ಗುಜರಾತ್ ಫಲಿತಾಂಶದ ಬಳಿಕ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದು ಹೀಗೆ...
ಹೊಸದಿಲ್ಲಿ: ತವರು ರಾಜ್ಯ ಗುಜರಾತಿನಲ್ಲಿ (Gujarat) ಬಿಜೆಪಿ (BJP) ಗೆದ್ದಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ತನ್ನ ತವರು ರಾಜ್ಯಕ್ಕೆ ಭಾವುಕ ಧನ್ಯವಾದಗಳನ್ನು ಅರ್ಪಿಸಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
" ಧನ್ಯವಾದಗಳು ಗುಜರಾತ್. ಅಭೂತಪೂರ್ವ ಚುನಾವಣಾ ಫಲಿತಾಂಶಗಳನ್ನು ನೋಡಿ ನಾನು ಭಾವುಕನಾಗಿದ್ದಾನೆ. ಜನರು ಅಭಿವೃದ್ಧಿಯ ರಾಜಕಾರಣಕ್ಕೆ ಆಶೀರ್ವಾದ ಮಾಡಿದ್ದಾರೆ ಮತ್ತು ಅದೇ ಸಮಯದಲ್ಲಿ ಈ ವೇಗವು ಇನ್ನಷ್ಟು ವೇಗದಲ್ಲಿ ಮುಂದುವರಿಯಬೇಕೆಂದು ಅವರು ಬಯಸುತ್ತಾರೆ. ನಾನು ಗುಜರಾತ್ನ ಜನಶಕ್ತಿಗೆ ತಲೆಬಾಗುತ್ತೇನೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
"ಬಿಜೆಪಿಯ ಎಲ್ಲಾ ಕಾರ್ಯಕರ್ತರು ಚಾಂಪಿಯನ್ ಗಳು ಎಂದು ಹೇಳಲು ಬಯಸುತ್ತಿದ್ದೇನೆ. ನಿಮ್ಮ ಪರಿಶ್ರಮ ಇಲ್ಲದೆ ಈ ಐತಿಹಾಸಿಕ ಗೆಲುವು ಸಾಧ್ಯವೇ ಇರಲಿಲ್ಲ. ನೀವೇ ನಮ್ಮ ಪಕ್ಷದ ಶಕ್ತಿ" ಎಂದು ಮೋದಿ ಬರೆದಿದ್ದಾರೆ.
Thank you Gujarat. I am overcome with a lot of emotions seeing the phenomenal election results. People blessed politics of development and at the same time expressed a desire that they want this momentum to continue at a greater pace. I bow to Gujarat’s Jan Shakti.
— Narendra Modi (@narendramodi) December 8, 2022
To all hardworking @BJP4Gujarat Karyakartas I want to say - each of you is a champion! This historic win would never be possible without the exceptional hardwork of our Karyakartas, who are the real strength of our Party.
— Narendra Modi (@narendramodi) December 8, 2022