ಸಯ್ಯದ್ ಹಾಜಿ ಜೋಕಟ್ಟೆ
ಮಂಗಳೂರು, ಜ.22: ಜೋಕಟ್ಟೆ ಗ್ರಾಮದ ನಡುಮನೆ ನಿವಾಸಿ ಬಿ.ಎಂ. ಸಯ್ಯದ್ ಹಾಜಿ ಜೋಕಟ್ಟೆ (62) ಶನಿವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ಇಬ್ಬರು ಪತ್ನಿ, ನಾಲ್ಕು ಮಂದಿ ಪುತ್ರಿಯರು ಮತ್ತು ಒಬ್ಬ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಇತ್ತೀಚಿಗೆ ಸಯ್ಯದ್ ಹಾಜಿಯ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಯ್ಯದ್ ಹಾಜಿ ಶನಿವಾರ ಕೊನೆಯುಸಿರೆಳೆದಿದ್ದಾರೆ. ಪಿಎಫ್ಐ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದ ಸೈಯದ್ ಹಾಜಿ ಅನೇಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.
Next Story