‘ಕರ್ನಾಟಕ ರಾಜ್ಯ ಅಲೈಡ್ ಹೆಲ್ತ್ ಕಮಿಷನ್’ ಕೂಡಲೇ ರೂಪಿಸಿ | Vartha Bharati- ವಾರ್ತಾ ಭಾರತಿ

--

ಹೀಗೊಂದು ಮನವಿ

‘ಕರ್ನಾಟಕ ರಾಜ್ಯ ಅಲೈಡ್ ಹೆಲ್ತ್ ಕಮಿಷನ್’ ಕೂಡಲೇ ರೂಪಿಸಿ

ಪ್ರಸ್ತುತ ಕರ್ನಾಟಕದಲ್ಲಿ ಪ್ರತೀ ವರ್ಷ ಸುಮಾರು 15,000ದಷ್ಟು ಬಿಎಸ್ಸಿ ಮತ್ತು ಎಂಎಸ್ಸಿ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಪೂರ್ಣಗೊಳಿಸಿ ಅಲೈಡ್ ಹೆಲ್ತ್ ಸಯನ್ಸ್ ಪದವಿಯನ್ನು ಪಡೆಯುತ್ತಿದ್ದಾರೆ. ಅಲೈಡ್ ಹೆಲ್ತ್ ಸಯನ್ಸ್ ಅಂದರೆ ಲಾಬ್ ಟೆಕ್ನೀಷಿಯನ್, ವೈದ್ಯಕೀಯ ಚಿತ್ರಣ ತಂತ್ರಜ್ಞಾನ, ವಿಕಿರಣ ಚಿಕಿತ್ಸೆ ತಂತ್ರಜ್ಞಾನ, ಅರಿವಳಿಕೆ ತಂತ್ರಜ್ಞಾನ, ಆಪರೇಷನ್ ಥಿಯೇಟರ್ ತಂತ್ರಜ್ಞಾನ, ಮೂತ್ರಪಿಂಡದ ಡಯಾಲಿಸೀಸ್ ತಂತ್ರಜ್ಞಾನ, ಕಾರ್ಡಿಯಾಕ್ ಟೆಕ್ನಾಲಜಿ, ಪರ್ಪ್ಯೂಷನ್ ಟೆಕ್ನಾಲಜಿ, ಉಸಿರಾಟದ ಆರೈಕೆ ತಂತ್ರಜ್ಞಾನ, ಆಪ್ಟೊಮೆಟ್ರಿ ಮುಂತಾದ 53ರಷ್ಟು ಕೋರ್ಸುಗಳನ್ನು NAAC, NABH ಮತ್ತು NABLಗಳೆಂಬ ರಾಷ್ಟ್ರೀಯ ಸಂಸ್ಥೆಗಳಿಂದ ಅಂಗೀಕಾರ ಪಡೆದು ಕೆಲವು ಕಾಲೇಜುಗಳು ನಡೆಸುತ್ತಿವೆ. ವಿದ್ಯಾರ್ಥಿಗಳು ಈ ಕೋರ್ಸುಗಳಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ, ಮಣಿಪಾಲ, ಜೆಎಸ್‌ಎಸ್, ನಿಟ್ಟೆ ಮತ್ತು ಯೆನೆಪೋಯ ಮುಂತಾದ ವಿಶ್ವವಿದ್ಯಾನಿಲಯಗಳಿಂದ ಪದವಿಯನ್ನು ಪಡೆಯುತ್ತಿದ್ದಾರೆ.

ಒಳ್ಳೆಯ ವಿಶ್ವವಿದ್ಯಾನಿಲಯ, ಕಾಲೇಜುಗಳು ಮತ್ತು ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಶುಲ್ಕವನ್ನು ಭರಿಸಿ ಪದವಿಯನ್ನು ಪೂರ್ಣಗೊಳಿಸಬಹುದು ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಕರ್ನಾಟಕಕ್ಕೆ ಆಕರ್ಷಿತರಾಗುತ್ತಿದ್ದಾರೆ. ಅಂತೆಯೇ ತಮ್ಮ ತಮ್ಮ ರಾಜ್ಯಗಳಲ್ಲಿ ಉದ್ಯೋಗ, ಒಳ್ಳೆಯ ಸಂಬಳ ಮತ್ತು ವಿದೇಶಗಳಲ್ಲಿನ ಉದ್ಯೋಗ ಪದವೀಧರರ ಕನಸಾಗಿರುತ್ತದೆ.

ಅಲೈಡ್ ಹೆಲ್ತ್ ಪದವೀಧರರಿಗೆ ಕರ್ನಾಟಕದಲ್ಲಿ ಸರಕಾರಿ ಉದ್ಯೋಗ ಸಿಗಲು ಯಾವುದೇ ಅಡ್ಡಿಯಿಲ್ಲ. ಆದರೆ ಕರ್ನಾಟಕ ರಾಜ್ಯದ ಹೊರಗೆ ಮತ್ತು ವಿದೇಶಗಳಲ್ಲಿ ಉದ್ಯೋಗ ಸಿಗಲು ಕರ್ನಾಟಕದಲ್ಲಿ ಕಲಿತ ವಿದ್ಯಾರ್ಥಿಗಳು ಎಂಬ ರೀತಿಯಲ್ಲಿ ರಾಜ್ಯ ಸರಕಾರದ ಮಾನ್ಯತೆ ಹೊಂದಿರುವ ಸರಕಾರಿ ಮಂಡಳಿಯಿಂದ ನೋಂದಣಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಇಂತಹ ಸರಕಾರಿ ಮಂಡಳಿಯನ್ನು ರಾಜ್ಯ ಸರಕಾರವು ಇದುವರೆಗೆ ಸ್ಥಾಪಿಸಿಲ್ಲ.

2020ಕ್ಕಿಂತ ಮೊದಲು ಅಂದರೆ ಆರು ತಿಂಗಳುಗಳ ಮೊದಲು ಖಾಸಗಿ ಮಂಡಳಿಗಳ ನೋಂದಣಿ ಪ್ರಮಾಣ ಪತ್ರ ಇದ್ದರೆ ವಿದೇಶಗಳಲ್ಲಿ ಉದ್ಯೋಗಕ್ಕೆ ಅವಕಾಶಗಳಿದ್ದವು, ಈ ಕಾರಣದಿಂದ ಕರ್ನಾಟಕ ಸರಕಾರವು ಅಧಿಕೃತ ಮಂಡಳಿಯನ್ನು ಸ್ಥಾಪಿಸಿರಲಿಲ್ಲ ಎಂಬುದು ಊಹೆಯಾಗಿದೆ.

ಆರು ತಿಂಗಳುಗಳಿಂದ ಹೊರ ರಾಜ್ಯ ಮತ್ತು ವಿದೇಶಗಳಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರಮಾಣ ಪತ್ರಗಳನ್ನು ಪರಿಶೀಲಿಸುವ ಡಾಟಾ ಫ್ಲೋ ಸಂದರ್ಭದಲ್ಲಿ ಸರಕಾರಿ ಮಾನ್ಯತೆಯ ನೋಂದಣಿ ಕಡ್ಡಾಯ ಎಂಬ ಕಾರಣ ಹೇಳಿ ತಿರಸ್ಕರಿಸಲಾಗುತ್ತಿದೆ. ಈ ಪರಿಸ್ಥಿತಿಯು ಅನೇಕ ವಿದೇಶಿ ಉದ್ಯೋಗ ಆಕಾಂಕ್ಷಿಗಳು ಮತ್ತು ಅವರ ಕುಟುಂಬಗಳ ಕನಸನ್ನು ನುಚ್ಚು ನೂರು ಮಾಡುತ್ತಿದೆ. ಸರಕಾರಿ ಮಂಡಳಿಯ ಅನುಪಸ್ಥಿತಿಯಲ್ಲಿ ನಮ್ಮ ದೇಶದಲ್ಲಿ ಸಿಗುವ ಅಲ್ಪವೇತನದಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗುವ ಕಾಲ ಇನ್ನೂ ಬಹುದೂರವಿಲ್ಲ ಎಂಬುದು ಸತ್ಯ.

ಈ ಸಂದರ್ಭದಲ್ಲಿ ‘ರಾಷ್ಟ್ರೀಯ ಅಲೈಡ್ ಹೆಲ್ತ್ ಕೇರ್ ಪ್ರೊಫೆಷನಲ್ ಕಮಿಷನ್ ಕಾಯ್ದೆ 2021’ಕ್ಕೆ ಕಳೆದ ಮಾರ್ಚ್ ತಿಂಗಳಲ್ಲಿ ರಾಷ್ಟ್ರಪತಿ ಅಂಕಿತದೊಂದಿಗೆ ರೂಪುರೇಷೆ ನೀಡಲಾಯಿತು. ಈ ಕಾಯ್ದೆಯ ಪ್ರಕಾರ ಆರು ತಿಂಗಳುಗಳ ಒಳಗೆ ಕೇಂದ್ರ ಮತ್ತು ರಾಜ್ಯ ಸರಕಾರ ‘ಅಲೈಡ್ ಹೆಲ್ತ್ ಕಮಿಷನ್’ ಎಂಬ ಮಂಡಳಿಗಳನ್ನು ಸ್ಥಾಪಿಸಿ ಅಲೈಡ್ ಹೆಲ್ತ್ ಪದವೀಧರರಿಗೆ ನೋಂದಣಿ ಪ್ರಮಾಣ ಪತ್ರವನ್ನು ನೀಡಬೇಕು.

ಮಂಡಳಿಯು ರೂಪುಗೊಂಡರೆ ಬಿಎಸ್ಸಿ ಮತ್ತು ಎಂಎಸ್ಸಿ ಪದವೀಧರರಿಗೆ ಮಂಡಳಿಯ ನೋಂದಣಿ ಪ್ರಮಾಣ ಪತ್ರ, ಹೊರರಾಜ್ಯಗಳ ಉದ್ಯೋಗಾವಕಾಶಗಳು, ವಿದೇಶಗಳಲ್ಲಿ ಒಳ್ಳೆಯ ಉದ್ಯೋಗಾವಕಾಶಗಳು ಸಿಗಲಿವೆ.

ಆದರೆ ಸರಕಾರದ ನಿಧಾನಗತಿಯ ವ್ಯವಹಾರಗಳು ನಮ್ಮನ್ನು ಚಿಂತೆಗೀಡು ಮಾಡಿವೆ. ನಮ್ಮ ಹಕ್ಕುಗಳು ಮತ್ತು ಕೋವಿಡ್ ಎಂಬ ಮಹಾಮಾರಿಯ ಅವಧಿಯಲ್ಲಿ ನಮ್ಮ ಜೀವವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸಿದ ಪ್ರತಿಯೊಬ್ಬ ಅಲೈಡ್ ಹೆಲ್ತ್ ಆರೋಗ್ಯ ಸೇವಕರ ಅವಗಣನೆ ಸರಿಯಲ್ಲ.

ನಿಮಗೆಲ್ಲರಿಗೂ ತಿಳಿದಿರುವಂತೆ ಈ ಕೋವಿಡ್ ಕಾಲದಲ್ಲಿ ಹಗಲು ರಾತ್ರಿ ಎಂದು ನೋಡದೆ ಕೆಲಸ ಮಾಡಿದ ಆರೋಗ್ಯ ಸೇವಕರನ್ನು ನೀವು ನೋಡಿರಬಹುದು. ಪ್ರತಿಯೊಬ್ಬ ರೋಗಿಯ ಜೀವ ಉಳಿಸುವ ಪ್ರಯತ್ನದಲ್ಲಿ ಅಲೈಡ್ ಹೆಲ್ತ್ ಪದವೀಧರರು ಸರಕಾರಿ ಆಸ್ಪತ್ರೆಗಳ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರುತ್ತಾರೆ.

ಆದ್ದರಿಂದ ಕರ್ನಾಟಕ ಸರಕಾರದ ಅಧೀನದಲ್ಲಿ ಆದಷ್ಟು ಬೇಗ ‘ಕರ್ನಾಟಕ ರಾಜ್ಯ ಅಲೈಡ್ ಹೆಲ್ತ್ ಕಮಿಷನ್’ ಎಂಬ ಮಂಡಳಿಯನ್ನು ರೂಪಿಸಿ ನಮಗೆ ನೋಂದಣಿ ಪ್ರಮಾಣ ಪತ್ರ ಒದಗಿಸಬೇಕಾಗಿ ರಾಜ್ಯದ ಮಂತ್ರಿಗಳಲ್ಲಿ ಮತ್ತು ಅಧಿಕೃತ ಸರಕಾರಿ ಅಧಿಕಾರಿಗಳಲ್ಲಿ ನಾವು ಬೇಡಿಕೊಳ್ಳುತ್ತಿದ್ದೇವೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top