ಕೆ.ಎಸ್. ಹಿರ್ಗಾನ
ಮೂಡುಬಿದಿರೆ : ನಿವೃತ್ತ ಶಿಕ್ಷಕ ಸಮಾಜ ಸೇವಕ, ಅಳಿಯೂರು ನಿವಾಸಿ ಕೆ. ಎಸ್. ಹಿರ್ಗಾನ (84) ಸ್ವಗೃಹದಲ್ಲಿ ಮಂಗಳವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.
ಪುತ್ತೂರು ಉಡುಪಿ, ಬೆಳುವಾಯಿ, ಇರ್ವತ್ತೂರು, ದರೆಗುಡ್ಡೆ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಅಳಿಯೂರು ಶಾಲೆಯಲ್ಲಿ ಮುಖ್ಯೋಪಾಧ್ಯಾಯ ರಾಗಿ ನಿವೃತ್ತರಾಗಿದ್ದರು. ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಅವರು ಹಲವಾರು ಸಾಮಾಜಿಕ ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.
Next Story