುಪ್ತಚರ ನಿರ್ದೇಶನಾಲಯವು (DRI)ಮುಂಬೈ ವಿಮಾನ ನಿಲ್ದಾಣದಲ್ಲಿ 16 ಕೆಜಿ ತೂಕದ 80 ಕೋ.ರೂ.ಗೆ ಅಧಿಕ ಮೌಲ್ಯದ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಸುಳುವಿನ ಆಧಾರದ ಮೇಲೆ ಪ್ರಯಾಣಿಕನನ್ನು ಬುಧವಾರ ತಡೆದು ಆತನ ಬ್ಯಾಗ್ ಅನ್ನು ಹುಡುಕಾಡಿದಾಗ ಮಾದಕ ವಸ್ತು ಪತ್ತೆಯಾಗಿದೆ. ಟ್ರಾಲಿ ಬ್ಯಾಗ್ನೊಳಗೆ ಹೆರಾಯಿನ್ ಅನ್ನು ಮರೆ ಮಾಡಲಾಗಿತ್ತು ಎಂದು ಡಿಆರ್ಐ ಅಧಿಕಾರಿ ತಿಳಿಸಿದ್ದಾರೆ
ಕೇರಳದ ನಿವಾಸಿಯಾಗಿರುವ ವ್ಯಕ್ತಿಯ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ (ಎನ್ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ
Next Story