ಭಯದಲ್ಲೇ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆ

ಚುನಾವಣಾ ಫಲಿತಾಂಶ ಏನೇ ಬಂದರೂ ಒಂದು ವಿಷಯವಂತೂ ಸ್ಪಷ್ಟ. ಬೀದಿಯಲ್ಲಿರುವ ಕ್ರುದ್ಧರಾದ ಟ್ರಂಪ್ ಪಕ್ಷಪಾತಿ ಜನರು ಟ್ರಂಪ್ ಸೋಲುವುದನ್ನು ಒಪ್ಪುವುದಿಲ್ಲ. ಅಲ್ಲದೆ ಟ್ರಂಪ್‌ರ ಸರ್ವಾಧಿಕಾರಿ ಪ್ರವೃತ್ತಿಯಿಂದಾಗಿ ರಿಪಬ್ಲಿಕನ್/ಡೆಮಾಕ್ರಟಿಕ್ ಪಕ್ಷದ ಎರಡೂ ಕಡೆಗಳಲ್ಲಿ ಅಮೆರಿಕನ್ ರಾಜಕಾರಣವು ಆವೇಶದ, ವಾಗ್ಯುದ್ಧದ ರಾಜಕಾರಣವಾಗಿದೆ. ಉದಾಹರಣೆಗೆ, ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾದಲ್ಲಿ ಅಮೆರಿಕದಲ್ಲಿ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಅವರ ಪತ್ನಿ ಮಿಶೆಲ್ ‘‘ನಿಮ್ಮ ಪ್ರಾಣ ನೀವು ಹಾಕುವ ಮತವನ್ನು ಅವಲಂಬಿಸಿದೆ ಎಂದು ತಿಳಿದು ಮತ ಚಲಾಯಿಸಿ’’ ಎಂದು ಮತದಾರರಿಗೆ ಗಂಭೀರ ಸಲಹೆ ನೀಡಿದ್ದಾರೆ


ಅಮೆರಿಕ ವಿಶ್ವದ ಅತ್ಯಂತ ದೊಡ್ಡ ಅರ್ಥ ವ್ಯವಸ್ಥೆ, ತಂತ್ರಜ್ಞಾನ ರಂಗದ ನಾಯಕ ಹಾಗೂ ಬೃಹತ್ ಮಿಲಿಟರಿ ಪವರ್. ಆದರೆ ಅಲ್ಲಿ ಇದೇ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಎದ್ದು ಕಾಣುತ್ತಿರುವ ಅಂಶವೆಂದರೆ, ಭಯ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಭಯ, ಗುಂಪು ಹಿಂಸೆಯ ಭಯ ಹಾಗೂ ಸಮಾಜವಾದದ ಭಯವನ್ನು ಮತ್ತೆ ಮತ್ತೆ ಹೇಳುತ್ತಿದ್ದಾರಾದರೆ, ಇವರ ಪ್ರತಿಸ್ಪರ್ಧಿಯಾಗಿರುವ ಬಿಡೆನ್/ಹ್ಯಾರಿಸ್ ಡೆಮಾಕ್ರಟರ್‌ರ ಪಕ್ಷ ಕುಸಿಯುತ್ತಿರುವ ಅರ್ಥ ವ್ಯವಸ್ಥೆ, ಜನಾಂಗೀಯ ಬಿಗಿತ, ಅನಿಯಂತ್ರಿತ ಕೋವಿಡ್-19, ವಿದೇಶಿ ಹಸ್ತಕ್ಷೇಪದಿಂದ ನಡೆಯುವ ಕಳ್ಳ ಚುನಾವಣೆ ಮತ್ತು ತಕರಾರು ಮಾಡದೆ ಅಧಿಕಾರದಿಂದ ಕೆಳಗಿಳಿಯಲು ಟ್ರಂಪ್ ನಿರಾಕರಿಸುವ ಭಯ ಇತ್ಯಾದಿ ಭಯಗಳನ್ನು ಉಚ್ಚರಿಸುತ್ತಿದ್ದಾರೆ.

ಒಂದು ವೇಳೆ ಡೆಮಾಕ್ರಟರು ಚುನಾವಣೆಯಲ್ಲಿ ಗೆದ್ದರೂ ಟ್ರಂಪ್ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿ ನ್ಯಾಯಾಲಯಗಳ ಮೊರೆ ಹೋಗಿ ಅಧಿಕಾರ ಹಸ್ತಾಂತರ ವಿಳಂಬವಾಗುವಂತೆ ಮಾಡುತ್ತಾರೆಂದು ಡೆಮಾಕ್ರಟರು ಸರಿಯಾಗಿಯೇ ಹೇಳುತ್ತಿದ್ದಾರೆ.

ರಿಪಬ್ಲಿಕನ್ ಪಕ್ಷದ ಅಧಿವೇಶನದ ಮೊದಲ ದಿನವೇ ತನ್ನ ಅನುಯಾಯಿಗಳಿಗೆ ಟ್ರಂಪ್: ಡೆಮಾಕ್ರಟರು ಚುನಾವಣಾ ಫಲಿತಾಂಶಗಳನ್ನು ಬುಡಮೇಲು ಮಾಡಲು ಕೋವಿಡ್-19 ಸಾಂಕ್ರಾಮಿಕವನ್ನು ಬಳಸಿಕೊಳ್ಳುತ್ತಿದ್ದಾರೆ ಮತ್ತು ಅಂಚೆ ಮತಗಳು ಚುನಾವಣೆಯಲ್ಲಿ ಮೋಸ ನಡೆಯಲು ಕಾರಣವಾಗಬಹುದು. ಚುನಾವಣೆಯಲ್ಲಿ ಅಕ್ರಮ ನಡೆಯದಿದ್ದರೆ ಗೆಲ್ಲುವುದು ತಾನೇ ಎಂದು ಹೇಳಿಕೊಂಡಿದ್ದಾರೆ.

ಈಗಾಗಲೇ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿರುವ ಟ್ರಂಪ್ ಚುನಾವಣೆಗಳ ವಿಶ್ವಾಸಾರ್ಹತೆಯನ್ನು ಕೆಡಿಸಲು ಔಚಿತ್ಯದ ಎಲ್ಲ ಮೇರೆಗಳನ್ನು ಮೀರಿದ್ದಾರೆ. ಅಷ್ಟೇ ಅಲ್ಲ ತನ್ನ ಪಕ್ಷಕ್ಕೆ ಪೂರಕವಾಗಿ ಚುನಾವಣಾ ಫಲಿತಾಂಶ ಬರದಿದ್ದಲ್ಲಿ ತಾನು ಅದನ್ನು ತಿರಸ್ಕರಿಸುವುದಾಗಿ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾರೆ. ಹೀಗೆ ಬೆದರಿಕೆ ಹಾಕುವ ಮೂಲಕ ತನ್ನ ಮುಖ್ಯ ಬೆಂಬಲಿಗ ಮತದಾರರಾಗಿರುವ ಕಡಿಮೆ ಶಿಕ್ಷಿತರಾದ ಹಾಗೂ ಅಷ್ಟೊಂದು ಅನುಕೂಲಸ್ಥರಲ್ಲದ ಕೆಳ ಮಧ್ಯಮ ವರ್ಗದ ಬಿಳಿಯ ಅಮೆರಿಕನ್ನರ ಭಯ ಹಾಗೂ ಆತಂಕಗಳೊಂದಿಗೆ ಆಟವಾಡುತ್ತಿದ್ದಾರೆ. ಹೀಗೆ ಅವರನ್ನು ತುಷ್ಟೀಕರಿಸಿ, ಕಾನೂನು ವ್ಯವಸ್ಥೆ ಹದಗೆಟ್ಟು, ಜನಾಂಗೀಯವಾದ ಮುನ್ನೆಲೆಗೆ ಬಂದಿರುವ ಸಮಯದಲ್ಲಿ ತಾನು ಹಿಂಸೆಯನ್ನು ಏನೇ ಬಂದರೂ ಹತ್ತಿಕ್ಕುವ ಓರ್ವ ಬಲಿಷ್ಠ ನಾಯಕನೆಂದು ಅವರು ತನ್ನನ್ನು ಬಿಂಬಿಸಿಕೊಳ್ಳಬಯಸುತ್ತಾರೆ. ಚುನಾವಣಾ ಫಲಿತಾಂಶ ಏನೇ ಬಂದರೂ ಒಂದು ವಿಷಯವಂತೂ ಸ್ಪಷ್ಟ. ಬೀದಿಯಲ್ಲಿರುವ ಕ್ರುದ್ಧರಾದ ಟ್ರಂಪ್ ಪಕ್ಷಪಾತಿ ಜನರು ಟ್ರಂಪ್ ಸೋಲುವುದನ್ನು ಒಪ್ಪುವುದಿಲ್ಲ. ಅಲ್ಲದೆ ಟ್ರಂಪ್‌ರ ಸರ್ವಾಧಿಕಾರಿ ಪ್ರವೃತ್ತಿಯಿಂದಾಗಿ ರಿಪಬ್ಲಿಕನ್/ಡೆಮಾಕ್ರಟಿಕ್ ಪಕ್ಷದ ಎರಡೂ ಕಡೆಗಳಲ್ಲಿ ಅಮೆರಿಕನ್ ರಾಜಕಾರಣವು ಆವೇಶದ, ವಾಗ್ಯುದ್ಧದ ರಾಜಕಾರಣವಾಗಿದೆ. ಉದಾಹರಣೆಗೆ, ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾದಲ್ಲಿ ಅಮೆರಿಕದಲ್ಲಿ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಅವರ ಪತ್ನಿ ಮಿಶೆಲ್ ‘‘ನಿಮ್ಮ ಪ್ರಾಣ ನೀವು ಹಾಕುವ ಮತವನ್ನು ಅವಲಂಬಿಸಿದೆ ಎಂದು ತಿಳಿದು ಮತ ಚಲಾಯಿಸಿ’’ ಎಂದು ಮತದಾರರಿಗೆ ಗಂಭೀರ ಸಲಹೆ ನೀಡಿದ್ದಾರೆ.

ರಿಪಬ್ಲಿಕನ್ನರು ಖುದ್ದಾಗಿ ಹಾಗೂ ಡೆಮಾಕ್ರಟರು ಕೊರೋನ ಭಯದಿಂದಾಗಿ ಅಂಚೆಯ ಮೂಲಕ ಮತದಾನ ಮಾಡುವ ಸಾಧ್ಯತೆ ಇರುವುದರಿಂದ, ಮತ ಎಣಿಕೆ ವಿಳಂಬವಾಗಿ ಮತದಾನ ಮುಗಿದ ರಾತ್ರಿ ಅಥವಾ ಮರುದಿನ ಚುನಾವಣಾ ಫಲಿತಾಂಶ ಘೋಷಣೆಯಾಗದಿರಬಹುದು. ಇಬ್ಬರು ಅಧ್ಯಕ್ಷೀಯ ಅಭ್ಯರ್ಥಿಗಳಲ್ಲಿ ಯಾರು ಮುಂದಿನ ಅಧ್ಯಕ್ಷ ಎಂದು ತಿಳಿಯಲು ಮತದಾರರು ಕಾಯುತ್ತಾ ಕುಳಿತಿರಬೇಕಾಗಬಹುದು.

ಈ ನಡುವೆ ಟ್ರಂಪ್ ತಾನು ಸೋತರೆ ನ್ಯಾಯಾಲಯಗಳಲ್ಲಿ ಸಮರ ಹೂಡಲು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬೀದಿಗಳಲ್ಲೂ ಅವರ ಹಿಂಬಾಲಕರು ಸಂಘರ್ಷಕ್ಕೆ ಇಳಿಯದಿರುವುದಿಲ್ಲ. ಕಳೆದ ಮೂರುವರೆ ವರ್ಷಗಳಲ್ಲಿ ಟ್ರಂಪ್ ತಾನು ಚುನಾವಣಾ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಸಫಲರಾಗದೆ ತನ್ನ ವಿಶ್ವಾಸಾರ್ಹತೆಯನ್ನು ಕುಗ್ಗಿಸಿ ಕೊಂಡಿದ್ದಾರೆ. ತನ್ನ ಆಡಳಿತವನ್ನು ಸಮರ್ಥಿಸಿಕೊಂಡು ತಾನು ಮತ್ತೆ ಅಧಿಕಾರಕ್ಕೆ ಬಂದಲ್ಲಿ ಏನು ಮಾಡುತ್ತೇನೆಂದು ಹೇಳಿ ಮತದಾರರಿಗೆ ಹೊಸ ಆಶ್ವಾಸನೆಗಳನ್ನು ನೀಡುವ ಸ್ಥಿತಿಯಲ್ಲಿ ಅವರಿಲ್ಲ. ಅವರೀಗ ತನ್ನ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಮತದಾರರಿಗೆ ನೀಡುತ್ತಿರುವುದು ಏನೆಂದರೆ ‘ಅಮೆರಿಕನ್ ಸಮಾಜವಾದಿ’ಗಳು ಹಾಗೂ ‘ಉದಾರವಾದಿ’ಗಳ ನಿಂದನೆ, ಹೀನೈಸುವಿಕೆ.

ಟ್ರಂಪ್ ಅವರ ರಿಪಬ್ಲಿಕನ್ ಅಧಿವೇಶನವು ಡೆಮಾಕ್ರಟಿಕ್ ಅಧಿವೇಶನ ಪಡೆದಷ್ಟು ಟಿವಿ ವೀಕ್ಷಣೆ ಪಡೆಯಲಿಲ್ಲ; ಇದು ಕುಸಿದಿರುವ ಅವರ ಜನಪ್ರಿಯತೆಯ ಸೂಚನೆಯಾಗಿದೆ. ಇದು ಕೂಡ ಟ್ರಂಪ್ ಅವರಿಗೆ ದೊಡ್ಡ ಆತಂಕದ ವಿಷಯ. ಅವರ ಹಿಂಬಾಲಕರು ಎಷ್ಟೊಂದು ಆವೇಶಭರಿತರಾಗಿದ್ದರೆಂದರೆ ಟ್ರಂಪ್ ಅವರಿಗೆ ಮತ ನೀಡದವರೆಂದು ಅನ್ನಿಸಿದಲ್ಲಿ ಅಂತಹವರ ಮೇಲೆ ಅವರು ಕ್ರುದ್ಧರಾಗಬಹುದು. ಒಂದು ಪೂರ್ವಭಾವಿ ಸಮೀಕ್ಷೆ ನಡೆಸಿದಾಗ ತಮ್ಮ ನೆರೆಕರೆಯವರು ಟ್ರಂಪ್‌ಗೆ ಮತ ನೀಡುತ್ತಾರೆಂದು ತಮಗನಿಸಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಗಣನೀಯ ಸಂಖ್ಯೆಯ ಅಮೆರಿಕನ್ನರು ಹೇಳಿದ್ದಾರೆ. ಟ್ರಂಪ್ ಗೆಲ್ಲಬೇಕಾದರೆ ಪ್ರಾಯಶಃ ಈ ಮುಂದಿನ ಘಟನೆಗಳು ನಡೆಯಬೇಕು: ಕೋವಿಡ್-19 ಸಾಂಕ್ರಾಮಿಕ ತೀವ್ರವಾಗಿ ಕಡಿಮೆಯಾಗಬೇಕು, ಒಂದು ಆರ್ಥಿಕ ಪವಾಡ ನಡೆದು ಅರ್ಥವ್ಯವಸ್ಥೆ ಚೇತರಿಸಿಕೊಳ್ಳಬೇಕು ಅಥವಾ ಜೋ ಬಿಡೆನ್ ಒಂದು ಭಾರೀ ತಪ್ಪುಮಾಡಬೇಕು.

ಚುನಾವಣಾ ಫಲಿತಾಂಶ ಘೋಷಣೆಯಾಗುವುದು ವಿಳಂಬವಾದಲ್ಲಿ ವಿಳಂಬದ ಆ ನವೆಂಬರ್ ಹಾಗೂ ಜನವರಿ ತಿಂಗಳ ನಡುವೆ ಟ್ರಂಪ್ ತನ್ನ ಅಧಿಕಾರ ಬಳಸಿ ಎಷ್ಟು ಸಂಪತ್ತನ್ನು ಸಂಪಾದಿಸಬಹುದೋ ಅಷ್ಟನ್ನು ಸಂಪಾದಿಸಿಕೊಳ್ಳುತ್ತಾರೆ. ಹೊಸ ಆಡಳಿತದ ಸರಕಾರಕ್ಕೆ ಎಷ್ಟು ಸಾಧ್ಯವೋ ಅಷ್ಟು ಕೀರ್ತಿ ಹಾನಿಯಾಗುವಂತೆ ಮಾಡಲು ವಿದೇಶಗಳಲ್ಲಿ ವ್ಯಾಪಕವಾಗಿ ಸಂಚಾರ ಮಾಡುತ್ತಾರೆ.

ಕೃಪೆ: deccanherald

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top