ಆತ್ಮಹತ್ಯೆ; ನಮ್ಮ ಮುಂದಿರುವ ಸವಾಲು | Vartha Bharati- ವಾರ್ತಾ ಭಾರತಿ

--

ಆತ್ಮಹತ್ಯೆ; ನಮ್ಮ ಮುಂದಿರುವ ಸವಾಲು

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಆಗ್ನೇಯ ಏಶ್ಯ ಭೂಭಾಗದಲ್ಲಿನ ಅತ್ಯಂತ ಹೆಚ್ಚು ಆತ್ಮಹತ್ಯೆ ನಡೆಯುವ ದೇಶ ಭಾರತ. ಖಿನ್ನತೆ, ದೀರ್ಘಕಾಲದಿಂದ ಕಾಡುವ ಅನಾರೋಗ್ಯ, ಅಪರಾಧಿ ಪ್ರಜ್ಞೆ, ಆಘಾತ, ಆರ್ಥಿಕ ನಷ್ಟ, ಪರೀಕ್ಷೆಯಲ್ಲಿ ಅನುತ್ತೀರ್ಣತೆ ಮತ್ತು ಪ್ರೀತಿಪಾತ್ರರ ಸಾವು ವ್ಯಕ್ತಿಯೊಬ್ಬ/ಒಬ್ಬಾಕೆ ಆತ್ಮಹತ್ಯೆಗೈಯುವ ನಿರ್ಧಾರ ತೆಗೆದುಕೊಳ್ಳಲು ಕೆಲವು ಮುಖ್ಯ ಕಾರಣಗಳಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ ಪ್ರಕಾರ 2018ರಲ್ಲಿ ಭಾರತದಲ್ಲಿ ಒಟ್ಟು 1,34,516 ಆತ್ಮಹತ್ಯಾ ಪ್ರಕರಣಗಳು ದಾಖಲಾಗಿವೆ. 2017ರಲ್ಲಿ ಆತ್ಮಹತ್ಯೆ ದರ 9.9 ಇತ್ತು, ಅದು 2018ರಲ್ಲಿ 10.2ಕ್ಕೆ ಏರಿತು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 309, ಆತ್ಮಹತ್ಯೆಯ ಪ್ರಯತ್ನ ಒಂದು ಅಪರಾಧ ಎನ್ನುತ್ತದೆ. ಆದರೆ ವ್ಯಕ್ತಿಯೊಬ್ಬ ಯಾವುದೇ ಕಾರಣದಿಂದಾಗಿ ಆತ್ಮಹತ್ಯೆಗೆ ಪ್ರಯತ್ನಿಸಿದರೆ ಆತನಿಗೆ/ಆಕೆಗೆ ವೈದ್ಯಕೀಯ ಮಾನಸಿಕ ಚಿಕಿತ್ಸೆ ಕೊಡಿಸಬೇಕೇ ಹೊರತು ‘‘ಒಂದು ವರ್ಷ (ದಂಡ ಸಹಿತ ಅಥವಾ ದಂಡವಿಲ್ಲದೆ) ಜೈಲುಶಿಕ್ಷೆ’’ ವಿಧಿಸುವುದಲ್ಲ. ತನ್ನ ದಂಡಸಂಹಿತೆಯ ವಿಷಯದಲ್ಲಿ ಭಾರತ ವಸಾಹತುಶಾಹಿ ಪರಂಪರೆಯ ಬಹಳಷ್ಟನ್ನು ಉಳಿಸಿಕೊಂಡಿದೆ. ಕುತೂಹಲದ ವಿಷಯವೆಂದರೆ ಬ್ರಿಟಿಷ್ ಪಾರ್ಲಿಮೆಂಟ್ 1961ರಲ್ಲಿ ಆತ್ಮಹತ್ಯೆ ಕಾಯ್ದೆಯ ಮೂಲಕ ಆತ್ಮಹತ್ಯೆ ಪ್ರಯತ್ನಗಳನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವುದಕ್ಕೆ ಅಂತ್ಯ ಹಾಡಿತ್ತು. ಭಾರತದಲ್ಲಿ 309ನೇ ಸೆಕ್ಷನ್ ಅನ್ನು ರದ್ದುಗೊಳಿಸಲು 1972ರಲ್ಲಿ ರಾಜ್ಯಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಲಾಯಿತು. ಆದರೆ ಸಂಸತ್ ವಿಸರ್ಜನೆಗೊಂಡಿದ್ದರಿಂದ ಅದು ಲೋಕಸಭೆಯಲ್ಲಿ ಅಂಗೀಕೃತವಾಗದೆ ವಿಫಲವಾಯಿತು.

ಆತ್ಮಹತ್ಯೆಯ ಪ್ರಯತ್ನವನ್ನು ಕ್ರಿಮಿನಲ್ ಅಪರಾಧವೆಂದು ವಾದಿಸುವವರ ಹಾಗೂ ಅದನ್ನು ಹಾಗೆ ಪರಿಗಣಿಸಕೂಡದು ಎನ್ನುವವರ ಎರಡು ಗುಂಪುಗಳ ನಡುವಿನ ವಾದ, ಪ್ರತಿವಾದ ಒಂದು ಶತಮಾನದಿಂದ ನಡೆಯುತ್ತಾ ಬಂದಿದೆ ಮೊದಲನೆಯ ಗುಂಪು (1996ರ) ‘ಗ್ಯಾನ್ ಕೌರ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್’ ಪ್ರಕರಣದಲ್ಲಿ ನೀಡಲಾದ ತೀರ್ಪನ್ನು ಉದ್ಧರಿಸಿ ‘‘ಆತ್ಮಹತ್ಯೆ ಪ್ರಾಣದ ಅಸಹಜ ಅಂತ್ಯಗೊಳಿಸುವಿಕೆಯಾದ್ದರಿಂದ, ಅದು ಬದುಕುವ ಹಕ್ಕಿನ ಪರಿಕಲ್ಪನೆಯ ಉಲ್ಲಂಘನೆ’’ ಎಂದು ವಾದಿಸುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ ಇನ್ನೊಂದು ಗುಂಪಿನವರು ಬಾಂಬೆ ಹೈಕೋರ್ಟ್‌ನ (1986ರ) ತೀರ್ಪನ್ನು ಉಲ್ಲೇಖಿಸುತ್ತಾರೆ. ಆ ತೀರ್ಪು ಭಾರತೀಯ ದಂಡ ಸಂಹಿತೆಯ 309ನೇ ಸೆಕ್ಷನ್ ಅಸಾಂವಿಧಾನಿಕ ಎಂದು ಘೋಷಿಸಿತ್ತು. ಆ ತೀರ್ಪು ಹೀಗೆ ಹೇಳಿತ್ತು: ‘‘ಉದಾಹರಣೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯದಲ್ಲಿ ಏನನ್ನೂ ಅಭಿವ್ಯಕ್ತಿಸದಿರುವ ಮತ್ತು ಮೌನವಾಗಿರುವ ಹಕ್ಕು ಕೂಡ ಸೇರಿದೆ... ಅಂದ ಮೇಲೆ ತಾರ್ಕಿಕವಾಗಿ, ಬದುಕುವ ಹಕ್ಕಿನಲ್ಲಿ ಬದುಕದೆ ಇರುವ ಹಕ್ಕು ಅಥವಾ ಇನ್ನೊಬ್ಬರಿಂದ ಬಲಾತ್ಕಾರಪೂರ್ವಕವಾಗಿ ಬದುಕಿಸದೆ ಇರುವ ಹಕ್ಕು ಕೂಡ ಸೇರುತ್ತದೆ... ಮಾನಸಿಕ ಸಮಸ್ಯೆಯಿಂದ ಆತ್ಮಹತ್ಯೆ ಪ್ರಯತ್ನ ಮಾಡುವವರಿಗೆ ಮನೋವೈದ್ಯರಿಂದ ಚಿಕಿತ್ಸೆ ನೀಡಬೇಕೇ ಹೊರತು ಜೈಲು ಕೋಣೆಗಳಲ್ಲಿ ಬಂಧಿಸಿಡುವ ಶಿಕ್ಷೆಯನ್ನಲ್ಲ’’.

2017ರಲ್ಲಿ ಸಂಸತ್ ಮೆಂಟಲ್ ಹೆಲ್ತ್‌ಕೇರ್ ಮಸೂದೆಯನ್ನು ಅಂಗೀಕರಿಸಿತು. ಈ ಕಾಯ್ದೆಯ 115(1) ಸೆಕ್ಷನ್ ಪ್ರಕಾರ ‘‘ಭಾರತೀಯ ದಂಡ ಸಂಹಿತೆಯ 309ನೇ ಸೆಕ್ಷನ್‌ನಲ್ಲಿ ಏನೇ ಹೇಳಲಾಗಿದ್ದರೂ ಆತ್ಮಹತ್ಯೆಗೆ ಪ್ರಯತ್ನಿಸುವ ಯಾವುದೇ ವ್ಯಕ್ತಿ ತೀವ್ರತರವಾದ ಮಾನಸಿಕ ಒತ್ತಡಕ್ಕೆ ಗುರಿಯಾಗಿರುವುದಾಗಿ ಪರಿಗಣಿಸತಕ್ಕದ್ದು ಮತ್ತು ಇಲ್ಲಿ ಉಲ್ಲೇಖಿಸಲಾಗಿರುವ ದಂಡ ಸಂಹಿತೆ ಅಡಿಯಲ್ಲಿ ಆತನ/ಆಕೆಯ ವಿಚಾರಣೆ ನಡೆಸುವಂತಿಲ್ಲ ಹಾಗೂ ಶಿಕ್ಷಿಸುವಂತಿಲ್ಲ.’’ ಆದರೆ ಈ ಕಾನೂನು ಮನೋರೋಗದಿಂದ ನರಳುವವರಿಗೆ ಮಾತ್ರ ಅನ್ವಯಿಸುತ್ತದೆ.

ಒಂದು ವೇಳೆ ತೀವ್ರ ಮಾನಸಿಕ ಒತ್ತಡವೆಂದು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಎಂಬ ಪ್ರಶ್ನೆ ಏಳುತ್ತದೆ. ನಾವು ಅಂತಹ ಪ್ರಕರಣಗಳನ್ನು ವೈದ್ಯಕೀಯ ಕಾನೂನಾತ್ಮಕ (ಮೆಡಿಕೋ ಲೀಗಲ್) ಎಂದು ಪರಿಗಣಿಸಿ ಸಂಬಂಧಿತ ವ್ಯಕ್ತಿಗಳಿಗೆ ಮನೋವೈಜ್ಞಾನಿಕ ಅಥವಾ ಮಾನಸಿಕ ಚಿಕಿತ್ಸೆ ಒದಗಿಸಬೇಕು. ಆತ್ಮಹತ್ಯೆ ಪ್ರಯತ್ನದ ದಿಕ್ಕಿನಲ್ಲಿ ನಾವು ಸದಾ ಧನಾತ್ಮಕ ನಿಲುವು ತೆಗೆದುಕೊಳ್ಳಬೇಕಾಗಿರುವುದರಿಂದ ದಂಡಸಂಹಿತೆಯ 309ನೇ ಸೆಕ್ಷನ್ ಅನ್ನು ಕಿತ್ತು ಹಾಕುವ ಅಥವಾ ರದ್ದುಪಡಿಸುವಂತಹ ಒಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ.

ಕೃಪೆ: TheHindu

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top