ಎ.ಕೆ. ಅಬೂಬಕರ್
ಮಂಗಳೂರು, ಜು.25: ಅಡ್ಡೂರು ಬದ್ರಿಯಾ ಜುಮ್ಮಾ ಮಸೀದಿಯ ಮಾಜಿ ಉಪಾಧ್ಯಕ್ಷ ಎ.ಕೆ. ಅಬೂಬಕರ್ (70) ಅಲ್ಪಕಾಲದ ಅಸೌಖ್ಯದಿಂದ ಅಡ್ಡೂರಿನ ಸ್ವಗೃಹದಲ್ಲಿ ಶನಿವಾರ ಸಂಜೆ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರವು ಜು.26ರಂದು (ರವಿವಾರ) ನಸುಕಿನ ಜಾವ 4:30ರ ಸುಮಾರಿಗೆ ಅಡ್ಡೂರು ಬದ್ರಿಯಾ ಜುಮ್ಮಾ ಮಸೀದಿಯ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story