ಮಂಗಳೂರು : ಕಾರ್ಮೆಲ್ ಸಂಸ್ಥೆಯ ಧರ್ಮಗುರು ವಂ.ಫೆಲಿಕ್ಸ್ ಮೊರಾಸ್ (72) ಗುರುವಾರ ನಿಧನರಾದರು. ಮೃತರು ಮೂಲತಃ ಕಿನ್ನಿಗೋಳಿಯ ಕಿರೆಂ ನಿವಾಸಿ ಆಗಿದ್ದರು. 1977ರಲ್ಲಿ ಅವರಿಗೆ ಗುರು ದೀಕ್ಷೆ ಲಭಿಸಿತ್ತು. ಆಫ್ರಿಕಾದ ಟಾಂಜಾನಿಯಾದಲ್ಲಿ ಅವರು ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.