ಹಾಜಿ ಯು.ಕೆ. ಆಲಿಯಬ್ಬ
ಮಂಗಳೂರು, ಅ.28: ಸಮಾಜ ಸೇವಕ ಹಾಗೂ ಹಿರಿಯ ವ್ಯಾಪಾರಸ್ಥ ಹಾಜಿ ಯು.ಕೆ. ಆಲಿಯಬ್ಬ (82) ವಯೋಸಹಜ ಕಾಯಿಲೆಯಿಂದ ತೊಕ್ಕೊಟ್ಟುವಿನ ಸ್ವಗೃಹದಲ್ಲಿ ನಿಧನರಾದರು.
ಸುಮಾರು 60 ವರ್ಷಗಳ ಕಾಲ ಉಳ್ಳಾಲದ ಮುಕ್ಕಚ್ಛೇರಿಯಲ್ಲಿ ವ್ಯಾಪಾರ ನಡೆಸಿದ ಮೃತರು, ‘ಮುಕ್ಕಚ್ಛೇರಿ ಆಲಿಯಾಕ’ ಎಂದೇ ಹೆಸರು ವಾಸಿಯಾಗಿದ್ದರು. ಇವರು ಉಳ್ಳಾಲದ ಸೈಯದ್ ಮದನಿ ದರ್ಗಾ ಹಾಗೂ ಕಲ್ಲಾಪು ಜುಮಾ ಮಸೀದಿಯಲ್ಲಿ ಹಲವು ವರ್ಷಗಳ ಕಾಲ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಸರಳ ವ್ಯಕ್ತಿತ್ವ ಹೊಂದಿದ್ದ ಇವರು ನಾಲ್ವರು ಪುತ್ರರು, ನಾಲ್ವರು ಪುತ್ರಿಯರು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story