ಫೇಸ್ಬುಕ್ನಲ್ಲಿ ಮೋದಿ,ಆದಿತ್ಯನಾಥರ ಆಕ್ಷೇಪಾರ್ಹ ಚಿತ್ರ: ಬಿಎಸ್ಪಿ ನಾಯಕ ಸೆರೆ
ಅಲಿಘಡ(ಉ.ಪ್ರ),ಜೂ.7: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರ ಆಕ್ಷೇಪಾರ್ಹ ಚಿತ್ರವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಆರೋಪದಲ್ಲಿ ಬಿಎಸ್ಪಿ ನಾಯಕ ಶಂಕರಲಾಲ್ ಪಿಪ್ಪಲ್ ಮತ್ತು ಜಾವೇದ್ ಆಲಂ ಎನ್ನುವವರನ್ನು ಮಂಗಳವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಜಲಾಲಿ ನಿವಾಸಿಯಾಗಿರುವ ಪಿಪ್ಪಲ್ ಜೂ.4ರಂದು ಈ ಚಿತ್ರವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, ಆಲಂ ಅದನ್ನು ಶೇರ್ ಮಾಡಿದ್ದ.
ಈ ಬಗ್ಗೆ ಜಿಲ್ಲಾ ಬಿಜೆಪಿ ನಾಯಕರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
Next Story