ಮಿಶ್ರ ಕಲಿಕೆ ನಿರೀಕ್ಷಿತ ಫಲ ನೀಡಲಾರದು | Vartha Bharati- ವಾರ್ತಾ ಭಾರತಿ

--

ಮಿಶ್ರ ಕಲಿಕೆ ನಿರೀಕ್ಷಿತ ಫಲ ನೀಡಲಾರದು

ಉನ್ನತ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸುವ ಎಲ್ಲ ವಿದ್ಯಾರ್ಥಿಗಳ ಕಲಿಕೆಯ ಶೈಲಿಗಳು ಒಂದೇ ತೆರನಾದವುಗಳು ಹಾಗೂ ಮಿಶ್ರ ಕಲಿಕೆಯ ಕಲಿಕಾ ತಂತ್ರಗಳಿಗೆ ಹೊಂದಿಕೊಳ್ಳಲು ಬೇಕಾಗುವಷ್ಟು ಡಿಜಿಟಲ್ ಸಾಕ್ಷರತೆ ಅವರಿಗಿದೆ ಎಂದು ಯುಜಿಸಿಯ ಸುತ್ತೋಲೆ ಭಾವಿಸುತ್ತದೆ. ಆದರೆ ವಾಸ್ತವ ಬೇರೆಯೇ ಆಗಿದೆ. ಭಾರತದಲ್ಲಿ ಶಿಕ್ಷಣವು ಶಿಕ್ಷಕ-ಕೇಂದ್ರಿತ ವ್ಯವಸ್ಥೆಯಾಗಿದೆ. ಇಂತಹ ವ್ಯವಸ್ಥೆಗೆ ಹೊಂದಿಕೊಂಡಿರುವ ವಿದ್ಯಾರ್ಥಿಗಳು ತುರ್ತಾಗಿ ಕೂಡಲೇ ತಂತ್ರಜ್ಞಾನ ಆಧಾರಿತ ಕಲಿಕೆಗೆ ಸ್ಪಂದಿಸುತ್ತಾರೆಂದು ನಿರೀಕ್ಷಿಸುವುದು ತಪ್ಪಾಗಬಹುದು ಮತ್ತು ಈ ಹೊಸ ನೀತಿಯಿಂದಾಗಿ ಉನ್ನತ ಶಿಕ್ಷಣದಿಂದ ಹಿಂದೆ ಸರಿಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬಹುದು.


ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಯಾವುದೇ ಕೋರ್ಸ್‌ನ ಶೇಕಡಾ 40ರಷ್ಟನ್ನು ಆನ್‌ಲೈನ್‌ನಲ್ಲಿ ಹಾಗೂ ಉಳಿದ ಶೇಕಡಾ ಅರುವತ್ತರಷ್ಟನ್ನು ಆಫ್‌ಲೈನ್‌ನಲ್ಲಿ ಬೋಧಿಸಬೇಕೆಂದು ವಿಶ್ವವಿದ್ಯಾನಿಲಯ ಅನುದಾನ ಆಯೋಗ(ಯುಜಿಸಿ)ದ ಇತ್ತೀಚಿನ ಸುತ್ತೋಲೆಯೊಂದು ಹೇಳುತ್ತದೆ. ‘‘ಈ ಬೋಧನೆ ಹಾಗೂ ಕಲಿಕೆಯ ಮಿಶ್ರ ವಿಧಾನವು ವಿಶ್ವವಿದ್ಯಾನಿಲಯಗಳು ಕಲಿಕೆಯಲ್ಲಿ ಇನ್ನಷ್ಟು ಹೆಚ್ಚು ತೊಡಗುವಂತೆ ಮಾಡುತ್ತದೆ, ಕಲಿಕೆ ಹಾಗೂ ಬೋಧನಾ ಪರಿಕರಗಳನ್ನು ಇನ್ನಷ್ಟು ಹೆಚ್ಚು ನಮನೀಯ (ಫ್ಲೆಕ್ಸಿಬಲ್)ವಾಗಿಸುತ್ತದೆ’’ ಇತ್ಯಾದಿಯಾಗಿ ಹಲವು ಲಾಭಗಳನ್ನು ಈ ಸುತ್ತೋಲೆಯಲ್ಲಿ ಪಟ್ಟಿಮಾಡಲಾಗಿದೆ.

ಮಿಶ್ರ ಕಲಿಕೆಯಿಂದ ಶಿಕ್ಷಕರಿಗೂ ಲಾಭವಿದೆ. ಅದು ಶಿಕ್ಷಕರನ್ನು ‘‘ಕೇವಲ ಜ್ಞಾನ ನೀಡುವವರ ಬದಲಾಗಿ ಓರ್ವ ಕೋಚ್ ಹಾಗೂ ಮಾರ್ಗದರ್ಶಿಯಾಗಿ ಮಾಡುತ್ತದೆ’’ ಎಂದು ಸುತ್ತೋಲೆ ಹೇಳುತ್ತದೆ. ವಿದ್ಯಾರ್ಥಿಗಳ ಮೌಲ್ಯಮಾಪನದಲ್ಲಿ ಕೂಡ ನಮನೀಯತೆ ಸಾಧ್ಯವಾಗುತ್ತದೆಂದು ಅದು ವಾದಿಸುತ್ತದೆ ಆದರೆ ವಾಸ್ತವ ಬೇರೆಯೇ ಆಗಿದೆ.
  ಇತ್ತೀಚಿನ ಉನ್ನತ ಶಿಕ್ಷಣ ಕುರಿತಾದ ಅಖಿಲ ಭಾರತ ಮಟ್ಟದ ಸಮೀಕ್ಷೆಯ ವರದಿ (2019-20)ಹೇಳುವ ಪ್ರಕಾರ ನಮ್ಮ ದೇಶದಲ್ಲಿರುವ 42,343 ಕಾಲೇಜುಗಳ ಪೈಕಿ 60.56 ಶೇಕಡಾ ಕಾಲೇಜುಗಳು ಗ್ರಾಮೀಣ ಪ್ರದೇಶಗಳಲ್ಲಿವೆ ಮತ್ತು 78. 6 ಶೇಕಡಾ ಕಾಲೇಜುಗಳು ಖಾಸಗಿ ಆಡಳಿತಕ್ಕೆ ಒಳಪಟ್ಟಿವೆ. ಈ ಕಾಲೇಜುಗಳು ಮಿಶ್ರ ಕಲಿಕೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವೇ? ಸಮರ್ಥವೇ? ಮತ್ತು ಇಂತಹ ಶಿಕ್ಷಣದ ವೆಚ್ಚ, ಆರ್ಥಿಕ ಹೊರೆ ಎಷ್ಟಾಗಬಹುದು?
ಮೊದಲನೆಯದಾಗಿ, ಬೃಹತ್ ಕಾರ್ಪೊರೇಟ್ ಸಂಸ್ಥೆಗಳು ಮಾತ್ರ ತಂತ್ರಜ್ಞಾನದಲ್ಲಿ ಬಂಡವಾಳ ತೊಡಗಿಸಿ ಇಂತಹ ಮಿಶ್ರ ಕಲಿಕೆಯ ಸೌಲಭ್ಯವನ್ನು ಒದಗಿಸಲು ಸಮರ್ಥವಾದಾವು. ಎರಡನೆಯದಾಗಿ, ಲಭ್ಯ ದತ್ತಾಂಶಗಳ ಪ್ರಕಾರ 2021ರ ಜನವರಿಯ ವೇಳೆಗೆ ಭಾರತದಲ್ಲಿ ಇಂಟರ್‌ನೆಟ್ ಸೌಲಭ್ಯ ಶೇಕಡಾ 45ರಷ್ಟು ಮಾತ್ರ ಇತ್ತು. ಹೀಗಾಗಿ ಮಿಶ್ರ ಕಲಿಕೆಯ ಈ ಯೋಜನೆ ಈಗ ಅಸ್ತಿತ್ವದಲ್ಲಿರುವ ಭೌಗೋಳಿಕ ಹಾಗೂ ಡಿಜಿಟಲ್ ಕಂದಕವನ್ನು ಇನ್ನಷ್ಟು ಹೆಚ್ಚಿಸಿ, ಗ್ರಾಮೀಣ ಪ್ರದೇಶದ ಬಹಳ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳನ್ನು ಶಿಕ್ಷಣ ಸೌಲಭ್ಯ ವಂಚಿತರನ್ನಾಗಿಸುತ್ತದೆ. ಮೂರನೆಯದಾಗಿ, ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾದ ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ, ದೈಹಿಕ ಹಾಗೂ ಆಧ್ಯಾತ್ಮಿಕ ವಿಷಯಗಳಿಗೆ ಮಿಶ್ರ ಕಲಿಕೆಯಲ್ಲಿ ಸಾಕಷ್ಟು ಅವಕಾಶ ದೊರಕುವುದಿಲ್ಲ. ವ್ಯಕ್ತಿತ್ವ ಬೆಳವಣಿಗೆ, ಚಾರಿತ್ರ್ಯ ನಿರ್ಮಾಣ ಹಾಗೂ ಭವಿಷ್ಯ ರೂಪಿಸುವಿಕೆಗೆ ದಾರಿಯಾಗುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವಿನ ಕೊಡುಕೊಳ್ಳುವಿಕೆಯನ್ನು ಮಿಶ್ರ ಕಲಿಕೆ ಸಾಧ್ಯವಾಗಿಸುತ್ತದೆ ಎಂಬುದಕ್ಕೆ ಏನು ಖಾತರಿ ಇದೆ? ಯಾವ ಪುರಾವೆ ಇದೆ? ಅಲ್ಲದೆ, ಉನ್ನತ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸುವ ಎಲ್ಲ ವಿದ್ಯಾರ್ಥಿಗಳ ಕಲಿಕೆಯ ಶೈಲಿಗಳು ಒಂದೇ ತೆರನಾದವುಗಳು ಹಾಗೂ ಮಿಶ್ರ ಕಲಿಕೆಯ ಕಲಿಕಾ ತಂತ್ರಗಳಿಗೆ ಹೊಂದಿಕೊಳ್ಳಲು ಬೇಕಾಗುವಷ್ಟು ಡಿಜಿಟಲ್ ಸಾಕ್ಷರತೆ ಅವರಿಗಿದೆ ಎಂದು ಯುಜಿಸಿಯ ಸುತ್ತೋಲೆ ಭಾವಿಸುತ್ತದೆ. ಆದರೆ ವಾಸ್ತವ ಬೇರೆಯೇ ಆಗಿದೆ. ಭಾರತದಲ್ಲಿ ಶಿಕ್ಷಣವು ಶಿಕ್ಷಕ-ಕೇಂದ್ರಿತ ವ್ಯವಸ್ಥೆಯಾಗಿದೆ. ಇಂತಹ ವ್ಯವಸ್ಥೆಗೆ ಹೊಂದಿಕೊಂಡಿರುವ ವಿದ್ಯಾರ್ಥಿಗಳು ತುರ್ತಾಗಿ ಕೂಡಲೇ ತಂತ್ರಜ್ಞಾನ ಆಧಾರಿತ ಕಲಿಕೆಗೆ ಸ್ಪಂದಿಸುತ್ತಾರೆಂದು ನಿರೀಕ್ಷಿಸುವುದು ತಪ್ಪಾಗಬಹುದು ಮತ್ತು ಈ ಹೊಸ ನೀತಿಯಿಂದಾಗಿ ಉನ್ನತ ಶಿಕ್ಷಣದಿಂದ ಹಿಂದೆ ಸರಿಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬಹುದು.
ಪರಿಸ್ಥಿತಿ ಹೀಗಿರುವಾಗ ಕೆಲವು ಶಿಫಾರಸುಗಳನ್ನು ಮಾಡುವುದು ಸೂಕ್ತವಾಗಬಹುದು. ದೇಶಾದ್ಯಂತ ಇರುವ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಮಾನವಾಗಿ ತಂತ್ರಜ್ಞಾನ ಹಾಗೂ ಬ್ಯಾಂಡ್‌ವಿಡ್ತ್ ಸೌಲಭ್ಯ ಸಿಗುವಂತೆ ಸರಕಾರ ನೋಡಿಕೊಳ್ಳಬೇಕು. ಶಿಕ್ಷಕರಿಗೆ ಬೃಹತ್ ಮಟ್ಟದಲ್ಲಿ ಡಿಜಿಟಲ್ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಮಿಶ್ರ ಕಲಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾದಲ್ಲಿ ಶಿಕ್ಷಕ-ವಿದ್ಯಾರ್ಥಿಗಳ ದಾಮಾಶಯವನ್ನು ಸೂಕ್ತವಾಗಿ ಮರುಹೊಂದಿಸಬೇಕು. ಇದಕ್ಕಾಗಿ ಬೃಹತ್ ಸಂಖ್ಯೆಯಲ್ಲಿ ಶಿಕ್ಷಕರ ನೇಮಕಾತಿ ನಡೆಯಬೇಕಾಗಬಹುದು. ಇದರೊಂದಿಗೆ ಪಠ್ಯಕ್ರಮದ ವಿನ್ಯಾಸವನ್ನು ವಿಕೇಂದ್ರೀಕರಣ ಗೊಳಿಸಬೇಕು. ಈ ಎಲ್ಲಾ ನಿಟ್ಟಿನಲ್ಲಿ ನೀತಿ ನಿರೂಪಣೆಯಲ್ಲಿ ಹೆಚ್ಚಿನ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡಬೇಕು. ಶಾಲಾ ಮಟ್ಟದಲ್ಲಿ ಕೂಡ ಪಠ್ಯಕ್ರಮವನ್ನು ಆಮೂಲಾಗ್ರವಾಗಿ ಬದಲಾಯಿಸುವ ಕುರಿತು ಕೂಡ ಸರಕಾರ ಚಿಂತನೆ ನಡೆಸಬೇಕು.

ಕೃಪೆ: TheHindu

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top