ಬಿ.ಸಿ.ರೋಡ್ : ಇಲ್ಲಿಗೆ ಸಮೀಪದ ಗೂಡಿನಬಳಿ ನಿವಾಸಿ ಮುಹಮ್ಮದ್ (60) ಅವರು ಹೃದಯಾಘಾತದಿಂದ ಶುಕ್ರವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಐವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಅವರು ಮನೆಯ ಸಮೀಪದಲ್ಲೇ ದಿನಸಿ ಅಂಗಡಿಯನ್ನು ಹೊಂದಿದ್ದು, ವಾರ್ತಾಭಾರತಿ ಪತ್ರಿಕೆ ಮತ್ತು ಹಾಲು ವಿತರಕರಾಗಿದ್ದರು.