ಮೊಹಮ್ಮದ್ ಬಾವ
ಅಜ್ಜಿನಡ್ಕ ನಿವಾಸಿ ಮೊಹಮ್ಮದ್ ಬಾವ (58) ಅವರು ಗುರುವಾರ ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಸೌದಿಯಲ್ಲಿರುವಾಗ ವರ್ಷಗಳ ಕಾಲ ಹಜ್ ಯಾತ್ರಿಕರಿಗೆ ಸ್ವಯಂ ಸೇವಕರಾಗಿ ಸೇವೆಗೈಯುತ್ತಿದ್ದ ಅವರು ಗಲ್ಫ್ ಫ್ರೆಂಡ್ಸ್ ಅಜ್ಜಿನಡ್ಕ' ಚಾರಿಟಿ ಗ್ರೂಪಿನ ಬೆನ್ನುಲುಬಾಗಿ ಅಸಹಾಯಕ ದುರ್ಬಲರ ಬಾಳಿಗೆ ಸಹಾಯ ಹಸ್ತ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
Next Story