ಯಶವಂತ ಸರೋಳಿ
ಉಪ್ಪಿನಂಗಡಿ, ಸೆ.7: ಹಿರೇಬಂಡಾಡಿ ಗ್ರಾಪಂ ಮಾಜಿ ಸದಸ್ಯ, ಬಿಜೆಪಿ ಕಾರ್ಯಕರ್ತ ಯಶವಂತ ಸರೋಳಿ (50) ಸೆ.6ರಂದು ರಾತ್ರಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಹಿರೇಬಂಡಾಡಿಯ ಸರೋಳಿ ನಿವಾಸಿಯಾದ ಇವರು ಅನಾರೋಗ್ಯದಿಂದಿದ್ದರು. ನಿನ್ನೆ ಅನಾರೋಗ್ಯ ಉಲ್ಬಣಗೊಂಡಿದ್ದು, ದೇರಳಕಟ್ಟೆಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story