ವಡೋದರಾ: 500 ಕೋ.ರೂ. ಮೌಲ್ಯದ ಮಾದಕ ಪದಾರ್ಥ ಎಂಡಿಎಂಎ ವಶ
ಅಹ್ಮದಾಬಾದ್, ನ. 30: ನಗರದ ವಡೋದರಾದ ಹೊರವಲಯದಲ್ಲಿರುವ ಉತ್ಪಾದನಾ ಘಟಕವೊಂದರ ಮೇಲೆ ದಾಳಿ ನಡೆಸಿರುವ ಗುಜರಾತ್(Gujarat)ಭಯೋತ್ಪಾದನ ವಿರೋಧಿ ದಳ (ಎಟಿಎಸ್) ಸುಮಾರು 500 ಕೋ. ರೂ. ಮೌಲ್ಯದ ಬೃಹತ್ ಪ್ರಮಾಣದ ನಿಷೇಧಿತ ಎಂಡಿಎಂಎ (MDMA)ಮಾದಕ ಪದಾರ್ಥವನ್ನು ವಶಪಡಿಸಿಕೊಂಡಿದೆ.
ವಡೋದರಾದ ಸಮೀಪ ಇರುವ ಸಣ್ಣ ಕಾರ್ಖಾನೆ ಹಾಗೂ ಗೋದಾಮಿನ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿದ ಸಂದರ್ಭ ಎಟಿಎಸ್ ಐವರನ್ನು ವಶಕ್ಕೆ ತೆಗೆದುಕೊಂಡಿತು ಎಂದು ಎಟಿಎಸ್ ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳು ಕಾನೂನು ಬದ್ಧವಾಗಿ ರಾಸಾಯನಿಕವನ್ನು ತಯಾರಿಸುವ ನೆಪದಲ್ಲಿ ಎಂಡಿ ಮಾದಕ ಪದಾರ್ಥವನ್ನು ತಯಾರಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆ ಬಹಿರಂಗಗೊಳಿಸಿದೆ.
ಈ ವರ್ಷದ ಆಗಸ್ಟ್ ನಲ್ಲಿ ವಡೋದರ ನಗರದ ಸಮೀಪದಲ್ಲಿರುವ ಗೋದಾಮಿನಿಂದ ಸುಮಾರು 1,000 ಕೋಟಿ ರೂಪಾಯಿ ಮೌಲ್ಯದ 200 ಕಿ.ಗ್ರಾಂ.ಗೂ ಅಧಿಕ ತೂಕದ ಮಾದಕ ಪದಾರ್ಥ ಮೆಫೆಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು.
Next Story