ರಾಜೀನಾಮೆ ಬೆನ್ನಲ್ಲೇ 6ನೆ ಬಾರಿಗೆ ಬಿಹಾರ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್
ಉಪಮುಖ್ಯಮಂತ್ರಿಯಾಗಿ ಸುಶೀಲ್ ಮೋದಿ ಪ್ರಮಾಣವಚನ ಸ್ವೀಕಾರ
ಬಿಹಾರ, ಜು.27: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಎನ್ ಡಿಎ ಶಾಸಕರ ಬೆಂಬಲದೊಂದಿಗೆ ನಿತೀಶ್ ಕುಮಾರ್ 6ನೆ ಬಾರಿ ಬಿಹಾರ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ,
ಬಿಹಾರ ರಾಜಭವನದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆದಿದ್ದು, ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಪ್ರತಿಜ್ಞಾ ವಿಧಿ ಬೋಧಿಸಿದರು. 6ನೆ ಬಾರಿಗೆ ನಿತೀಶ್ ಬಿಹಾರ ಸಿಎಂ ಆಗಿದ್ದು, ಡಿಸಿಎಂ ಆಗಿ ಸುಶೀಲ್ ಕುಮಾರ್ ಮೋದಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
Next Story