ಪಿ. ಧರ್ಮಪಾಲ್
ಪಡುಬಿದ್ರಿ : ಯೂನಿಯನ್ ಬ್ಯಾಂಕ್ನ ಡಿಜಿಎಮ್ ಹಾಗೂ ಮೊಗವೀರ ಬ್ಯಾಂಕ್ನ ವೈಸ್ ಚೇರ್ಮೆನೆ ಆಗಿದ್ದ ಪಿ.ಧರ್ಮಪಾಲ್ (76) ಹೃದಯಾಘಾತದಿಂದ ರವಿವಾರ ಪಡುಬಿದ್ರಿ-ಕಾಡಿಪಟ್ಣದ ಅವರ ಸ್ವಗೃಹ ಗುಡ್ಡೆ ಹೌಸ್ನಲ್ಲಿ ನಿಧನರಾದರು.
ಕಾಡಿಪಟ್ಣ ಮೊಗವೀರ ಮಹಾಸಭಾದ ಮುಂಬೈ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅವರು 9 ಹ್ಯಾಂಡ್ಸ್ ಫೌಂಡೇಶನ್ ಸಕ್ರಿಯ ಸದಸ್ಯರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವಿಭಕ್ತ ಕುಟುಂಬ ಪದ್ಧತಿಯ ಪ್ರಬಲ ಪ್ರತಿಪಾದಕರಾಗಿದ್ದ ಅವರು ಕುಟುಂಬ ಸದಸ್ಯರನ್ನು ಒಗ್ಗೂಡಿಸುವಲ್ಲಿ ಸಫಲರಾಗಿದ್ದರು. ಕೋಟ್ಯಾನ್ ಕಾರ್ ಮೂಲಸ್ಥಾನದ ಮುಂಬೈ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರಿಗೆ ಪುತ್ರಿ, ಪುತ್ರರನ್ನು ಅಗಲಿದ್ದಾರೆ.
Next Story