'ಜಗತ್ತನ್ನು ಮುನ್ನಡೆಸಲು ಮೋದಿಗಿಂತ ಉತ್ತಮ ನಾಯಕರಿಲ್ಲ' ಎಂದ ಕೇಂದ್ರ ಸಚಿವ ಜಿತೇಂದ್ರ ಸಿಂಗ್
Photo: PTI
ಅಹ್ಮದಾಬಾದ್: ನರೇಂದ್ರ ಮೋದಿ ಮತ್ತು ಭಾರತದಿಂದ ಮುನ್ನಡೆಸಲು ಜಗತ್ತು ಸಿದ್ಧವಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ.
ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಸಕ್ತ ಬಿಕ್ಕಟ್ಟಿನ ಸಮಯದಲ್ಲಿ ಜಗತ್ತನ್ನು ಮುನ್ನಡೆಸಲು ಪ್ರಧಾನಿ ಮೋದಿ ಅವರಿಗಿಂತ ಉತ್ತಮ ಬೇರೊಬ್ಬ ನಾಯಕರಿಲ್ಲ ಹಾಗೂ ಅವರು ಅತ್ಯುತ್ತಮ ಹಾಗೂ ಅತ್ಯಂತ ಜನಪ್ರಿಯ ನಾಯಕ ಎಂದು ಸಿಂಗ್ ಹೇಳಿಕೊಂಡಿದ್ದಾರೆ.
"ಜಾಗತಿಕ ಆರ್ಥಿಕತೆ ಸಮಸ್ಯೆಯಲ್ಲಿದೆ, ಬಡತನದಿಂದಾಗಿ ಇಂಗ್ಲೆಂಡ್ನಲ್ಲಿ ಕಳ್ಳತನಗಳು ನಡೆಯುತ್ತಿವೆ. ಹೀಗಿರುವಾಗ ಕೋವಿಡ್ ಸಂದರ್ಭ 135 ಕೋಟಿ ಜನಸಂಖ್ಯೆಯ ದೇಶವನ್ನು ಮೋದಿ ಅವರು ನಿಭಾಯಿಸಿದ ರೀತಿ ಜಗತ್ತಿಗೆ ಒಂದು ಉದಾಹರಣೆ" ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರಾಗಿರುವ ಸಿಂಗ್ ಹೇಳಿದರು.
"ಮೋದಿ ಅವರಿಂದ ಮುನ್ನಡೆಸಲು ಜಗತ್ತು ಸಿದ್ಧವಾಗಿದೆ. ಮುನ್ನಡೆಸಲು ನಾವು ಸಿದ್ಧಗೊಳ್ಳಬೇಕಿದೆ. ಮೋದಿಜೀ ಅವರನ್ನು ಹೊರತುಪಡಿಸಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಬೇರೆ ಪರ್ಯಾಯವಿಲ್ಲ ಎಂದು ಜಾಗತಿಕ ನಾಯಕರು ಅಂದುಕೊಂಡಿದ್ದಾರೆ" ಎಂದು ಸಿಂಗ್ ಹೇಳಿಕೊಂಡರು.
ಗುಜರಾತ್ನಲ್ಲಿ ಪಕ್ಷದ ಗೌರವ್ ಯಾತ್ರೆ ಕುರಿತು ಮಾತನಾಡಿದ ಅವರು ಮುಂದಿನ ವರ್ಷ ಚುನಾವಣೆ ನಡೆಯಲಿರುವ ಗುಜರಾತ್ನಲ್ಲಿ ಜನರು ಮೋದಿ ಅವರಿಗೆ ನಿಷ್ಠೆ ತೋರಲಿದ್ದಾರೆ ಎಂದರು.