ಬಾವ್ಜಾನ್ ಭಾಯ್
ಮಂಗಳೂರು : ಹಳೆಕೋಟೆ ನಿವಾಸಿ, ಪ್ರಸ್ತುತ ಕೋಟೆಕಾರಿನಲ್ಲಿ ವಾಸವಾಗಿದ್ದ ಬಾವ್ ಜಾನ್ ಭಾಯ್ ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ರಾತ್ರಿ ನಿಧನರಾಗಿದ್ದಾರೆ.
ಅವರು ಟೆಸ್ಟ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಷನ್ ಹಳೆಕೋಟೆ ಉಳ್ಳಾಲ ಇದರ ಮಾಜಿ ಅಧ್ಯಕ್ಷರಾಗಿದ್ದರು. ಸಮಾಜ ಸೇವಕರು, ಯುವಕರ ಮಾರ್ಗದರ್ಶಕರಾಗಿಯೂ ಗುರುತಿಸಿಕೊಂಡಿದ್ದರು.
ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಟೆಸ್ಟ್ ಸ್ಪೋರ್ಟ್ಸ್ ಇದರ ಅಧ್ಯಕ್ಷ ಅಬ್ದುಲ್ ರಹ್ಮಾನ್ ಹಳೆಕೋಟೆ ಹಾಗೂ ಸದಸ್ಯರುಗಳು ಸಂತಾಪ ಸೂಚಿಸಿರುತ್ತಾರೆ.
Next Story