ಅಬೂಬಕರ್ ಮುಬಾರಕ್
ಮಂಗಳೂರು, ಡಿ.23: ಸುರತ್ಕಲ್ ಕಾನ ನಿವಾಸಿ ಅಬೂಬಕರ್ ಮುಬಾರಕ್ (62) ಸ್ವಗೃಹದಲ್ಲಿ ಬುಧವಾರ ನಸುಕಿನ ಜಾವ ನಿಧನರಾದರು.
ಮೃತರು ತಂದೆ, ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸಹಿತ ಅಪಾರ ಬಂಧು-ಬಳಗ ಅಗಲಿದ್ದಾರೆ. ಹೊನ್ನಕಟ್ಟೆ ಕುಳಾಯಿ ಬದ್ರಿಯಾ ಜುಮಾ ಮಸೀದಿಯ ಜಮಾಅತ್ನ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹೊನ್ನಕಟ್ಟೆ ಖಬರಸ್ಥಾನಕ್ಕೆ ಇವರ ಕೊಡುಗೆ ಅಪಾರ. ಇದಲ್ಲದೆ, ಸಮಾಜ ಸೇವೆಯಲ್ಲೂ ಇವರು ಗುರುತಿಸಿಕೊಂಡಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story