ಚುನಾವಣೋತ್ತರ ಸಮೀಕ್ಷೆ: ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಬಹುಮತ ಪಡೆಯಲಿರುವ ಎಎಪಿ
ಹೊಸದಿಲ್ಲಿ: ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) 250 ವಾರ್ಡ್ಗಳಲ್ಲಿ 149-171 ಸ್ಥಾನಗಳನ್ನು ಪಡೆಯಲಿದೆ ಎಂದು ಆಜ್ ತಕ್ ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ. ಟೈಮ್ಸ್ ನೌ ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಎಎಪಿ ಪಕ್ಷವು 146 -156 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ.
ಆಜ್ ತಕ್ ಪ್ರಕಾರ ಬಿಜೆಪಿ 69-91 ವಾರ್ಡ್ಗಳನ್ನು ಗೆದ್ದರೆ, ಟೈಮ್ಸ್ ನೌ ಪ್ರಕಾರ ಬಿಜೆಪಿ 84-94 ವಾರ್ಡ್ಗಳನ್ನು ಗೆಲ್ಲುವ ಸಾಧ್ಯತೆ ಇದೆ.
Next Story