ಕೇವಲ 12 ದಿನಗಳಲ್ಲಿ 5.4 ಸೆಂ.ಮೀ. ಕುಸಿದ ಜೋಷಿಮಠ; ಸ್ಯಾಟಲೈಟ್ ಚಿತ್ರದಿಂದ ಬಹಿರಂಗ
ಸಂಪೂರ್ಣ ಪಟ್ಟಣವೇ ಕುಸಿಯಬಹುದು ಎಂದ ಇಸ್ರೋ
ಸಂಪೂರ್ಣ ಪಟ್ಟಣವೇ ಕುಸಿಯಬಹುದು ಎಂದ ಇಸ್ರೋ
ಹೊಸದಿಲ್ಲಿ, ಜ. 13: ಉತ್ತರಾಖಂಡದ ಜೋಶಿಮಠ(Joshimatha) ಪಟ್ಟಣ ಕೇವಲ 12 ದಿನಗಳಲ್ಲಿ 5.4 ಸೆಂಟಿ ಮೀಟರ್ ಕುಸಿದಿದೆ. ಸಂಪೂರ್ಣ ಪಟ್ಟಣವೇ ಕುಸಿಯುವ ಸಾಧ್ಯತೆ ಇದೆ ಎಂದು ಇಸ್ರೋದ ವರದಿ ಹೇಳಿದೆ.
ಡಿಸೆಂಬರ್ 27 ಹಾಗೂ ಜನವರಿ 8ರ ನಡುವೆ ಜೋಶಿಮಠ 5.4 ಸೆಂಟಿ ಮೀಟರ್ ಕುಸಿದಿರುವುದನ್ನು ಇಸ್ರೋದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (NRSS) ಬಿಡುಗಡೆ ಮಾಡಿದ ಸ್ಯಾಟಲೈಟ್ ಚಿತ್ರ ತೋರಿಸಿದೆ. 2022 ಜನವರಿ 2ರಂದು ಸಂಭವಿಸಿದ ತೀವ್ರ ಭೂಕುಸಿತದ ಪರಿಣಾಮ ಮಣ್ಣು ಸಾಮೂಹಿಕವಾಗಿ ಸಾಗುವ ಪ್ರಕ್ರಿಯೆ ಸಂಭವಿಸುತ್ತಿದೆ ಎಂದು ಸಾಕ್ಷವನ್ನು ಉಲ್ಲೇಖಿಸಿ ವರದಿ ಹೇಳಿದೆ.
Next Story