--

ಇಂಗಾಲ ತೆರಿಗೆಯ ಲಾಭಗಳು

2060ರೊಳಗಾಗಿ ಚೀನಾ ತಾನು ವಾತಾವರಣಕ್ಕೆ ಹೊರಸೂಸುವ ಇಂಗಾಲದ ಪ್ರಮಾಣವನ್ನು (ಕಾರ್ಬನ್ ಎಮಿಷನ್) ಕಡಿತಗೊಳಿಸಲು ಸೂಕ್ತ ಕ್ರಮಕೈಗೊಳ್ಳುವುದಾಗಿ ಇತ್ತೀಚೆಗೆ ಹೇಳಿದೆ. ಈಗ ವಿಶ್ವದಲ್ಲಿ ವಾತಾವರಣಕ್ಕೆ ಅತ್ಯಂತ ಹೆಚ್ಚು ಇಂಗಾಲವನ್ನು ಬಿಡುಗಡೆ ಮಾಡುತ್ತಿರುವ ದೇಶ ಚೀನಾ. ಹಾಗಾಗಿ ಕಾರ್ಬನ್ ಎಮಿಷನ್‌ಗಳ ವಿಷಯದಲ್ಲಿ ವಿಶ್ವದಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿರುವ ಅಮೆರಿಕ ಹಾಗೂ ಭಾರತದ ಮೇಲೆ ಪರಿಸರವಾದಿಗಳ ಗಮನ ನೆಟ್ಟಿದೆ. ಇಂಗಾಲದ ಮಾಲಿನ್ಯವನ್ನು ಕಡಿಮೆ ಮಾಡಲು ಇರುವ ಒಂದೇ ಮಾರ್ಗವೆಂದರೆ ದೇಶೀಯ ಉತ್ಪಾದನೆ ಹಾಗೂ ಆಮದುಗಳಲ್ಲಿರುವ ಇಂಗಾಲದ ಅಂಶವನ್ನು ಅನುಸರಿಸಿ ಅದಕ್ಕೆ ಒಂದು ಬೆಲೆ ನಿಗದಿಪಡಿಸುವುದು. ಇದು ಇಂಧನ ಹಾಗೂ ಸಾರಿಗೆ ಎರಡಕ್ಕೂ ಅನ್ವಯವಾಗಬೇಕು. ಯುರೋಪಿಯನ್ ಯೂನಿಯನ್ ಆಮದುಗಳ ಮೇಲೆ ಕಾರ್ಬನ್ ತೆರಿಗೆ ವಿಧಿಸುವ ಯೋಜನೆಯನ್ನು ಈಗಾಗಲೇ ಪ್ರಕಟಿಸಿದೆ. ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ ಈ ಪ್ರಸ್ತಾವನೆಯನ್ನು ಅನುಮೋದಿಸಿದೆ. ಆದ್ದರಿಂದ ಹವಾಮಾನ ಬದಲಾವಣೆಗೆ (ಮಾಲಿನ್ಯಕ್ಕೆ) ಮುಖ್ಯ ಮೂಲಗಳಾಗಿರುವ (ಕಲ್ಲಿದ್ದಲಿನಂತಹ) ಇಂಗಾಲ ತೀವ್ರತೆಯ ಇಂಧನಗಳ ಬಳಕೆಯನ್ನು ಕಡಿತಗೊಳಿಸಲು ಇಂಗಾಲ ತೆರಿಗೆ ವಿಧಿಸುವ ನಿಟ್ಟಿನಲ್ಲಿ ಅಭಿವೃದ್ಧಿಶೀಲ ಜಗತ್ತಿನಲ್ಲಿ ಭಾರತ ಮೊದಲ ದೇಶವಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದು.

ದಿಲ್ಲಿಯಲ್ಲಿ ಉಷ್ಣದ ಅಲೆಗಳು, ಚೀನಾದಲ್ಲಿ ನೆರೆಗಳು, ಕ್ಯಾಲಿಫೋರ್ನಿಯಾದಲ್ಲಿ ಅನಿಯಂತ್ರಿತ ಕಾಡ್ಗಿಚ್ಚುಗಳು ಜಾಗತಿಕ ತಾಪಮಾನ ಏರಿಕೆಯಿಂದ ವಿಶ್ವಕ್ಕೆ ಎದುರಾಗಲಿರುವ ಗಂಡಾಂತರಗಳ ಸೂಚನೆಗಳಾಗಿವೆ. 2020ರ ಜಾಗತಿಕ ಹವಾಮಾನ ಅಪಾಯ ಸೂಚ್ಯಂಕದಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ವಿಶ್ವಸಂಸ್ಥೆಯ ಒಂದು ವರದಿಯ ಪ್ರಕಾರ 1998 ಮತ್ತು 2017ರ ನಡುವೆ ಪ್ರಾಕೃತಿಕ ವಿಕೋಪಗಳಿಗೊಳಗಾದ ದೇಶಗಳು 2.9 ಟ್ರಿಲಿಯನ್ ಡಾಲರ್ ಆರ್ಥಿಕ ನಷ್ಟ ಅನುಭವಿಸಿದ್ದವು. ಇದರಲ್ಲಿ ಶೇ. 77 ಹವಾಮಾನ ಬದಲಾವಣೆಯಿಂದಾಗಿ ಸಂಭವಿಸಿದ್ದು. ಅಮೆರಿಕ ಗರಿಷ್ಠ ನಷ್ಟ ಅನುಭವಿಸಿತು. ನಂತರದ ಸ್ಥಾನಗಳು ಅನುಕ್ರಮವಾಗಿ ಚೀನಾ, ಜಪಾನ್ ಮತ್ತು ಭಾರತಕ್ಕೆ ಬಂದಿವೆ.

ಕೋವಿಡ್-19 ಸಾಂಕ್ರಾಮಿಕದ ಬಳಿಕ ಭಾರತವೂ ಸೇರಿದಂತೆ ವಿಶ್ವಾದ್ಯಂತ ವಾಯುಮಾಲಿನ್ಯ ಕಡಿಮೆಯಾಗಿದೆ. ಆದರೆ ಮಾಲಿನ್ಯಕಾರಕ ಚಟುವಟಿಕೆಗಳು ಪುನರಾರಂಭದೊಂದಿಗೆ ಭಾರತದಲ್ಲಿ ಹೊಗೆಯುಗುಳುವಿಕೆಗಳ (ಎಮಿಷನ್ಸ್) ಪ್ರಮಾಣ ಹೆಚ್ಚಾಗಲಿದೆ. ಜಾಗತಿಕ ತಾಪಮಾನ ಏರಿಕೆಯಲ್ಲಿ ಮುಖ್ಯ ಅಪರಾಧಿಯಾಗಿರುವ ಕಾರ್ಬನ್ ಡೈಆಕ್ಸೈಡ್ ಒಂದು ಮಿಲಿಯಕ್ಕೆ 414 ಭಾಗಗಳಷ್ಟು ಇತ್ತು (2020ರ ಆಗಸ್ಟ್‌ನಲ್ಲಿ). 2030ರ ವೇಳೆಗೆ ತನ್ನ ಇಂಧನದ ಶೇ.40ರಷ್ಟನ್ನು ವಿದ್ಯುತ್ ಶಕ್ತಿಗೆ ಬದಲಾಯಿಸಿಕೊಳ್ಳುವುದಾಗಿ ಭಾರತ ಹೇಳಿದೆ. ಈ ನಿಟ್ಟಿನಲ್ಲಿ ಭಾರತ ತೀವ್ರವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಇಂಗಾಲಕ್ಕೆ ಬೆಲೆ ತೆರುವಂತೆ ಮಾಡುವುದು ಅದು ತೆಗೆದುಕೊಳ್ಳಬಹುದಾದ ಒಂದು ಕ್ರಮ. ಹಾಗೆಯೇ ವಿದ್ಯುತ್ ವಾಹಕ ವಾಹನಗಳಿಗೆ ಪ್ರೋತ್ಸಾಹ ಧನ ನೀಡುವುದು ಹಾಗೂ 2020-21ರ ಬಜೆಟ್‌ನಲ್ಲಿ ಪರಿಸರ ತೆರಿಗೆ ವಿಧಿಸುವುದು ಕೂಡ ಸರಕಾರ ತೆಗೆದುಕೊಳ್ಳಬಹುದಾದ ಕ್ರಮಗಳು.

ಕಾರ್ಖಾನೆಗಳು, ಉದ್ಯಮಗಳು ಹೊರ ಹಾಕುವ ಎಮಿಷನ್‌ಗಳಿಗೆ ಒಂದು ಗರಿಷ್ಠ ಮಿತಿಯನ್ನು ಹೇರುವುದು ಅವಶ್ಯಕ. ಈ ನಿಟ್ಟಿನಲ್ಲಿ ಚೀನಾದಲ್ಲಿ ಇಂತಹ ಕಾರ್ಬನ್ ಟ್ರೇಡಿಂಗ್‌ನಲ್ಲಿ ಕೈಗೊಂಡ ಆರಂಭಿಕ ಯೋಜನೆಗಳು ನಿರೀಕ್ಷಿತ ಫಲ ನೀಡಿವೆ. ಎಮಿಷನ್‌ಗಳನ್ನು ಕಡಿತಗೊಳಿಸಲು ಇರುವ ಇನ್ನೊಂದು ದಾರಿ ಕೆನಡ ಮತ್ತು ಸ್ವೀಡನ್‌ನಲ್ಲಿ ಮಾಡಿದಂತೆ ಆರ್ಥಿಕ ಚಟುವಟಿಕೆಗಳ ಮೇಲೆ ಕಾರ್ಬನ್ ತೆರಿಗೆ ವಿಧಿಸುವುದು. ಉದಾಹರಣೆಗೆ ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳ ಬಳಕೆಯ ಮೇಲೆ ತೆರಿಗೆ ವಿಧಿಸುವುದು. ಭಾರತದಲ್ಲಿ ಪ್ರತಿ ಒಂದು ಟನ್ ಕಾರ್ಬನ್ ಎಮಿಷನ್‌ಗಳಿಗೆ ಮೂವತ್ತೈದು ಡಾಲರ್ ಕಾರ್ಬನ್ ತೆರಿಗೆ ವಿಧಿಸಿದಲ್ಲಿ 2030ರ ವೇಳೆಗೆ ಆಗುವಾಗ ಅದು ದೇಶದ ಜಿಡಿಪಿಯ ಶೇ.2ರಷ್ಟು ಆದಾಯ ಉತ್ಪಾದಿಸಬಲ್ಲುದು. ಅಂತರ್‌ರಾಷ್ಟ್ರೀಯ ವ್ಯಾಪಾರದಲ್ಲಿ ಬಹಳ ದೊಡ್ಡ ಗ್ರಾಹಕನಾಗಿರುವ ಭಾರತದಂತಹ ಬೃಹತ್ ಅರ್ಥವ್ಯವಸ್ಥೆಗಳು ಆ ದೇಶಗಳ ಮೇಲೆ ಕಾರ್ಬನ್ ತೆರಿಗೆ ವಿಧಿಸುವಂತೆ ಒತ್ತಡ ಹೇರಬೇಕು. ಅಂತರ್‌ರಾಷ್ಟ್ರೀಯ ವ್ಯಾಪಾರದಲ್ಲಿ ತನ್ನ ಮಿತ್ರರಾಷ್ಟ್ರಗಳೊಂದಿಗೆ ಹವಾಮಾನ ಮೈತ್ರಿ ಏರ್ಪಡಿಸಿಕೊಳ್ಳಲು ಇಂತಹ ಬಲಿಷ್ಠ ಅರ್ಥ ವ್ಯವಸ್ಥೆಗಳು ತಮ್ಮ ರಾಜತಾಂತ್ರಿಕ ಹಾಗೂ ಹಣಕಾಸು ಸಾಮರ್ಥ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು.

ಹವಾಮಾನ ಬದಲಾವಣೆಯಿಂದ ಗರಿಷ್ಠ ತೊಂದರೆಗೊಳ ಗಾಗಿರುವ ದೇಶಗಳಲ್ಲಿ ಭಾರತವೂ ಒಂದು. ಹಾಗಾಗಿ ಕಾರ್ಬನ್ ತೆರಿಗೆ ಹಾಗೂ ಇತರ ದೇಶಗಳ ಮೇಲೆ ಇಂತಹ ತೆರಿಗೆ ಅನುಷ್ಠಾನಗೊಳಿಸಲು ಒತ್ತಡ ತರುವುದರ ಜೊತೆಗೆ ದೇಶದ ಒಳಗೂ ಈ ನಿಟ್ಟಿನಲ್ಲಿ ಮಾರುಕಟ್ಟೆ ಪ್ರೇರಿತ ಕ್ರಮಗಳನ್ನು ತೆಗೆದುಕೊಂಡಲ್ಲಿ ಭವಿಷ್ಯದಲ್ಲಿ ವಾಯು ಮಾಲಿನ್ಯವನ್ನು ಗಣನೀಯವಾಗಿ ಕಡಿತಗೊಳಿಸಲು ಸಾಧ್ಯವಾಗಬಹುದು.

ಕೃಪೆ: the hindu

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top