ಎಸ್ ಬಿಐ ಉಳಿತಾಯ ಖಾತೆ ಬಡ್ಡಿ ದರ ಇಳಿಕೆ
ಮುಂಬೈ, ಜು. 31: ದೇಶದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ.
ಎಸ್ ಬಿಐ ಉಳಿತಾಯ ಖಾತೆ ಮೇಲಿನ ಬಡ್ಡಿದರವನ್ನು ಶೇಕಡಾ 4ರಿಂದ ಶೇಕಡಾ 3.5ಕ್ಕೆ ಇಳಿಕೆ ಮಾಡಿದ್ದು, ಬ್ಯಾಂಕ್ ನಲ್ಲಿ 1 ಕೋಟಿ ರೂಪಾಯಿಗಿಂತ ಕಡಿಮೆ ಠೇವಣಿ ಇಟ್ಟ ಗ್ರಾಹಕರು ಜು.31ರಿಂದ ವಾರ್ಷಿಕ ಶೇಕಡಾ 3.5ರಷ್ಟು ಬಡ್ಡಿ ಪಡೆಯಲಿದ್ದಾರೆ. ಆದರೆ 1 ಕೋಟಿ ರೂ.ಗೂ ಅಧಿಕ ಠೇವಣಿ ಇಟ್ಟಿರುವ ಉಳಿತಾಯಖಾತೆ ಗ್ರಾಹಕರ ಬಡ್ಡಿದರದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಅವರು ಶೇಕಡಾ 4.0ರಷ್ಟು ಬಡ್ಡಿದರ ಪಡೆಯಲಿದ್ದಾರೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ಬ್ಯಾಂಕ್ ನಲ್ಲಿರುವ ಶೇ 90ರಷ್ಟು ಉಳಿತಾಯ ಖಾತೆಗಳು 1 ಕೋಟಿ ರೂ.ಗಿಂತ ಕಡಿಮೆ ಠೇವಣಿ ಹೊಂದಿವೆ. ಇದರಿಂದಾಗಿ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿರುವವರಿಗೆ ಆಘಾತ ಉಂಟಾಗಿದೆ.
Next Story