--

ಪುನಶ್ಚೇತನದ ಕೇಂದ್ರದಲ್ಲಿ ಮಹಿಳೆಯರು

ಕೋವಿಡ್-19ರ ವಿರುದ್ಧದ ಭಾರತದ ಹೋರಾಟ ಒಂದು ನಿರ್ಣಾಯಕ ಸ್ಥಿತಿಗೆ ತಲುಪಿದೆ. ಸರಕಾರ ಇತ್ತೀಚೆಗೆ ತಂದಿರುವ ಆರ್ಥಿಕ ಸುಧಾರಣೆಗಳು ಹಾಗೂ ಉತ್ತೇಜಕ ಪ್ಯಾಕೇಜುಗಳ ಹಿನ್ನೆಲೆಯಲ್ಲಿ ಸರಕಾರದ ಪುನಶ್ಚೇತನ ಕ್ರಮಗಳು ಮಿಲಿಯಗಟ್ಟಲೆ ಭಾರತೀಯರನ್ನು ಆರೋಗ್ಯ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡುವ ಭರವಸೆ ಮೂಡಿದೆ. ಈ ಪುನಶ್ಚೇತನ ಭಾರತದ ಮುಂದೆ ಎರಡು ಸುವರ್ಣಾವಕಾಶಗಳನ್ನಿಟ್ಟಿದೆ: 1. ಪುನಶ್ಚೇತನ ಕ್ರಮಗಳು ಪರಿಸರಸ್ನೇಹಿಯಾಗಿರುವಂತೆ ನೋಡಿಕೊಳ್ಳುವ ಮೂಲಕ ಹವಾಮಾನ ಮಾಲಿನ್ಯವನ್ನು ತಡೆಯುವುದು 2. ದೀರ್ಘ ಕಾಲದಿಂದ ಕಾರ್ಯಗತಗೊಳ್ಳದಿರುವ ಲಿಂಗಸಮಾನತೆ ಪ್ರಶ್ನೆಗಳನ್ನು ಬಗೆಹರಿಸುವುದು.

 ಕೊರೋನ ಸಾಂಕ್ರಾಮಿಕಕ್ಕೆ ದೇಶ ಭಾರೀ ಬೆಲೆ ತೆರಬೇಕಾಗಿ ಬಂದಿದೆ. ಆರೋಗ್ಯ ವ್ಯವಸ್ಥೆಗಳ ಹಾಗೂ ಸಿಬ್ಬಂದಿಯ ಮೇಲೆ ಮಿತಿ ಮೀರಿದ ಹೊರೆ ಬಿದ್ದಿದೆ. ಜನರ ಜೀವನ ಹಾಗೂ ಜೀವನೋಪಾಯಗಳ ಮೇಲೆ ವಿಪರೀತ ಒತ್ತಡ ಬಿದ್ದಿದೆ. ಬಡವರು, ಆದಿವಾಸಿಗಳು, ವಲಸೆ ಕಾರ್ಮಿಕರು, ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಮಹಿಳೆಯರು ಇತರರಿಗಿಂತ ಬಹಳ ಹೆಚ್ಚು ಸಂಕಷ್ಟಕ್ಕೀಡಾಗಿದ್ದಾರೆ. ಇಷ್ಟೇ ಅಲ್ಲದೆ ಹವಾಮಾನ ಬದಲಾವಣೆಯ ಕಾರಣಗಳು ಹಾಗೂ ಪರಿಣಾಮಗಳು ಈ ವರ್ಗದ ಜನರ ಮೇಲೆ ಭಾರೀ ಕಷ್ಟಗಳನ್ನು ಹೇರಿವೆ.

ವಿಶೇಷವಾಗಿ ಮಹಿಳೆಯರು ಶೋಷಣೆ ಹಾಗೂ ಹಿಂಸೆ, ದೌರ್ಜನ್ಯಕ್ಕೆ ಗುರಿಯಾಗಿದ್ದಾರೆ. ವರದಿಯೊಂದರ ಪ್ರಕಾರ 15ರಿಂದ 59ರ ವಯೋಮಾನದ ಮಹಿಳೆಯರು ದುಡಿಯುವುದು ಕಡಿಮೆಯಾಗಿ ಅದು ಶೇ.25.3ಕ್ಕೆ ಇಳಿದಿದೆ. ಇದು ವಿಶ್ವದಲ್ಲೇ ಅತ್ಯಂತ ಕಡಿಮೆ ಮಹಿಳಾ ಶ್ರಮಶಕ್ತಿಯ ಪ್ರತಿಶತವಾಗಿದೆ.
ಕೋವಿಡ್-19 ಪುನಶ್ಚೇತನ ಕಾರ್ಯಕ್ರಮಕ್ಕಾಗಿ ಭಾರತ ಸರಕಾರ 22.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಇದರನ್ವಯ ಸರಿಯಾದ ಹಣಕಾಸು ಹಾಗೂ ಯೋಜನಾ ಕ್ರಮಗಳನ್ನು ಬಳಸಿ ಸಾಮಾಜಿಕ ರಕ್ಷಣೆಯನ್ನು ಬಲಪಡಿಸುವುದು ಒಂದು ಉತ್ತಮ ಆರಂಭಿಕ ಹೆಜ್ಜೆಯಾಗಿದೆ. ಹಸಿರು ಉದ್ಯೋಗಗಳಲ್ಲಿ ಬಂಡವಾಳ ಹೂಡುವುದರಿಂದ ಜನರ ಜೀವನ ಮಟ್ಟ ಸುಧಾರಣೆಯಾಗುತ್ತದೆ. ಜೊತೆಗೆ ನಮ್ಮ ಭೂಮಿ ಇನ್ನಷ್ಟು ಆರೋಗ್ಯಪೂರ್ಣವಾಗುತ್ತದೆ. ಹವಾಮಾನ ಬದಲಾವಣೆಗೆ ಭಾರತ ಹೊಂದಿರುವ ಬದ್ಧತೆಗಳೊಂದಿಗೆ ಪುನಶ್ಚೇತನ ಪ್ಯಾಕೇಜ್‌ಗಳು ತಮ್ಮ ಸಮನ್ವಯ ಸಾಧಿಸಬೇಕಾಗಿದೆ. ಭಾರತ ಮಾಡಲಿರುವ ಹಸಿರು ಹೂಡಿಕೆಗಳು ಅದರ ಕೃಷಿ, ನಗರ ಯೋಜನೆ, ಇಂಧನ/ಶಕ್ತಿ ಹಾಗೂ ಆರೋಗ್ಯ ರಂಗಗಳಲ್ಲಿ ಪ್ರತಿಫಲಿತವಾಗಬೇಕು.

ಮಹಿಳೆಯರು ವಿಶೇಷವಾಗಿ ಸ್ಥಳೀಯ ಹಾಗೂ ಸಮಾಜದ ಅಂಚಿನ ಸಮುದಾಯಗಳಿಗೆ ಸೇರಿದವರು ಹಲವಾರು ರಂಗಗಳಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತಾರೆ. ಕೃಷಿ ಶ್ರಮಿಕ ಶಕ್ತಿಯ ಶೇ. 50ಕ್ಕಿಂತಲೂ ಹೆಚ್ಚು ಹಾಗೂ ಒಟ್ಟು ಉದ್ದಿಮೆದಾರರಲ್ಲಿ ಸುಮಾರು ಶೇ. 14ರಷ್ಟು ಇರುವ ಮಹಿಳೆಯರು ಪರಿಸರ ಹಾಗೂ ಅಸಂಘಟಿತ ಅರ್ಥವ್ಯವಸ್ಥೆಯ ಜೊತೆ ವಿಶೇಷ ರೀತಿಯ ಸಂಬಂಧ ಹೊಂದಿದ್ದಾರೆ. ಅವರ ಕುಟುಂಬಗಳ ಹಾಗೂ ಸಮುದಾಯಗಳ ಬದುಕು ಹಾಗೂ ಜೀವನೋಪಾಯಗಳನ್ನು ಬದಲಿಸುವುದರಲ್ಲಿ ಈ ಸಂಬಂಧ ಬಹಳ ಪ್ರಯೋಜನಕಾರಿಯಾಗಬಹುದು.

ಐಕೆಇಎ ಪ್ರತಿಷ್ಠಾನದಿಂದ ಬೆಂಬಲಿತವಾಗಿರುವ ‘ದಿಶಾ’ ಎಂಬ ಒಂದು ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ ಯೋಜನೆಯು ಒಂದು ಮಿಲಿಯ ಮಹಿಳೆಯರಿಗೆ ಹಾಗೂ ಹುಡುಗಿಯರಿಗೆ ಕೌಶಲ್ಯ ಮತ್ತು ಜೀವನೋಪಾಯದ ಅವಕಾಶಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ. ಮಹಿಳೆಯರಿಗೆ ಹಾಗೂ ದುರ್ಬಲ ಸಮುದಾಯಗಳಿಗೆ ಸ್ಥಳೀಯ ಉದ್ಯೋಗಾವಕಾಶಗಳಲ್ಲಿ ಹೂಡಿಕೆ ಮಾಡುವುದರಿಂದ ಯಾವ ರೀತಿಯ ಲಾಭಗಳಾಗುತ್ತವೆಂಬುದನ್ನು ಈ ಯೋಜನೆ ತೋರಿಸಿಕೊಟ್ಟಿದೆ. ಇಂತಹ ಇನ್ನೊಂದು ಯೋಜನೆ ಸೆಲ್ಫ್ ಎಂಪ್ಲಾಯ್ಡಾ ವಿಮೆನ್ಸ್ ಅಸೋಸಿಯೇಶನ್ ಆ್ಯಂಡ್ ದಿ ಇಲೆಕ್ಟ್ರಾನಿಕ್ ಸೆಕ್ಟರ್ ಸ್ಕಿಲ್ಸ್ ಕೌನ್ಸಿಲ್ ಆಫ್ ಇಂಡಿಯಾ. ಈ ಯೋಜನೆಗೆ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ಬೆಂಬಲ ನೀಡಿದೆ. ಯೋಜನೆಯನ್ವಯ 15,000 ಗ್ರಾಮೀಣ ಮಹಿಳೆಯರಿಗೆ ತರಬೇತಿ ನೀಡಿ ದೂರದ ಹಳ್ಳಿಗಳಲ್ಲಿರುವ ಸೌರಶಕ್ತಿ ಚಾಲಿತ ಪಂಪುಗಳ ನಿರ್ವಹಣೆಯಲ್ಲಿ ಅವರನ್ನು ಟೆಕ್ನೀಷಿಯನ್‌ಗಳನ್ನಾಗಿ ರೂಪಿಸಲಾಗುತ್ತದೆ. ಇದು ಶುದ್ಧವಾದ ಇಂಧನ/ಶಕ್ತಿ ಮೂಲಗಳನ್ನು ಒದಗಿಸುವುದಲ್ಲದೆ ಉತ್ಪಾದನಾ ವೆಚ್ಚಗಳನ್ನು ಕೂಡ ಕಡಿಮೆ ಮಾಡುತ್ತದೆ. ಅಲ್ಲದೆ ನವೀಕರಿಸಬಹುದಾದ ಶಕ್ತಿಗಳ ಬಳಕೆಯನ್ನು ತೀವ್ರಗೊಳಿಸಿರುವುದರಿಂದ ಇಂಗಾಲದ ಮಾಲಿನ್ಯವೂ ಕಡಿಮೆಯಾಗಿ ಬಡ ಮಹಿಳೆಯರಿಗೆ ಬದುಕಲು ಅವಶ್ಯಕವಾದ ಜೀವನೋಪಾಯ ವೃತ್ತಿಗಳನ್ನು ಒದಗಿಸುವುದು ಕೂಡ ಸಾಧ್ಯವಾಗುತ್ತದೆ. ಸರಿಯಾದ ಹಣಕಾಸು ಉತ್ತೇಜನಗಳನ್ನು ಒದಗಿಸುವುದು, ಸಾರ್ವಜನಿಕ ಖಾಸಗಿ ಸಹಭಾಗಿತ್ವವನ್ನು ಪ್ರೋತ್ಸಾಹಿಸುವುದು ಮತ್ತು ಮಹಿಳೆಯರು ಮಾರುಕಟ್ಟೆ ವ್ಯವಹಾರಗಳನ್ನು ನಡೆಸಲು ಅವರಿಗೆ ಸೂಕ್ತ ಅವಕಾಶಗಳನ್ನು ಒದಗಿಸುವುದು ದೇಶದ ಆರ್ಥಿಕ ಪುನಶ್ಚೇತನದಲ್ಲಿ ಬಹಳ ಮುಖ್ಯವಾಗುತ್ತದೆ. ಆಗ ಮಹಿಳೆಯರು ಪುನಶ್ಚೇತನದ ಕೇಂದ್ರಬಿಂದುವಾಗುತ್ತಾರೆ.

 ಕೃಪೆ: thehindu

(ಲೇಖಕರು: ಶೊಕೋ ನೋಡಾ ಭಾರತದಲ್ಲಿ ಯುಎನ್‌ಡಿಪಿಯ ಪ್ರತಿನಿಧಿಯಾಗಿದ್ದಾರೆ. ಅತುಲ್ ಬಗಾಯಿ ಭಾರತದಲ್ಲಿರುವ ವಿಶ್ವಸಂಸ್ಥೆಯ ಪರಿಸರ ಕಚೇರಿಯ ಮುಖ್ಯಸ್ಥರಾಗಿದ್ದಾರೆ)  

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top