ಬಸರೂರನ್ನು ಶಿವಾಜಿ ಪೋರ್ಚುಗೀಸರಿಂದ ನಿಜವಾಗಿ ಮುಕ್ತಗೊಳಿಸಿದನೇ? | Vartha Bharati- ವಾರ್ತಾ ಭಾರತಿ

--

ಬಸರೂರನ್ನು ಶಿವಾಜಿ ಪೋರ್ಚುಗೀಸರಿಂದ ನಿಜವಾಗಿ ಮುಕ್ತಗೊಳಿಸಿದನೇ?

ಶಿವಾಜಿಯು ಬಸರೂರಿನ ಜನರಿಗೆ ಮತ್ತು ಕೆಳದಿಯ ಅರಸನಿಗೆ ಸಹಾಯ ಮಾಡಿ ಪೋರ್ಚುಗೀಸರನ್ನು ಓಡಿಸಲು ಬಂದಿದ್ದು ನಿಜವೇ ಆಗಿದ್ದರೆ ಅವನು ಬಸರೂರು ನಗರದ ಹಿಂದೂ/ಜೈನ ವ್ಯಾಪಾರಿಗಳನ್ನು ಲೂಟಿ ಹೊಡೆದಿದ್ದು ಯಾಕೆ? ಅಷ್ಟೇ ಅಲ್ಲ ಇದಕ್ಕೆ ವಿರೋಧಿಸಿದ ವ್ಯಾಪಾರಿಗಳನ್ನು ನಿರ್ದಯವಾಗಿ ಹತ್ಯೆ ಮಾಡಿದ್ದು ಯಾಕೆ?


ನಮ್ಮ ಕುಂದಾಪುರ ತಾಲೂಕಿನ ಬಸರೂರನ್ನು 356 ವರ್ಷಗಳ ಹಿಂದೆ ಛತ್ರಪತಿ ಶಿವಾಜಿ ಪೋರ್ಚುಗೀಸರಿಂದ ಮುಕ್ತ ಗೊಳಿಸಿದನೇ? ಅಥವಾ ತಾನೇ ಆ ನಗರದ ವ್ಯಾಪಾರಿಗಳನ್ನು ಮತ್ತು ದೇವಸ್ಥಾನಗಳನ್ನು ಲೂಟಿ ಹೊಡೆದನೇ?. ಒಂದು ಕಾಲದಲ್ಲಿ ಪಶ್ಚಿಮ ಕರಾವಳಿಯಲ್ಲಿ ಗುಜರಾತಿನ ಸೂರತ್ ನಂತರ ನಮ್ಮ ಬಸರೂರೇ ಅತ್ಯಂತ ಶ್ರೀಮಂತ ಅಂತರ್‌ರಾಷ್ಟ್ರೀಯ ಬಂದರಾಗಿತ್ತು. ಅರಬಿ ವ್ಯಾಪಾರಿಗಳು ಇಲ್ಲಿಗೆ ಬಂದು ಅಕ್ಕಿ, ತೆಂಗಿನ ಎಣ್ಣೆ, ಕರಿಮೆಣಸು ಮತ್ತು ಸಂಬಾರ ಪದಾರ್ಥಕೊಂಡು ಹೋಗುತ್ತಿದ್ದರು ಹಾಗೂ ಅರಬಿ ಕುದುರೆಗಳನ್ನು ಭಾರತಿಯರಿಗೆ ಮಾರುತ್ತಿದ್ದರು. ಹಾಗಾಗಿ ಇಲ್ಲಿಯ ಜೈನ/ಬಂಟ/ಕೊಂಕಣಿ ವ್ಯಾಪಾರಿಗಳು ತುಂಬಾ ಶ್ರೀಮಂತರಾಗಿದ್ದರು. ಮೊದಲು ಈ ಪ್ರದೇಶ ಕೆಳದಿಯ ನಾಯಕರ ಅಧೀನದಲ್ಲಿತ್ತು. ಆದರೆ ನಂತರ ಪೋರ್ಚುಗೀಸರು ಇಲ್ಲಿ ಪ್ರಾಬಲ್ಯ ಸ್ಥಾಪಿಸಿ ಇಲ್ಲಿಗೆ ವಿದೇಶದಿಂದ ಬರುವ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡುತ್ತಿದ್ದರು. ಕೆಳದಿಯ ಅರಸನಿಗೆ ಕೊಡುತ್ತಿದ್ದ ತೆರಿಗೆಯನ್ನು ನಿಲ್ಲಿಸಿ ಅದನ್ನು ವ್ಯಾಪಾರಿಗಳು ಪೋರ್ಚುಗೀಸರಿಗೆ ಕೊಡುವ ಸ್ಥಿತಿ ಉಂಟಾಗಿತ್ತು. ಹಾಗಾಗಿ ಕೆಳದಿ ಅರಸ ಶಿವಾಜಿಗೆ ಸಹಾಯ ಮಾಡುವಂತೆ ಕೋರಿದಾಗ ಶಿವಾಜಿ ನಾಲ್ಕು ಸಾವಿರ ಸೈನಿಕರೊಂದಿಗೆ ಗೋಕರ್ಣಕ್ಕೆ ಬರುವ ಯಾತ್ರಾರ್ಥಿಗಳಂತೆ ಮಾರುವೇಷ ಧರಿಸಿ ನೂರಾರು ಸಣ್ಣ ಹಡಗುಗಳಲ್ಲಿ ಸಮುದ್ರ ಮಾರ್ಗದ ಮುಖಾಂತರ ಬಸರೂರಿಗೆ 1665ರ ಫೆಬ್ರವರಿ ತಿಂಗಳ ಎರಡನೇ ವಾರದಲ್ಲಿ ದಾಳಿ ಮಾಡಿ ಪೋರ್ಚುಗೀಸರನ್ನು ಓಡಿಸಿದ್ದಲ್ಲದೆ ಬಸರೂರು ನಗರದ ಶ್ರೀಮಂತ ವ್ಯಾಪಾರಿಗಳನ್ನೆಲ್ಲಾ ಲೂಟಿ ಮಾಡಿದನು. ಜತೆಗೆ ಶಿವರಾತ್ರಿಯ ಪ್ರಯುಕ್ತ ಬಸರೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದಿದ್ದ ಯಾತ್ರಾರ್ಥಿಗಳನ್ನೂ ಬಿಡದೆ ದೇವಸ್ಥಾನವನ್ನೂ ಶಿವಾಜಿ ಲೂಟಿ ಮಾಡಿದನು ಎಂದು ತ್ರಯಂಬಕ್ ಶೇಜ್ವಾಲ್ಕರ್ ಎಂಬ ಮಹಾರಾಷ್ಟ್ರದ ಪ್ರಸಿದ್ಧ ಇತಿಹಾಸ ಸಂಶೋಧಕರೇ ಬರೆದಿರುವರು.

ಬಸರೂರಿನಲ್ಲಿ ಕೊಳ್ಳೆ ಹೊಡೆದ ಸಂಪತ್ತನ್ನೇ ಬಳಸಿ ಶಿವಾಜಿಯು ತದನಂತರ ತನ್ನ ಮರಾಠಾ ಸಾಮ್ರಾಜ್ಯವನ್ನು ವಿಸ್ತರಿಸಿದ್ದು ಮಾತ್ರವಲ್ಲ, ಬಲಾಢ್ಯ ಮೊಘಲರನ್ನು ಎದುರು ಹಾಕಿಕೊಳ್ಳುವಷ್ಟು ದೊಡ್ಡ ಸೈನ್ಯ ಕಟ್ಟಲು ಸಾಧ್ಯವಾಗಿದ್ದು. ಅಷ್ಟೊಂದು ಭಾರೀ ಪ್ರಮಾಣದ ಸಂಪತ್ತು ಆ ಕಾಲದಲ್ಲಿ ಬಸರೂರಿನ ವ್ಯಾಪಾರಿಗಳಲ್ಲಿ ಇತ್ತು. ಶಿವಾಜಿಯು ಬಸರೂರಿನ ಜನರಿಗೆ ಮತ್ತು ಕೆಳದಿಯ ಅರಸನಿಗೆ ಸಹಾಯ ಮಾಡಿ ಪೋರ್ಚುಗೀಸರನ್ನು ಓಡಿಸಲು ಬಂದಿದ್ದು ನಿಜವೇ ಆಗಿದ್ದರೆ ಅವನು ಬಸರೂರು ನಗರದ ಹಿಂದೂ/ಜೈನ ವ್ಯಾಪಾರಿಗಳನ್ನು ಲೂಟಿ ಹೊಡೆದಿದ್ದು ಯಾಕೆ? ಅಷ್ಟೇ ಅಲ್ಲ ಇದಕ್ಕೆ ವಿರೋಧಿಸಿದ ವ್ಯಾಪಾರಿಗಳನ್ನು ನಿರ್ದಯವಾಗಿ ಹತ್ಯೆ ಮಾಡಿದ್ದು ಯಾಕೆ? ಇದೇ ಫೆಬ್ರವರಿ ತಿಂಗಳ 21ಕ್ಕೆ ಶಿವಾಜಿಯ ಹೆಸರಲ್ಲಿ ಬಸರೂರಲ್ಲಿ 356ನೇ ವಾರ್ಷಿಕೋತ್ಸವವನ್ನು ಸಂಘ ಪರಿವಾರದವರು ಆಯೋಜಿಸುತ್ತಿದ್ದಾರೆ. ಶಿವಾಜಿ ನಮ್ಮ ಹಿಂದೂ ಜನರನ್ನೇ ಲೂಟಿ ಹೊಡೆದಿದ್ದು ನಾವು ಸಂಭ್ರಮಿಸುವ ವಿಷಯವೇ? ಒಂದು ವಿಷಯ ಗಮನಿಸಿ, ಶಿವಾಜಿಯ ಜಲ ಸೈನ್ಯದಲ್ಲಿ ಅರ್ಧಕ್ಕಿಂತ ಹೆಚ್ಚು ಸೈನಿಕರು ಆಫ್ರಿಕಾ ಮೂಲದ ಸಿದ್ದಿ ಮುಸ್ಲಿಮರಾಗಿದ್ದರು. ಅವರ ಮೂಲಕವೇ ಶಿವಾಜಿ ಬಸರೂರನ್ನು ಲೂಟಿ ಮಾಡಿಸಿದ್ದು! ಹಾಗಿರುವಾಗ ಶಿವಾಜಿಯ ಲೂಟಿಯನ್ನು ವಿಜೃಂಭಿಸುವ ವಾರ್ಷಿಕೋತ್ಸವ ಆಚರಿಸುವುದು ಸರಿಯೇ? ಇದರ ಹಿಂದೆ ಯಾವ ಕೇಸರಿ ಅಜೆಂಡಾ ಇದೆ?

ಆಗಿನ ಕಾಲದಲ್ಲಿ ಅರಬಸ್ತಾನದಲ್ಲಿ ಭತ್ತ, ಬೇಳೆ, ಎಣ್ಣೆಕಾಳು ಬೆಳೆಯುತ್ತಿರಲಿಲ್ಲ. ಹಾಗಾಗಿ ನಮ್ಮ ಬಸರೂರೇ ಅರಬಸ್ತಾನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ, ಧಾನ್ಯ ಮತ್ತು ತೆಂಗಿನ ಎಣ್ಣೆ ಪೂರೈಸುತ್ತಿದ್ದ ಪ್ರದೇಶವಾಗಿತ್ತು. ಹಾಗಾಗಿ ಅಕ್ಕಿ, ಬೇಳೆ, ಎಣ್ಣೆ ಖರೀದಿಸಲು ನಮ್ಮ ಕರಾವಳಿಗೆ ಬಂದ ಅರಬಿ ವ್ಯಾಪಾರಿಗಳಲ್ಲಿ ಅನೇಕ ಅರಬಿಗಳು ಹಿಂದೂ/ಜೈನ ಧರ್ಮ ಸ್ವೀಕರಿಸಿ ಇಲ್ಲಿಯ ಹೆಣ್ಣನ್ನೇ ಮದುವೆಯಾಗಿ ಇಲ್ಲಿಯೇ ನೆಲೆಸಿದ್ದರು. ಬೊಬ್ಬರ್ಯ ಎಂಬ ತುಳುವ ಭೂತದ ತಾಯಿ ‘ದುಗ್ಗು ಶೆಡ್ತಿ’ ಜೈನಬಂಟಳಾಗಿದ್ದರೆ ತಂದೆ ಸುಲಿಕಲ್ ಮುರವ. ಈತ ಅರಬಿ ವ್ಯಾಪಾರಿಯಾಗಿದ್ದ. ಶಿವಾಜಿ ಹಿಂದೂ ಧರ್ಮದ ರಕ್ಷಕನೇ ಅಥವಾ ಹಿಂದೂಗಳ ಸಂಪತ್ತಿನ ಲೂಟಿಕೋರನೇ ಎಂದು ತಿಳಿಯಬೇಕಾದರೆ ಮಹಾರಾಷ್ಟ್ರದ ಪ್ರಸಿದ್ಧ ಇತಿಹಾಸ ಸಂಶೋಧಕರಾದ ತ್ರಯಂಬಕ್ ಶೇಜ್ವಲ್ಕರ್ ಮತ್ತು ರಾಮ್ ಪುನಿಯಾನಿ ಇವರು ಬರೆದ ಮಾರಾಠಾ ಚರಿತ್ರೆಯನ್ನು ಪ್ರತಿಯೊಬ್ಬರೂ ಓದಲೇ ಬೇಕು. ವಿಪರ್ಯಾಸವೆಂದರೆ ಶಿವಾಜಿಯನ್ನು ಅವನ 53ನೇ ವಯಸ್ಸಿನಲ್ಲಿಯೇ ವಿಷ ಹಾಕಿ ಕೊಂದವರು ಮತ್ತು ಅವನ ಅತ್ಯಂತ ವೀರ ಹಿರಿಮಗ ಸಂಭಾಜಿಯನ್ನು ಮೋಸದಿಂದ ಮೊಘಲರಿಗೆ ಹಿಡಿಸಿ ಕೊಟ್ಟವರು ಶಿವಾಜಿಯ ಮಂತ್ರಿಗಳೇ ಆಗಿದ್ದ ಪೇಶ್ವೆ ಎಂಬ ಚಿತ್ಪಾವಣ್ ಬ್ರಾಹ್ಮಣರು. ಮಂಗಳೂರು- ಉಡುಪಿ-ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈಗಲೂ ದೊಡ್ಡ ಸಂಖ್ಯೆಯಲ್ಲಿ ಚಿತ್ಪಾವಣ್ ಬ್ರಾಹ್ಮಣರು ಹಾಗೂ ‘ಶಿವಾಜಿ ಕ್ಷತ್ರಿಯ’ ಎಂದು ಕರೆದುಕೊಳ್ಳುವ ಮರಾಠಿ ಭಾಷಿಕ ಜನಾಂಗಗಳಿವೆ. ಇವರೆಲ್ಲಾ ಇಲ್ಲಿ ಬಂದು ನೆಲೆಸಿದ್ದು 1665ರಲ್ಲಿ ಶಿವಾಜಿ ಬಸರೂರಿಗೆ ದಾಳಿ ಮಾಡಿದಾಗ ಹಾಗೂ 1796ರಲ್ಲಿ ದ್ವಿತೀಯ ಬಾಜಿರಾವ್ ಪೇಶ್ವೆ ನಮ್ಮ ಅತ್ಯಂತ ಪವಿತ್ರ ಶೃಂಗೇರಿ ಮಠದ ಮೇಲೆ ದಾಳಿ ಮಾಡಿ ಅದನ್ನು ಲೂಟಿ ಹೊಡೆದಾಗ. ಇದೇ ಚಿತ್ಪಾವಣ್ ಬ್ರಾಹ್ಮಣ ಮತ್ತು ಮರಾಠಾ (ಶಿವಾಜಿ ಕ್ಷತ್ರಿಯ) ಜಾತಿಯವರೇ ಈಗ ನಮ್ಮ ಕರಾವಳಿಯ ಸಂಘ ಪರಿವಾರದಲ್ಲಿ ಅತ್ಯಂತ ಹೆಚ್ಚು ಸಕ್ರಿಯರಾಗಿದ್ದು ಕೋಮುದ್ವೇಷ ಸಾಧಿಸುತ್ತಿರುವುದು.

ಶಿವಾಜಿ ಮತ್ತು ಬಾಜಿರಾವ್ ಪೇಶ್ವೆಯ ಸೈನ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಇದ್ದ ತುರ್ಕಿ ಮುಸ್ಲಿಮರಲ್ಲಿ ಹಲವರು ನಮ್ಮ ಕರಾವಳಿಯಲ್ಲಿ ನೆಲೆ ನಿಂತರು. ಅವರೇ ಈಗ ನಮ್ಮ ಜಿಲ್ಲೆಯಲ್ಲಿ ಉರ್ದು ಮಾತನಾಡುವ ಸಾಹೇಬ ಮುಸ್ಲಿಮರು! ಶಿವಾಜಿಯ ಜಲಸೈನ್ಯದಲ್ಲಿ ಶೇ.70 ಮುಸ್ಲಿಮರಿದ್ದರು ಹಾಗೂ ಭೂಸೈನ್ಯದಲ್ಲಿ ಶೇ.30 ಮುಸ್ಲಿಮರಿದ್ದರು. ಶಿವಾಜಿಯ 18 ಅಂಗರಕ್ಷಕರಲ್ಲಿ 11 ಜನರು ಮುಸ್ಲಿಮರಾಗಿದ್ದರು ಹಾಗೂ ದೈಹಿಕವಾಗಿ ಅತಿ ಬಲಾಢ್ಯನಾಗಿದ್ದ ಅಫ್ಝ್‌ಲ್ ಖಾನ್‌ನನ್ನು ಹುಲಿಯ ಉಗುರಿಂದ ಚಾಣಾಕ್ಷತೆಯಿಂದ ಕೊಲ್ಲುವ ಯೋಜನೆ ಶಿವಾಜಿಗೆ ಹೇಳಿಕೊಟ್ಟವನು ಅವನ ಮುಸ್ಲಿಂ ಅಂಗರಕ್ಷಕ. ಶಿವಾಜಿ ಅತ್ಯಂತ ಬುದ್ಧಿವಂತ ಹಾಗೂ ವೀರ ರಾಜನಾಗಿದ್ದ ಎಂಬುದು ಸತ್ಯ. ನಿಜವಾಗಿ ಶಿವಾಜಿ ಎಂದೂ ಮುಸ್ಲಿಂ ದ್ವೇಷಿ ಆಗಿರದಿದ್ದರೂ ಅವನು ಮುಸ್ಲಿಂ ದ್ವೇಷಿಯಾಗಿದ್ದ ಹಾಗೂ ಕೇವಲ ಹಿಂದೂ ಧರ್ಮರಕ್ಷಕನಾಗಿದ್ದ ಎಂಬ ತಪ್ಪುಅಭಿಪ್ರಾಯವನ್ನು ಹಿಂದುತ್ವವಾದಿಗಳು ತಮ್ಮ ಸ್ವಾರ್ಥಕ್ಕಾಗಿ ಜನರಲ್ಲಿ ಮೂಡಿಸಿದ್ದಾರೆ ಅಷ್ಟೇ. ಶಿವಾಜಿಯ ರಾಜ್ಯಾಭಿಷೇಕದ ಸಮಯದಲ್ಲಿ ಬ್ರಾಹ್ಮಣರು ಶಿವಾಜಿಯನ್ನು ಅದೆಷ್ಟು ಅಪಮಾನಕ್ಕೆ ಗುರಿಪಡಿಸಿದ್ದಾರೆ ಎಂಬುದನ್ನು ತಿಳಿಯಬೇಕಾದರೆ ರಾಮ್ ಪುನಿಯಾನಿಯವರ ಪುಸ್ತಕ ಓದಬೇಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top