ಶುಲ್ಕ ಹೆಚ್ಚಿಸುವುದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚುತ್ತದೆಯೇ? | Vartha Bharati- ವಾರ್ತಾ ಭಾರತಿ

--

ಶುಲ್ಕ ಹೆಚ್ಚಿಸುವುದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚುತ್ತದೆಯೇ?

‘‘ಮನೆಯಲ್ಲಿ ಹುಡುಗ ಜನಿಸಿದರೆ ಇಂಜಿನಿಯರ್, ಹುಡುಗಿ ಜನಿಸಿದರೆ ಡಾಕ್ಟರ್’’

ಎಂಬ ಸುಪ್ರಸಿದ್ಧ ‘ಥ್ರೀ ಈಡಿಯಟ್’ ಚಿತ್ರದ ಈ ಸ್ಲೋಗನ್ ಒಂದು ದಶಕ ಹಿಂದಿನ ಭಾರತೀಯ ಸಮಾಜದ ಹೆಚ್ಚಿನೆಲ್ಲ ಪೋಷಕರ ಮನಃಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಅಂದರೆ ಇಂದು ನನ್ನ ಮಗು ಇಂಜಿನಿಯರ್ ಅಥವಾ ಡಾಕ್ಟರ್ ಆಗ ಬೇಕೆನ್ನುವ ಮನಸ್ಥಿತಿ ಹೊಂದಿರುವ ಪೋಷಕರ ಸಂಖ್ಯೆ ಕಡಿಮೆಯಾಗಿದೆ ಎಂದಲ್ಲ. ಹಾಗೆಂದಾದರೆ ಇಂದು ಕೇವಲ ಕರ್ನಾಟಕದಲ್ಲಿ 192 ಇಂಜಿನಿಯರಿಂಗ್ ಕಾಲೇಜು ಮತ್ತು 56 ಮೆಡಿಕಲ್ ಕಾಲೇಜುಗಳಿರುತ್ತಿರಲಿಲ್ಲ.

ಅದೇನೇ ಇರಲಿ, ಮೆಡಿಕಲ್ ಅಥವಾ ಇಂಜಿನಿಯರಿಂಗ್ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ದೊಡ್ಡ ಕನಸುಗಳನ್ನು ಕಂಡಿರುತ್ತಾರೆ. ಅದಕ್ಕಾಗಿ ಕೋಟಿಗಟ್ಟಲೆ ಸಾಲಮಾಡುತ್ತಾರೆ ಅಥವಾ ತಮ್ಮ ಭೂಮಿ ಮತ್ತು ಚಿನ್ನವನ್ನು ಅಡವಿಟ್ಟು ಕಾಲೇಜು ಶುಲ್ಕ ಪಾವತಿಸುತ್ತಾರೆ. ಅಂತಹ ಬಡ ಮತ್ತು ಮಾಧ್ಯಮ ವರ್ಗದವರಿಗೆ ಸರಕಾರವು ಪ್ರತೀ ವರ್ಷ ಶುಲ್ಕ ಹೆಚ್ಚಿಸಿದರೆ ಅವರು ಅದನ್ನು ಪಾವತಿಸುವುದಾದರೂ ಹೇಗೆ?. ಇನ್ನು ಕೆಲವರು ‘‘ಶುಲ್ಕ ಹೆಚ್ಚಿದೆಯೇ? ಇಟ್ಸ್ ಜಸ್ಟ್ ಓಕೆ’’ಎನ್ನುತ್ತಾರೆ. ಅಂತಹ ಜನರು ಒಮ್ಮೆ ಎಷ್ಟೆಷ್ಟು ಶುಲ್ಕ ಹೆಚ್ಚಿದೆ ಎಂದು ನೋಡಲಿ.

ಹೆಚ್ಚಳಗೊಂಡ ವೈದ್ಯಕೀಯ ಕೋರ್ಸುಗಳ ಶುಲ್ಕ
ಸರಕಾರವು ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರ ಒತ್ತಡಕ್ಕೆ ಮಣಿದು ಪಿಜಿ ವೈದ್ಯಕೀಯ (ಸರಕಾರಿ ಸೀಟುಗಳ) ಕೋರ್ಸುಗಳ ಶುಲ್ಕ 5,06,000 ರೂಪಾಯಿಯಿಂದ 5,81,900 ಅಂದರೆ ಸುಮಾರು 75,900 ರೂಪಾಯಿಯಷ್ಟು, ಕಾಮೆಡ್-ಕೆ ಸೀಟುಗಳ ಶುಲ್ಕ 7,59,000 ರೂಪಾಯಿಯಿಂದ 8,72,850 ರೂಪಾಯಿಗೆ ಅಂದರೆ ಸುಮಾರು 1,13,850 ರೂಪಾಯಿಯಷ್ಟು, ಸ್ನಾತಕೋತ್ತರ ದಂತ ವೈದ್ಯಕೀಯ (ಸರಕಾರಿ ಸೀಟುಗಳ) ಕೋರ್ಸುಗಳ ಶುಲ್ಕ 2,58,750 ರೂಪಾಯಿಯಿಂದ 2,97,562 ರೂಪಾಯಿಗಳಿಗೆ ಅಂದರೆ ಸುಮಾರು 38,812 ರೂಪಾಯಿಯಷ್ಟು ಹೆಚ್ಚಳಮಾಡಲು ನಿರ್ಧರಿಸಿರುವುದರಿಂದ ಡಾಕ್ಟರ್ ಆಗ ಬೇಕೆಂದು ಕನಸು ಕಾಣುತ್ತಿರುವ ಸಾವಿರಾರು ಬಡ ವಿದ್ಯಾರ್ಥಿಗಳ ಭವಿಷ್ಯ ಭಗ್ನವಾಗಿದೆ.

ಹೆಚ್ಚಳಗೊಂಡ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ
ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸರಕಾರಿ ಕೋಟದ ಸೀಟುಗಳ ಶುಲ್ಕವನ್ನು 2019-20ನೇ ಶೈಕ್ಷಣಿಕ ವರ್ಷದಿಂದ 1ನೇ ಸ್ಲ್ಯಾಬಿನ ಸರಕಾರಿ ಕೋಟದ ಸೀಟಿಗೆ ರೂಪಾಯಿ 59,400ನಿಂದ ರೂಪಾಯಿ 65,340ಗೆ (ಅಂದರೆ ಸುಮಾರು ರೂಪಾಯಿ 5,940ರಷ್ಟು) ಅದೇ ರೀತಿ 2ನೇ ಸ್ಲ್ಯಾಬಿನ ಸರಕಾರಿ ಕೋಟದ ಸೀಟಿಗೆ ರೂಪಾಯಿ 53,460ನಿಂದ 2019-20ನೇ ಸಾಲಿಗೆ ರೂಪಾಯಿ 58,806ಕ್ಕೆ (ಅಂದರೆ ಸುಮಾರು ರೂಪಾಯಿ 5,346ರಷ್ಟು) ಅದೇ ರೀತಿ 1ನೇ ಸ್ಲ್ಯಾಬಿನ ಖಾಸಗಿ ಕಾಮೆಡ್-ಕೆ ಸೀಟಿಗೆ ರೂ 1,30,680ನಿಂದ 2019-20ನೇ ಸಾಲಿಗೆ ರೂಪಾಯಿ 1,43,748. (ಅಂದರೆ ಸುಮಾರು ರೂಪಾಯಿ 13,058ರಷ್ಟು) ಅದೇ ರೀತಿ 2ನೇ ಸ್ಲ್ಯಾಬಿನ ಖಾಸಗಿ ಕಾಮೆಡ್-ಕೆ ಸೀಟಿಗೆ ರೂಪಾಯಿ 1,83,600ನಿಂದ 2019-20ನೇ ಸಾಲಿಗೆ ರೂಪಾಯಿ 2,01,960(ಅಂದರೆ ಸುಮಾರು ರೂಪಾಯಿ 18,360ರಷ್ಟು).
ಈ ರೀತಿ ಸರಕಾರವು ಪ್ರತೀ ವರ್ಷ ‘ಅತ್ಯುತ್ತಮ ಗುಣಮಟ್ಟ’ದ ವೈದ್ಯಕೀಯ ಶಿಕ್ಷಣ, ಉತ್ತಮ ಮೂಲ ಸೌಕರ್ಯಗಳಗನ್ನು ಕಲ್ಪಿಸುವ
ನೆಪದಲ್ಲಿ ಶುಲ್ಕ ಹೆಚ್ಚಳಮಾಡುವಾಗ ರಾಜ್ಯದಲ್ಲಿರುವ 16 ವೈದ್ಯಕೀಯ ಕಾಲೇಜುಗಳ ಪೈಕಿ ಕೇವಲ ಒಂದೇ ಒಂದು ಕಾಲೇಜು ರಾಷ್ಟ್ರೀಯ ಸಾಂಸ್ಥಿಕ ರ್ಯಾಂಕಿಂಗ್ ಚೌಕಟ್ಟು (ಎನ್‌ಐ ಆರ್‌ಎಫ್ )ಗೆ ಅರ್ಜಿ ಸಲ್ಲಿಸುವ ಅರ್ಹತೆ ಪಡೆದಿದೆ ಎನ್ನುವುದು ವಿಪರ್ಯಾಸ.
ಅದರಿಂದಾಗಿ ಸರಕಾರವು ಪದೇ ಪದೇ ಈ ರೀತಿಯ ಕುಂಟು ನೆಪ ಮಾಡಿ ಶುಲ್ಕ ಏರಿಸುವುದು ವಿದ್ಯಾರ್ಥಿ ಸಮುದಾಯದ ವಿರುದ್ಧ ಮಾಡುತ್ತಿರುವ ಅನ್ಯಾಯವಾಗಿದೆ.

ಇಂಜಿನಿಯರಿಂಗ್ ಕಾಲೇಜುಗಳ ಬಗ್ಗೆ ಹೇಳಬೇಕಾದರೆ, ಹಲವಾರು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟುಗಳಿಗೆ ಕಡಿಮೆ ಬೇಡಿಕೆಯನ್ನು ಪರಿಗಣಿಸಿ, ಕರ್ನಾಟಕದ ಕನಿಷ್ಠ 35 ಇಂಜಿನಿಯರಿಂಗ್ ಕಾಲೇಜುಗಳು 75 ಕೋರ್ಸುಗಳನ್ನು ಮುಚ್ಚಿವೆ. ಅಖಿಲ ಭಾರತ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜ್ಯುಕೇಷನ್(ಎಐಸಿಟಿಇ)ನಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, 75 ಇಂಜಿನಿಯರಿಂಗ್ ಕೋರ್ಸುಗಳು ಎಐಸಿಟಿಇ ಅನುಮೋದನೆಯನ್ನು 35 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮುಚ್ಚಿವೆ. ಟೆಕ್ನಾಲಜಿ ದಿನನಿತ್ಯ ಅಡ್ವಾನ್ಸ್ ಆಗುತ್ತಿರುವಾಗ, ನಮ್ಮ ದೇಶದಲ್ಲಿ ಇಂಜಿನಿಯರಿಂಗ್ ಕಾಲೇಜುಗಳು ಮುಚ್ಚಿಹೋಗುತ್ತಿರುವ ಕಾರಣಗಳು ಬಹಳ ಸರಳ. ಅದೇನೆಂದರೆ ಔಟ್‌ಡೇಟೆಡ್ ಸಿಲೆಬಸ್, ಔಟ್‌ಡೇಟೆಡ್ ಕರಿಕ್ಯುಲಮ್, ಅನ್ ಹೈರಬಲ್ ಗ್ರಾಜುವೇಟ್ಸ್ (ಕೆಲಸಕ್ಕೆ ಬಾರದ ಪದವೀಧರರು)ಗಳಿಂದಾಗಿ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇನ್ನೂ ವಿಟಿಯು ಎಂಬ ರಾಜ್ಯದ ಕೇಂದ್ರೀಕೃತ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ಮತ್ತು ಅದರ ಅಧೀನದಲ್ಲಿರುವ ಕಾಲೇಜುಗಳಲ್ಲಿ ಸಾವಿರಾರು ಸಮಸ್ಯೆಗಳಿದ್ದರೂ, ಆ ಸಮಸ್ಯೆಗಳು ಸರಿಯಾಗಿ ಪರಿಹಾರ ಕಾಣುತ್ತಿಲ್ಲ ಮತ್ತು ಯಾವುದೇ ರಾಜಕೀಯ ಪಕ್ಷಗಳು ಅಥವಾ ನಾಯಕರು ಇದರ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನುವುದು ವಾಸ್ತವ. ಆದರೆ ಅದರ ವಿರುದ್ಧ ಯಾವ ವಿದ್ಯಾರ್ಥಿ ಸಂಘಟನೆಯೂ ಧ್ವನಿ ಎತ್ತುತ್ತಿಲ್ಲ ಎನ್ನುದು ವಿಪರ್ಯಾಸ.

ಆದರೆ ಇದಕ್ಕಾಗಿ ವಿದ್ಯಾರ್ಥಿಗಳನ್ನು ದೂರುವ ಹಾಗಿಲ್ಲ, ಏಕೆಂದರೆ ರಾಜ್ಯದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸ್ಟೂಡೆಂಟ್ಸ್ ಯೂನಿಯನ್ ಎಲೆಕ್ಷನ್ ನಡೆಸಲಾಗುತ್ತಿಲ್ಲ. ಇನ್ನ್ನು ಇಲ್ಲಿ ಕಾರ್ಯ ಪ್ರವೃತ್ತವಾಗಿರುವ ಸಂಘಟನೆಗಳು ಬಾಲಂಗೋಚಿಯಂತೆ ಕೆಲಸ ಮಾಡುತ್ತಿವೆ. ಒಂದು ವೇಳೆ ತನ್ನ ರಾಜಕೀಯ ಪಕ್ಷವು ತನ್ನ ಸ್ವಾರ್ಥಕ್ಕಾಗಿ ವಿದ್ಯಾರ್ಥಿ ವಿರೋಧಿ ಧೋರಣೆಯನ್ನು ಅನುಸರಿಸಿದರೂ, ಅವರು ಅದನ್ನು ವಿರೋಧಿಸುವುದಿಲ್ಲ. ಇಂತಹ ರಾಜಕೀಯ ಪಕ್ಷಗಳ ಬಾಲದಂತಿರುವ ವಿದ್ಯಾರ್ಥಿ ಸಂಘಟನೆಗಳ ಮೇಲೆ ವಿದ್ಯಾರ್ಥಿ ಸಮುದಾಯವು ಯಾವುದೇ ನಿರೀಕ್ಷೆ ಇಡುವ ಹಾಗಿಲ್ಲ. ಒಂದು ವೇಳೆ ವಿದ್ಯಾರ್ಥಿ ಸಂಘಟನೆಗಳು ಈ ರೀತಿ ಅನ್ಯಾಯಗಳ ವಿರುದ್ಧ ಹೋರಾಟ ಮಾಡಲು ಹೊರಟರೆ, ಉತ್ತರಾಖಂಡ್‌ನ ಬಿಜೆಪಿ ಸರಕಾರವು ಮೆಡಿಕಲ್ ಕಾಲೇಜುಗಳ ಶುಲ್ಕ ಹೆಚ್ಚಿಸಲು ಹೊರಟಾಗ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು, ಶುಲ್ಕ ಹೆಚ್ಚಿಸುವುದನ್ನು ಮರೆತು ಬಿಟ್ಟಂತೆ ಕರ್ನಾಟಕದಲ್ಲೂ ಪ್ರತೀ ವರ್ಷ ಶುಲ್ಕ ಹೆಚ್ಚಿಸುತ್ತಿರಲಿಲ್ಲ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top