ಶಾಂತಾ ಮನೋಹರ್
ಕಲ್ಯಾಣಪುರ, ಜ.23: ಮಣಿಪಾಲ ಮಾಧವ ಕೃಪ ಶಾಲೆಯಲ್ಲಿ ಸುಮಾರು 35 ವರ್ಷಗಳ ಕಾಲ ಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿದ್ದ ಶಾಂತಾ ಮನೋಹರ್ (73) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಿಧನ ಹೊಂದಿದರು.
ದಿ.ಮನೋಹರ್ ಮಲ್ಪೆ ಇವರ ಧರ್ಮ ಪತ್ನಿಯಾಗಿದ್ದ ಶಾಂತಾ, ಮೃದುಭಾಷಿ ಶಾಂತ ಸ್ವಭಾವದವರಾಗಿದ್ದು, ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷಕಿಯಾಗಿದ್ದರು.
ಇವರು ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story