ಶತಾಯುಷಿ ಕೇಶವ ಶೇಟ್
ಮಂಗಳೂರು, ಅ.1: ದೈವಜ್ಞ ಬ್ರಾಹ್ಮಣ ಸಮಾಜದ ಹಿರಿಯರಾಗಿದ್ದ "ಶತಾಯುಷಿ" ಕೇಶವ ಶೇಟ್(102) ಬುಧವಾರ ತಮ್ಮ ಪುತ್ರನ ಮನೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ನಗರದ ಕೊಡಿಯಾಲಬೈಲ್ ಅಳಕೆ ನಿವಾಸಿಯಾಗಿದ್ದ ಕೇಶವ ಶೇಟ್ ನುರಿತ ಸ್ವರ್ಣಕಾರರಾಗಿದ್ದರು. ಮೂಲತಃ ಉತ್ತರ ಕನ್ನಡದ ಕುಮಟಾ ಮೂರೂರಿನವರು.
ಮೃತರು ಪತ್ನಿ, ಎಂಟು ಪುತ್ರಿಯರು, ಇಬ್ಬರು ಪುತ್ರರನ್ನು ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿರುವರು.
Next Story