ಬೆಲೆಯೇರಿಕೆಯ ವಿರುದ್ಧ ಜನಾಂದೋಲನ ಸಾಧ್ಯವೇ? | Vartha Bharati- ವಾರ್ತಾ ಭಾರತಿ

--

ಬೆಲೆಯೇರಿಕೆಯ ವಿರುದ್ಧ ಜನಾಂದೋಲನ ಸಾಧ್ಯವೇ?

‘ಆತ್ಮನಿರ್ಭರ’ ಘೋಷಣೆಯ, ಖಾಸಗೀಕರಣ ಕೇಂದ್ರಿತ ಆರ್ಥಿಕ ನೀತಿಯ ಈ ಕೋವಿಡ್ ಕಷ್ಟದ ದಿನಗಳಲ್ಲಿ, ಜನರ ದಿನಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ನಿರಂತರವಾಗಿ ಏರುತ್ತಲೇ ಇವೆ. ಇವುಗಳ ಮೇಲೆ ಇದ್ದ ಕೇಂದ್ರ ಮತ್ತು ರಾಜ್ಯಸರಕಾರಗಳ ನಿಯಂತ್ರಣವನ್ನು ಸದ್ದಿಲ್ಲದಂತೆ ತೆಗೆದುಹಾಕಲಾಗಿದೆ ಅಥವಾ ಅದು ಇದ್ದರೂ ಇಲ್ಲದಂತೆ ಇದೆ. ಹೆಚ್ಚು ಪ್ರಚಾರ ಸಿಗುವ ಪೆಟ್ರೋಲ್ ಮತ್ತು ಡೀಸೆಲ್‌ಗಳ ಬೆಲೆಗಳು ಏರುತ್ತಿರುವುದನ್ನು ಮಾಧ್ಯಮಗಳು ಯಾರದ್ದೋ ಸಮಸ್ಯೆ ಎಂಬಂತೆ ವರದಿ ಮಾಡುತ್ತಿವೆ. ಮೂಲ ಬೆಲೆ ಕೇವಲ 35 ರೂ. ನಷ್ಟು ಮಾತ್ರವೇ ಇದ್ದರೂ ತೆರಿಗೆಗಳು ಸೇರಿ ಜನರು ನೇರವಾಗಿ ಮತ್ತು ಪರೋಕ್ಷವಾಗಿ ತೆರಬೇಕಾದ ಬೆಲೆ 100 ರೂ.ಗಳನ್ನು ದಾಟಿದೆ. ಎಷ್ಟೇ ಬೆಲೆ ಹೆಚ್ಚಾದರೂ ಬಳಕೆಯನ್ನು ಬಿಡಲಾಗದ, ಸರಕಾರವನ್ನು ಶಪಿಸಿಕೊಂಡಾದರೂ ಕೊಂಡುಕೊಳ್ಳುವ ಹೆಂಡ, ಸಿಗರೇಟು ಮುಂತಾದವುಗಳ ಪಟ್ಟಿಗೆ ಡೀಸೆಲ್ ಪೆಟ್ರೋಲ್‌ಗಳೂ ಈಗ ಸೇರ್ಪಡೆಯಾಗಿಬಿಟ್ಟಿವೆ. ಹೀಗಾಗಿ ಇವು ಜನ ಸಾಮಾನ್ಯರ ಶಕ್ತಿಯನ್ನು ಬಲವಂತವಾಗಿ ಬಸಿದುಕೊಂಡು ಸರಕಾರಗಳಿಗೆ ಆದಾಯದ ಅಮೃತವನ್ನು ಕೊಡುವ ಕಾಮಧೇನುಗಳಾಗಿವೆ. ಜಿಎಸ್‌ಟಿ ಇರಲಿ ಅಥವಾ ವ್ಯಾಟ್ ಇರಲಿ ತೆರಿಗೆಗಳ ಸಿಂಹಪಾಲು ಕೇಂದ್ರ ಸರಕಾರಕ್ಕೆ ಹೋಗುತ್ತದೆ. ಅನೇಕ ಕಾರಣಗಳಿಂದಾಗಿ, ಜನರಿಂದ ಚುನಾಯಿತರಾದ ಜನಪ್ರನಿಧಿಗಳಾಗಲಿ, ಅಧಿಕಾರದಲ್ಲಿರುವ ಮತ್ತು ಇಲ್ಲದ ಪಕ್ಷಗಳಾಗಲಿ ಬೆಲೆಯೇರಿಕೆಯ ಬಗ್ಗೆ ನಿಜವಾಗಿ ಗಮನ ಹರಿಸುತ್ತಿಲ್ಲ. ಬೆಲೆಯೇರಿಕೆಯ ವಿರುದ್ಧ ವಿರಳವಾಗಿ ನಡೆಯುವ ಪ್ರತಿಭಟನೆಗಳು ಕೇವಲ ಸಾಂಕೇತಿಕ ಅಥವಾ ಶುಷ್ಕ ಆಚರಣೆಗಳ ಮಟ್ಟಕ್ಕೆ ಇಳಿದಿದ್ದು ಸರಕಾರಗಳ ಜನವಿರೋಧಿ ನೀತಿಗಳನ್ನು ಬದಲಾಯಿಸಲು ಬೇಕಾದ ಒತ್ತಡವನ್ನು ಸೃಷ್ಟಿಸುವಷ್ಟು ಪರಿಣಾಮಕಾರಿಯಾಗಿಲ್ಲ. ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಏನು ಮಾಡಬಹುದು?

 ಪೆಟ್ರೋಲ್ ಮತ್ತು ಡೀಸೆಲ್‌ಗಳೂ ಸೇರಿದಂತೆ ಯಾವುದೇ ವ್ಯಾಪಾರದಲ್ಲಿ ವ್ಯಾಪಾರಿ-ಗಿರಾಕಿ, ಬೇಡಿಕೆ-ಪೂರೈಕೆ ಎಂಬ ಎರಡು ಅಂಗಗಳಿವೆ. ವ್ಯಾಪಾರಿಗಳು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಎಷ್ಟೇ ಪ್ರಬಲರಾಗಿದ್ದರೂ, ಜನಸಾಮಾನ್ಯರಾದ ಗಿರಾಕಿಗಳು ಎಷ್ಟೇ ನಿರ್ಬಲರು ಅಥವಾ ಅಸಹಾಯಕರಾಗಿದ್ದರೂ ಕೊಳ್ಳುವವರಿಲ್ಲದೆ ಕೇವಲ ಮಾರುವವರಿಂದ ವ್ಯಾಪಾರ ನಡೆಯದು. ವ್ಯಾಪಾರ ನಡೆಯದೆ ಲಾಭಗಳಾಗಲಿ, ತೆರಿಗೆಗಳಾಗಲಿ ಹುಟ್ಟುವುದಿಲ್ಲ. ಅಂದರೆ, ವ್ಯಾಪಾರಿಗಳಿಗೆ ಲಾಭ ಬರಲು, ಅವರೊಂದಿಗೆ ಕೈಗೂಡಿಸಿರುವ ಸರಕಾರಗಳಿಗೆ ತೆರಿಗೆಗಳು ಸೇರಲು ಜನರು ನಿರಂತರವಾಗಿ ಕೊಳ್ಳುತ್ತಿರಬೇಕು. ಹೀಗಾಗಿ, ಸದ್ಯಕ್ಕೆ ಜನರ ಕೈಯಲ್ಲಿರುವ ‘ಗಿರಾಕಿ ಶಕ್ತಿ’ ಅಂದರೆ ಬಳಕೆದಾರ ಶಕ್ತಿಯನ್ನು ಬಳಸಿ ಬೆಲೆಯೇರಿಕೆಯನ್ನು ಎದುರಿಸಬೇಕು. ಅಂದರೆ ಕೊಳ್ಳುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಅಥವಾ ಕಡಿಮೆ ಮಾಡಬೇಕು. ಸಾಧ್ಯವಾದ ಕಡೆಗಳಲ್ಲಿ ಕೊಳ್ಳುವುದನ್ನೇ ನಿಲ್ಲಿಸಿಬಿಡಬೇಕು. ಎಲ್ಲರೂ ಹೀಗೆ ಮಾಡಲಾಗದಿದ್ದರೂ ಬಹಳಷ್ಟು ಜನರು ಮಾಡುವುದು ಸಾಧ್ಯ. ಇದನ್ನು ವ್ಯಕ್ತಿಗಳಾಗಿ ಮಾಡದೆ ವ್ಯಾಪಕವಾದ ಸಾಮಾಜಿಕ ಆಂದೋಲನವನ್ನಾಗಿ ಮಾಡಬೇಕಾಗುತ್ತದೆ. ಅಂದರೆ ಎಲ್ಲಾ ಜನಪರ ಸಂಘಟನೆಗಳು ಮತ್ತು ಸಾಮಾಜಿಕ ಮತ್ತು ರಾಜಕೀಯ ಒತ್ತಡದ ಗುಂಪುಗಳು ಈ ಆಂದೋಲನವನ್ನು ಪ್ರಾರಂಭಿಸಬೇಕಾಗುತ್ತದೆ. ಇದರ ಮೊದಲ ಹೆಜ್ಜೆಯಾಗಿ ಸಂಘಟಿತ ಮತ್ತು ಯೋಜಿತ ಪ್ರಚಾರ ಅತ್ಯಗತ್ಯ.

 ಈಗಿರುವ ಸ್ಥಿತಿಯಲ್ಲಿ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರಲ್ಲಿ ಮಾತ್ರ ಇಂತಹ ‘ಬಳಕೆದಾರ ಶಕ್ತಿ’ಯು ಸೀಮಿತ ಮಟ್ಟದಲ್ಲಾದರೂ ಇದೆ. ಕೆಳವರ್ಗಗಳಿಗೆ ಈ ಶಕ್ತಿಯನ್ನು ಬೆಲೆಯೇರಿಕೆಯ ವಿರುದ್ಧ ಬಳಸುವ ಆರ್ಥಿಕ ಚೈತನ್ಯ ಇಲ್ಲದಿರುವುದರಿಂದ ಮಧ್ಯಮವರ್ಗಗಳ ಹೊಣೆ ಹೆಚ್ಚಿನದ್ದಾಗಿದೆ. ಇಂತಹ ಆಂದೋಲನದ ಪ್ರಯತ್ನವಾಗಿ ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ತೈಲೋತ್ಪನ್ನಗಳ ಬೆಲೆಯೇರಿಕೆಯ ವಿರುದ್ಧ ಜನಾಭಿಪ್ರಾಯ ಮತ್ತು ಕಾರ್ಯಯೋಜನೆಯನ್ನು ಕೈಗೆತ್ತಿಕೊಳ್ಳಬಹುದು. ಇದು ಕಷ್ಟಕಾಲದಲ್ಲಿ ಮೊರೆಹೋಗುವ ತುರ್ತು ಪರಿಹಾರ ಸಾಧ್ಯತೆಯೇ ಹೊರತು ಸಾಮಾಜಿಕ ಮತ್ತು ರಾಜಕೀಯ ಆಂದೋಲನಗಳಿಗೆ ಪರ್ಯಾಯವಲ್ಲ.

ಜನಪರವಾದ ಯಾವುದೇ ಆಂದೋಲನ, ಹರತಾಳ, ಪ್ರತಿಭಟನೆ ಮತ್ತು ಬಂದ್‌ಗಳನ್ನು ಆಯೋಜಿಸಿದಾಗ ಒಂದಿಷ್ಟು ಜನರಿಗೆ ತೊಂದರೆಯಾಗುವಂತೆ ಬೆಲೆಯೇರಿಕೆಯ ವಿರುದ್ಧದ ಆಂದೋಲನದಲ್ಲೂ ಒಂದಿಷ್ಟು ತೊಂದರೆ ಆಗಿಯೇ ಆಗುತ್ತದೆ. ವ್ಯತ್ಯಾಸವೇನೆಂದರೆ, ಬೆಲೆ ಏರಿಕೆಯ ವಿರುದ್ಧದ ಆಂದೋಲನದಲ್ಲಿ ಮಾಮೂಲಿನಂತೆ ಯಾರೋ ಅಮೂರ್ತರಾದ ನಾಗರಿಕರಿಗೆ ಅನನುಕೂಲ ಆಗುವ ಬದಲು ಬಳಕೆದಾರರಾದ ಸ್ವತಹ ಆಂದೋಲನಕಾರರಿಗೇ ಸಾಕಷ್ಟು ಅನನುಕೂಲ ಆಗಿಯೇ ಆಗುತ್ತದೆ. ಇದು ಬೆಲೆ ಏರಿಕೆಯನ್ನು ಹಿಮ್ಮೆಟ್ಟಿಸಲು ಎಲ್ಲರೂ ತೆರಲೇಬೇಕಾದ ಬೆಲೆಯಾಗಬಹುದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top