ಹರ್ಷವರ್ಧನ್ಗೆ ಪರಿಸರ ಖಾತೆ ಹೊಣೆ
ಹೊಸದಿಲ್ಲಿ,ಮೇ 22: ಅನಿಲ ಮಾಧವ ದವೆ ಅವರ ನಿಧನದಿಂದಾಗಿ ತೆರವಾಗಿದ್ದ ಪರಿಸರ ಖಾತೆಯ ಹೆಚ್ಚುವರಿ ಹೊಣೆಯನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಅವರು ಸೋಮವಾರ ವಹಿಸಿಕೊಂಡರು. ದವೆಯವರು ಮೇ 18ರಂದು ಹೃದಯಾಘಾತದಿಂದ ನಿಧನರಾಗಿದ್ದರು.
ಅಧಿಕಾರ ಸ್ವೀಕರಿಸಿದ ಬಳಿಕ ಹರ್ಷವರ್ಧನ್ ಅವರು ದವೆಯವರ ಸ್ಮರಣಾರ್ಥ ಪರಿಸರ ಸಚಿವಾಲಯದ ಆವರಣದಲ್ಲಿ ಸಸಿಯೊಂದನ್ನು ನೆಟ್ಟರು.
Next Story