ಶ್ರೀಸಾಮಾನ್ಯನ ಗೋಳು ಕೇಳುವವರು ಯಾರು...? | Vartha Bharati- ವಾರ್ತಾ ಭಾರತಿ

--

ಶ್ರೀಸಾಮಾನ್ಯನ ಗೋಳು ಕೇಳುವವರು ಯಾರು...?

ಮಾನ್ಯರೇ,

ಕೆಲವು ತಿಂಗಳುಗಳಿಂದ ಕೊರೋನ ಎಂಬ ಮಹಾಮಾರಿ ಕೊಟ್ಟ ಹೊಡೆತಕ್ಕೆ ಸಿಕ್ಕಿ ನಲುಗಿ ಹೋಗಿದ್ದ ಶ್ರೀಸಾಮಾನ್ಯ, ಇಂದು ದಿನೇ ದಿನೇ ಏರುತ್ತಿರುವ ಬೆಲೆ ಏರಿಕೆಯ ಬಿಸಿಯಿಂದಾಗಿ ಇನ್ನೂ ತತ್ತರಿಸಿ ಹೋಗಿದ್ದಾನೆ. ಅತ್ತ ಪ್ರತಿಯೊಬ್ಬರ ನಿತ್ಯದ ಬಳಕೆಯ ವಸ್ತುಗಳಾದ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಸಿಲಿಂಡರ್‌ಗಳ ಬೆಲೆಗಳು ಗಗನಕ್ಕೇರುತ್ತಿದ್ದರೆ ಇತ್ತ ಶ್ರೀಸಾಮಾನ್ಯನ ದಿನ ನಿತ್ಯದ ಬಳಕೆ ವಸ್ತುಗಳಾದ ದವಸ, ಧಾನ್ಯ, ಹೂ, ಹಣ್ಣು, ತರಕಾರಿ ಹೀಗೆ ಪ್ರತಿ ವಸ್ತುಗಳ ಬೆಲೆಗಳೂ ಕೈಗೆಟುಕದ ರೀತಿಯಲ್ಲಿ ಓಡುತ್ತಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಶ್ರೀಸಾಮಾನ್ಯನ ಪರ ನಿಲ್ಲಬೇಕಾಗಿದ್ದ ಸರಕಾರಗಳು ಅದಾನಿ, ಅಂಬಾನಿಯಂತಹ ಉಳ್ಳವರ ಪರ ನಿಂತು ಮತಕೊಟ್ಟು ಅಧಿಕಾರಕ್ಕೇರಿಸಿದವರ ಬದುಕನ್ನೇ ಬೀದಿಗೆ ತಂದು ನಿಲ್ಲಿಸಿ ಬಿಟ್ಟಿವೆ. ಅತ್ತ ದಿಲ್ಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೇಶಕ್ಕೆ ಅನ್ನ ನೀಡುವ ಅನ್ನದಾತರು ಹಲವು ತಿಂಗಳುಗಳಿಂದ ನ್ಯಾಯಯುತವಾದ ಬೇಡಿಕೆಗಳನ್ನಿಟ್ಟುಕೊಂಡು ಮನೆ-ಮಠಗಳನ್ನು ಬಿಟ್ಟು ಬಂದು ಆ ಕೊರೆವ ಚಳಿ, ಗಾಳಿ, ಮಳೆ, ಬಿಸಿಲು ಯಾವುದನ್ನೂ ಲೆಕ್ಕಿಸದೆ ಹೋರಾಟ ಮಾಡುತ್ತಿದ್ದರೆ ಇತ್ತ ತಾನು ಜನಪರ, ರೈತಪರ ಎಂದು ಹೇಳಿಕೊಂಡು ದೇಶದ ಆಡಳಿತದ ಚುಕ್ಕಾಣಿ ಹಿಡಿದ ಸರಕಾರ ಅದೆಲ್ಲವನ್ನೂ ಕಂಡೂ ಕಾಣದ ಹಾಗೆ ಜಾಣ ಕುರುಡುತನ ಪ್ರದರ್ಶಿಸುತ್ತಾ ತನ್ನ ನಡೆಯನ್ನೇ ಸಮರ್ಥಿಸಿಕೊಂಡು ಬೀಗುತ್ತಿದೆ.

ಇನ್ನು ಈ ಬಗ್ಗೆ ಸರಕಾರವನ್ನು ಪ್ರಶ್ನೆ ಮಾಡಿದರೆ ಅಥವಾ ಸರಕಾರದ ಈ ಕೆಟ್ಟ ನಡೆಯನ್ನು ಖಂಡಿಸಿದರೆ ಅಥವಾ ಟೀಕಿಸಿದರೆ ಅಂತಹವರ ವಿರುದ್ಧ ಸರಕಾರಗಳು ಮುಲಾಜಿಲ್ಲದೆ ಮೊಕದ್ದಮೆ ದಾಖಲಿಸುತ್ತಿವೆ. ಇನ್ನೂ ಮುಂದುವರಿದು ಪ್ರಶ್ನಿಸುವಂತಹವರನ್ನು ಬಂಧನಕ್ಕೂ ಒಳಪಡಿಸಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಪ್ರಶ್ನಿಸುವ ಹಕ್ಕನ್ನೇ ಕಳೆದುಕೊಂಡಿದ್ದಾರೆ. ಸರಕಾರದ ಈ ರೀತಿಯ ಸರ್ವಾಧಿಕಾರಿ ಧೋರಣೆಯಂತೂ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವಂತಿದೆ. ಇದು ಹೀಗೇ ಮುಂದುವರಿದರೆ ದೇಶದ ಶ್ರೀಸಾಮಾನ್ಯನ ಪಾಡೇನು? ಅವನ ಗೋಳನ್ನು ಕೇಳುವವರು ಯಾರು?
ಇನ್ನಾದರೂ ಸರಕಾರಗಳು ಬೇಗ ಎಚ್ಚೆತ್ತುಕೊಂಡು ಶ್ರೀಸಾಮಾನ್ಯನ ಪರ ನಿಂತು ಏರುತ್ತಲಿರುವ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕಿದೆ. ಇಲ್ಲವಾದಲ್ಲಿ ಜನರೇ ಮುಂದಿನ ದಿನಗಳಲ್ಲಿ ಪಾಠ ಕಲಿಸಲಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top