ಶೇ.100 ಅಂಕ ಗಳಿಸಿದ ರಾಜಸ್ಥಾನದ ಕಲ್ಪಿತ್ಗೆ ಜೆಇಇ-ಮೇನ್ ಪರೀಕ್ಷೆಯಲ್ಲಿ ಅಗ್ರಸ್ಥಾನ
ಉದಯಪುರ(ರಾಜಸ್ಥಾನ),ಎ.27: 2017ನೇ ಸಾಲಿನ ಪ್ರತಿಷ್ಠಿತ ಜೆಇಇ-ಮೇನ್ ಪರೀಕ್ಷೆಯಲ್ಲಿ ಉದಯಪುರದ ಕಲ್ಪಿತ್ ವೀರಾವಲ್ (17) ಅಗ್ರಸ್ಥಾನವನ್ನು ಪಡೆದಿದ್ದಾರೆ. ಪರೀಕ್ಷೆಯಲ್ಲಿ ಶೇ.100 ಅಥವಾ ಎಲ್ಲ 360 ಅಂಕಗಳನ್ನು ಗಳಿಸಿದ ಮೊದಲ ಸಾಧಕ ಎಂಬ ಹೆಗ್ಗಳಿಕೆಗೂ ಕಲ್ಪಿತ್ ಪಾತ್ರರಾಗಿದ್ದಾರೆ.
ಇಲ್ಲಿಯ ಎಂಡಿಎಸ್ ಸೀನಿಯರ್ ಸೆಕಂಡರಿ ಶಾಲೆಯ ವಿದ್ಯಾರ್ಥಿಯಾದ ಕಲ್ಪಿತ್ ವರ್ಷವಿಡೀ ಒಂದೇ ಒಂದು ತರಗತಿಯನ್ನೂ ತಪ್ಪಿಸಿರಲಿಲ್ಲ.
ಮೊದಲ ರ್ಯಾಂಕ್ ಸಿಗುತ್ತದೆ ಎಂಬ ವಿಶ್ವಾಸವಿತ್ತು, ಆದರೆ 360 ಅಂಕ ಗಳಿಸುತ್ತೇನೆ ಎನ್ನುವದನ್ನು ಎಣಿಸಿರಲಿಲ್ಲ ಎಂದು ಕಲ್ಪಿತ್ ಹೇಳಿದರು.
ಕಲ್ಪಿತ್ ತಂದೆ ಪುಷ್ಪೇಂದ್ರ ವೀರಾವಲ್ ಸರಕಾರಿ ಎಂ.ಬಿ.ಆಸ್ಪತ್ರೆಯಲ್ಲಿ ಶುಶ್ರೂಷಕ ರಾಗಿದ್ದರೆ, ತಾಯಿ ಪುಷ್ಪಾ ಸರಕಾರಿ ಶಾಲಾ ಶಿಕ್ಷಕಿಯಾಗಿದ್ದಾರೆ
ಐಐಟಿ-ಮುಂಬೈನಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್ಗೆ ಸೇರಲು ಕಲ್ಪಿತ್ ಇಚ್ಛಿಸಿದ್ದಾರೆ.
Next Story