ಮೆಹಬೂಬ್ ಖಾನ್ ಸಾಹೆಬ್
ಮೂಡುಬಿದಿರೆ: ಪುತ್ತಿಗೆ ನಿವಾಸಿ ಮೆಹಬೂಬ್ ಖಾನ್ ಸಾಹೆಬ್ (93) ಅವರು ಅಲ್ಪಕಾಲದ ಅಸೌಖ್ಯದಿಂದ ಪುತ್ತಿಗೆಯ ಮನೆಯಲ್ಲಿ ಶನಿವಾರ ಮಧ್ಯಾಹ್ನದ ಸುಮಾರಿಗೆ ನಿಧನರಾದರು.
ಸರಳ ಸಜ್ಜನರಾಗಿದ್ದ ಮೆಹಬೂಬ್ ಖಾನ್ ಅವರು ಮೂಡುಬಿದಿರೆ ಮಾರ್ಕೆಟ್ ನಲ್ಲಿ ಕೈ ಚೀಲ ಅಂಗಡಿ ಹೊಂದಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗು ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತಿಮ ಸಂಸ್ಕಾರವು ಇಂದು ಸಂಜೆಯ ಸುಮಾರಿಗೆ ಪುತ್ತಿಗೆಯ ಖಬರ್ ಸ್ಥಾನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story