ಲಿಬರ್ಟಿ ಉಮರಬ್ಬ
ಮಂಗಳೂರು, ಸೆ.26: ನಗರ ಹೊರವಲಯದ ಸುರತ್ಕಲ್ ನಿವಾಸಿ, ಉದ್ಯಮಿ ಎಸ್.ಲಿಬರ್ಟಿ ಉಮರಬ್ಬ (89) ಇಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಸುರತ್ಕಲ್ ಮುಹಿಯುದ್ದೀನ್ ಜುಮಾ ಮಸ್ಜಿದ್, ಸುರತ್ಕಲ್ ಈದ್ಗಾ ಜುಮಾ ಮಸ್ಜಿದ್, ಸುರತ್ಕಲ್ ಗೌಸಿಯಾ ಕಾಂಪ್ಲೆಕ್ಸ್ ಇದರ ಮೊಕ್ತೇಸರರಾಗಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.
ಮೃತರು ಪತ್ನಿ, ಮೂವರು ಪುತ್ರರು ಮತ್ತು ಮೂವರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story