ಡಾ. ಸುರೇಶ್
ಸುರತ್ಕಲ್: ಇಲ್ಲಿನ ಪೇಟೆಯಲ್ಲಿ ಕ್ಲಿನಿಕ್ ಹೊಂದಿದ್ದ ವೈದ್ಯ ಡಾ.ಸುರೇಶ್ ಕುಮಾರ್ ಗುರುವಾರ ನಿಧನರಾದರು.
ಎಲುಬಿನ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು, ಕಳೆದ ವಾರದ ವರೆಗೂ ವೀಲ್ ಚೆಯರ್ ಮೂಲಕ ತನ್ನ ಕ್ಲಿನಿಕ್ಗೆ ಬಂದು ರೋಗಿಗಳಿಗೆ ಔಷಧಿ ನೀಡುತ್ತಿದ್ದರು.
ವಾರದಿಂದ ಅನಾರೋಗ್ಯ ತೀವೃವಾದ ಕಾರಣ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಹೃದಯಾಘಾತಕ್ಕೆ ಒಳಗಾಗಿ ಗುರುವಾರ ರಾತ್ರಿ ಆಸ್ಪತ್ರೆಯಲ್ಲಿ ನಿಧನರಾದರೆಂದು ತಿಳಿದು ಬಂದಿದೆ
ಸುಮಾರು 40 ವರ್ಷಗಳಿಂದ ಡಾ. ಸುರೇಶ್ ಅವರು ಸುರತ್ಕಲ್ ನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
Next Story