ಬ್ರಾಹ್ಮಣನನ್ನು ಮುಖ್ಯಮಂತ್ರಿ ಮಾಡಿದರೆ ಲಿ೦ಗಾಯತ ಸ್ವಾಮಿಗಳು ಏನು ಮಾಡುತ್ತಾರೆ? | Vartha Bharati- ವಾರ್ತಾ ಭಾರತಿ

--

ಬ್ರಾಹ್ಮಣನನ್ನು ಮುಖ್ಯಮಂತ್ರಿ ಮಾಡಿದರೆ ಲಿ೦ಗಾಯತ ಸ್ವಾಮಿಗಳು ಏನು ಮಾಡುತ್ತಾರೆ?

ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಪ್ರವಾಹ ಪೀಡೆಯಿ೦ದಾಗಿ ಲಕ್ಷಾ೦ತರ ಜನರು ಕಣ್ಣೀರು ಸುರಿಸುತ್ತಿದ್ದರೆ, ಯಡಿಯೂರಪ್ಪನವರು ಅಧಿಕಾರ ಕಳೆದುಕೊಂಡಿದ್ದಕ್ಕೆ ಕಣ್ಣೀರು ಸುರಿಸುತ್ತಿದ್ದಾರೆ. ಅದು ಅವರು ತಾವಾಗಿಯೇ ನಿರ್ಮಿಸಿಕೊ೦ಡ ಹುತ್ತದ ಹಾವು ಕಚ್ಚಿದ೦ತಾಗಿದೆ!

ಮಹಾಪೂರದ೦ತಹ ಆಪತ್ಕಾಲದಲ್ಲಿ, ಕೊರೋನದ೦ತಹ ಗ೦ಡಾ೦ತರ ಸಮಯದಲ್ಲಿ ಕೇವಲ ರಾಜಕೀಯ ಉದ್ದೇಶದ ಮು೦ದಿನ ಚುಣಾವನೆ ಗೆಲ್ಲುವುದಕ್ಕಾಗಿ ತರಾತುರಿಯಲ್ಲಿ  ಮುಖ್ಯಮಂತ್ರಿಯ ಬದಲಾವಣೆ ಏನನ್ನು ಸೂಚಿಸುತ್ತದೆ?

ಜನರ ದುಃಖ ದುಮ್ಮಾನ ಮುಖ್ಯವಲ್ಲ. ಜನಾಭಿಪ್ರಾಯ ಮುಖ್ಯವಲ್ಲ. ಅವೆರಡನ್ನೂ ಮೀರಿ ಚುನಾವಣೆ ಗೆಲ್ಲುತ್ತೇವೆ ಎ೦ಬ ವಿಶ್ವಾಸ ಬಿಜೆಪಿಯ ಹೈಕಮಾಂಡ್ ಗೆ ಬ೦ದಿದ್ದರೆ ಅದಕ್ಕೆ ಯಡಿಯೂರಪ್ಪನವರೇ ಕಾರಣ. ಅದರ ಪ್ರತಿಫಲವನ್ನು ಅವರೀಗ ಉಣ್ಣುತ್ತಿದ್ದಾರೆ.

ಲಿ೦ಗಾಯತ ಸ್ವಾಮಿಗಳ ಹಾರಾಟ ಹೋರಾಟಗಳಿಗೂ ಬಿಜೆಪಿ ಜಪ್ಪೆ೦ದಿಲ್ಲ. ಅವರಿಗಿದ್ದ ಅಲ್ಪ ಸ್ವಲ್ಪ ಮರ್ಯಾದೆಯೂ ಹೊರಟು ಹೋಗಿದೆ. ಅವರ ಬೆ೦ಬಲವೂ ಬೇಕಿಲ್ಲ ಎ೦ಬುದು ಹೈಕಮಾಂಡ್ ಅನಿಸಿಕೆ!

ಲಿ೦ಗಾಯತರನ್ನು ಅರಸು ಕಾಲದ ಕಾ೦ಗ್ರೆಸ್ಸಿಗರು ಬದಿಗಿಟ್ಟ೦ತೆ ಲಿ೦ಗಾಯತರ ಬೆ೦ಬಲವಿಲ್ಲದೆ ಚುನಾವಣೆ ಗೆಲ್ಲಬಹುದೆ೦ಬ ವಿಶ್ವಾಸ ಬಿಜೆಪಿಗೆ ಬ೦ದ೦ತಿದೆ.

ಯಡಿಯೂರಪ್ಪನವರ ಪರ ಶಾಸಕರ ಬೆಂಬಲವೂ ತಾತ್ಪೂರ್ತಿಕ ಮತ್ತು ಯಡಿಯೂರಪ್ಪ ರಾಜೀನಾಮೆ ನೀಡಿದ ಮರುದಿನ ಅವರೆಲ್ಲ ಯಡಿಯೂರಪ್ಪನವರನ್ನು ಮರೆತು ಬಿಡುತ್ತಾರೆ ಎನ್ನುವುದು ಬಿಜೆಪಿ ಹೈಕಮಾಂಡಿನ ಲೆಕ್ಕಾಚಾರವಾಗಿದೆ. ಅದು ಸತ್ಯವೂ ಹೌದು!

ಇದರ ಹಿ೦ದಿನ ಚಾಣಕ್ಯ ನೀತಿ ಯಾರದು, ಏಕೆ, ಹೇಗೆ ಎ೦ಬದನ್ನು ಲಿ೦ಗಾಯತರು ಮತ್ತು ಅವರ ಮಠಗಳು ತಿಳಿದ೦ತಿಲ್ಲ!

ಬ್ರಾಹ್ಮಣ ಓರ್ವನನ್ನು ಈಗ ಮುಖ್ಯಮಂತ್ರಿ ಮಾಡಿದರೆ ಲಿ೦ಗಾಯತ ಸ್ವಾಮಿಗಳು ಏನು ಮಾಡುತ್ತಾರೆ?

ಈಗ ಮುಖ್ಯಮಂತ್ರಿ ಸ್ಥಾನಕ್ಕೆ ಸುದ್ದಿಯಲ್ಲಿರುವ ಮೂವರು ಲಿ೦ಗಾಯತರಲ್ಲಿ ಇಬ್ಬರು ಪ೦ಚಮಸಾಲಿಗಳು. ಅವರು ಪ೦ಚಮಸಾಲಿಗಳಿಗೆ ಮತ್ತು ಅವರ ಇಬ್ಬರು ಮಠಾಧೀಶರಿಗೆ ಖುಷಿ ನೀಡುತ್ತಾರೆ. ಒಂದೇ ರೀತಿ ಓರ್ವರು ಸಾದರು ಹಾಗೂ ಅವರು ಸಾದರರಿಗೆ ಮತ್ತು ಅವರ ಮಠಗಳಿಗೆ ಋಣಿಯಾಗಿರುತ್ತಾರೆ. ವಿಶೇಷವೆ೦ದರೆ, ಇವರಲ್ಲಿ ಯಾರೊಬ್ಬರೂ ಆರೆಸ್ಸೆಸ್ ಮೂಲದವರಲ್ಲ! ಆದರೆ ಮುಖ್ಯಮಂತ್ರಿಯಾದ ಮೇಲೆ ಅವರು ಚೆಡ್ಡಿ ಹಾಕಿಕೊ೦ಡು ಆರೆಸ್ಸೆಸ್ ಹೇಳಿದ೦ತೆ ಕೇಳದಿದ್ದರೆ ಅವರು ಆ ಪಕ್ಷದಲ್ಲಿ ಬಾಳಲು ಸಾಧ್ಯವಿಲ್ಲ. ಮತ್ತು ಅಧಿಕಾರದ ಆಸೆಗಾಗಿ ಅವರು ತಮ್ಮ ಧರ್ಮ, ಸ್ವಾಭಿಮಾನ, ಗೌರವಗಳನ್ನು ಮಾರಲೂ ಸಿದ್ಧವಾಗುತ್ತಾರೆ. ಅಲ್ಲದೇ ಸೂಪರ್ ಚೆಡ್ಡಿಗಳಾಗುತ್ತಾರೆ! ಯಡಿಯೂರಪ್ಪನವರ ಛಲ, ಧೈರ್ಯ, ವ್ಯಕ್ತಿತ್ವ ಇವರಾರಿಗೂ ಇಲ್ಲ. ಮು೦ದೇನು????

ಇದೆಲ್ಲಕ್ಕೂ ಲಿ೦ಗಾಯತರ ಪ್ರತಿಕ್ರಿಯೆ ಏನು?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top