ಒಬ್ಬನನ್ನೇ ವಿವಾಹವಾದ ಐಟಿ ಎಂಜಿನಿಯರ್ಗಳಾದ ಅವಳಿ ಸಹೋದರಿಯರು !
ವೀಡಿಯೊ ವೈರಲ್
ಮುಂಬೈ: ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಅವಳಿ ಸಹೋದರಿಯರು ಒಬ್ಬನೇ ವ್ಯಕ್ತಿಯನ್ನು ವಿವಾಹವಾದ ಸ್ವಾರಸ್ಯಕರ ಪ್ರಸಂಗ ಬೆಳಕಿಗೆ ಬಂದಿದೆ.
ಉಭಯ ಕುಟುಂಬಗಳು ಈ ವಿವಾಹಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಹೇಳಲಾಗಿದೆ. ಈ ಅಪರೂಪದ ವಿವಾಹದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂದು newindianexpress.com ವರದಿ ಮಾಡಿದೆ.
36 ವರ್ಷ ವಯಸ್ಸಿನ ಅವಳಿ ಸಹೋದರಿಯರು ಐಟಿ ಎಂಜಿನಿಯರ್ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೂ ಒಟ್ಟಿಗೇ ವಾಸಿಸುತ್ತಾ ಬಂದಿದ್ದ ಈ ಅವಳಿ ಸಹೋದರಿಯರು ಅತುಲ್ ಎಂಬ ವ್ಯಕ್ತಿಯನ್ನು ವಿವಾಹವಾಗಲು ನಿರ್ಧರಿಸಿದರು. ವರ ಟ್ರಾವೆಲ್ ಏಜೆನ್ಸಿ ವ್ಯವಹಾರ ನಡೆಸುತ್ತಿದ್ದಾರೆ. ಸೊಲ್ಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕು ಅಕ್ಲೂಜ್ ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ.
ಈ ವಿವಾಹಕ್ಕೆ ಎರಡೂ ಕುಟುಂಬಗಳಿಂದ ಯಾವುದೇ ಆಕ್ಷೇಪ ಇಲ್ಲವಾದರೂ, ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ಅರಂಭಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ವರದಿಗಳು ಹೇಳಿವೆ. ಆದರೆ ಯಾರು ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ ಎಂದು newindianexpress.com ವರದಿ ಮಾಡಿದೆ.
Twin sisters From Mumbai,got married to the same man in Akluj in Malshiras taluka of Solapur district in #maharashtra#maharashtranews#twinsisters #Mumbai #Viral #ViralVideos #India #Maharashtra pic.twitter.com/d52kPVdd5t
— Siraj Noorani (@sirajnoorani) December 4, 2022
Maharashtra | A non-cognizable offences case under IPC section 494 registered against one Atul Awtade for marrying twin sisters together on December 2. The wedding took place in Akluj town: SP Solapur Shirish Sardeshpande
— ANI (@ANI) December 4, 2022