ಜಾತಿಯ ಹೆಸರಲ್ಲಿ ಬ್ರಾಹ್ಮಣರನ್ನು ತುಳಿಯುವುದು ಎಷ್ಟು ಸರಿ? | Vartha Bharati- ವಾರ್ತಾ ಭಾರತಿ

--

ಜಾತಿಯ ಹೆಸರಲ್ಲಿ ಬ್ರಾಹ್ಮಣರನ್ನು ತುಳಿಯುವುದು ಎಷ್ಟು ಸರಿ?

ಮಾನ್ಯರೇ,

ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಸಮುದಾಯವನ್ನು ಪ್ರತಿನಿಧಿಸುವ ರಾಜಕೀಯ ನಾಯಕರ ಸಂಖ್ಯೆ ಇಳಿಮುಖವಾಗುತ್ತಿದೆ. ಬ್ರಾಹ್ಮಣ ಸಮುದಾಯದ ಸಕಲ ಪ್ರಯೋಜನಗಳನ್ನು ಪಡೆದ ರಾಜಕೀಯ ಪಕ್ಷಗಳು, ಬ್ರಾಹ್ಮಣ ನಾಯಕರು ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ಅಡ್ಡಗಾಲು ಹಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಜಾತಿ ಕಾರಣದಿಂದ ಶೋಷಣೆ ನಡೆಯುತ್ತಿದೆ ಎಂಬ ಆರೋಪವನ್ನು ಎಲ್ಲರೂ ಮಾಡುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಜಾತಿ ಕಾರಣಕ್ಕಾಗಿ ರಾಜಕೀಯವಾಗಿ ಬ್ರಾಹ್ಮಣರನ್ನು ತುಳಿಯುವುದನ್ನು ಸಮರ್ಥಿಸುತ್ತಾರೆ. ಇದು ಎಷ್ಟು ಸರಿ? ಎಲ್ಲ ಅರ್ಹತೆಯಿದ್ದು ಮುತ್ಸದ್ದಿ ನಾಯಕ, ಸಜ್ಜನ ದಿವಂಗತ ಅನಂತಕುಮಾರ್ ಅವರನ್ನು ಒಂದು ಬಲಾಢ್ಯ ಜಾತಿ ಮುಖ್ಯಮಂತ್ರಿಯಾಗದಂತೆ ತಡೆಯಿತು. ಎಲ್ಲ ಅರ್ಹತೆ ಇರುವಾಗಲೂ ಜಾತಿಯ ಒಂದೇ ಒಂದು ಕಾರಣ ಮುಂದೊಡ್ಡಿ ಒಬ್ಬ ಬ್ರಾಹ್ಮಣ ಸಮುದಾಯದ ನಾಯಕನನ್ನು ಮುಖ್ಯಮಂತ್ರಿಯಾಗದಂತೆ ತಡೆಯುವುದು ಎಷ್ಟು ಸರಿ?

ಇಂತಹ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದಿಂದ ಹೊರಹೊಮ್ಮಿರುವ ತೇಜಸ್ವಿ ರಾವ್ ಅವರು ತಮ್ಮ ಅಸ್ಖಲಿತ ಮಾತುಗಾರಿಕೆಯಿಂದ ರಾಜಕೀಯವಲಯದಲ್ಲಿ ಗುರುತಿಸಲ್ಪಟ್ಟರು. ಸಣ್ಣ ವಯಸ್ಸಿನಲ್ಲೇ ಬಿಜೆಪಿಯನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿರುವುದು ಕರ್ನಾಟಕಕ್ಕೇ ಹೆಮ್ಮೆಯ ವಿಷಯ. ರಾಜಕೀಯವಾಗಿ ಬೆಳೆಯುವ ಎಲ್ಲ ಲಕ್ಷಣಗಳಿವೆ. ಆದರೆ ಇತ್ತೀಚೆಗೆ ಅಕ್ರಮ ಬೆಡ್ ದಂಧೆಯ ವಿಷಯದಲ್ಲಿ ಇವರ ವರ್ತನೆಯನ್ನು ಮುಂದಿಟ್ಟು ಮತ್ತೆ ಜಾತಿಯ ಹೆಸರಿನಲ್ಲಿ ದಾಳಿ ನಡೆಸಲಾಗುತ್ತಿದೆ. ತೇಜಸ್ವಿ ಅವರು ಅಕ್ರಮ ದಂಧೆ ಬಹಿರಂಗಗೊಳಿಸಿರುವುದು ಒಂದು ಒಳ್ಳೆಯ ಪ್ರಯತ್ನ. ತನ್ನದೇ ಸರಕಾರ ಆಡಳಿತದಲ್ಲಿದ್ದರೂ ಅವರು ಭ್ರಷ್ಟಾಚಾರವನ್ನು ತನಿಖೆ ಮಾಡಲು ಹಿಂದೆ ಮುಂದೆ ನೋಡಲಿಲ್ಲ. ಇದೇ ಸಂದರ್ಭದಲ್ಲಿ, ಒಂದು ನಿರ್ದಿಷ್ಟ ಸಮುದಾಯದ ಸಿಬ್ಬಂದಿಯನ್ನು ಮುಂದಿಟ್ಟು ಅವರನ್ನು ಕೆಲವರು ದಾರಿ ತಪ್ಪಿಸಿದರು. ತಾನು ಮಾಡದ ತಪ್ಪಿಗೆ ಅವರು ಕ್ಷಮೆಯಾಚನೆ ಮಾಡಬೇಕಾಯಿತು. ಆದರೆ ಅವರ ಮೇಲೆ ನಡೆದಿರುವ ದಾಳಿ ನಿಂತಿಲ್ಲ. ಬ್ರಾಹ್ಮಣ ಸಮುದಾಯದಿಂದ ಪ್ರತಿನಿಧಿಸುವ ಏಕೈಕ ಪ್ರತಿಭಾವಂತ ನಾಯಕನನ್ನು ಚಿವುಟಿ ಹಾಕುವ ಕೃತ್ಯದ ಹಿಂದೆ ಬಿಜೆಪಿಯೊಳಗಿನ ಬಲಿಷ್ಠ ಜಾತಿಯ ಲಾಬಿಗಳು ಕೆಲಸ ಮಾಡುತ್ತಿವೆ. ಇದು ಸಲ್ಲ. ಹಿಂದುತ್ವದ ತಳಹದಿಯ ಮೇಲೆ ನಿಂತಿರುವ ಬಿಜೆಪಿ, ಇದೀಗ ತೇಜಸ್ವಿ ಅವರು ಬ್ರಾಹ್ಮಣ ಎನ್ನುವ ಕಾರಣಕ್ಕಾಗಿ ಅವರು ಬೆಳೆಯುವುದನ್ನು ತಡೆಯಲು ಬಿಜೆಪಿಯೊಳಗಿರುವ ನಾಯಕರೇ ಸಂಚು ಮಾಡುತ್ತಿರುವುದು ವಿಪರ್ಯಾಸವಾಗಿದೆ. ಇದರಿಂದ ಬಿಜೆಪಿಗೆ ಒಳಿತಾಗುವುದಿಲ್ಲ. ಬ್ರಾಹ್ಮಣರು ಹಿಂದು ಧರ್ಮೀಯರೇ ಅಲ್ಲವೇ? ಬ್ರಾಹ್ಮಣ ರಾಜಕಾರಣಿಗಳನ್ನು ಹೊರಗಿಟ್ಟು ಬಿಜೆಪಿಯನ್ನು ಬೆಳೆಸುವುದು ಸಾಧ್ಯವಿಲ್ಲ ಎನ್ನುವುದನ್ನು ಪಕ್ಷದ ಹಿರಿಯರು ಅರ್ಥ ಮಾಡಿಕೊಳ್ಳಬೇಕು. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top