ಹತ್ತು ಕಟ್ಟುವ ಕಡೆ ಒಂದು ಮುತ್ತು ಕಟ್ಟು

-

ಮೇಲಿನ ಗಾದೆ ಮಾತಿಗೆ ಒಂದು ಜ್ವಲಂತ ಸಾಕ್ಷಿ ಪಿ. ಮಹಮ್ಮದ್‌ರ ನೆಟ್ಟಗೆ ಹಿಡಿದುಕೋ? ಎಂಬ ವ್ಯಂಗ್ಯಚಿತ್ರ (ವಾ.ಭಾ.ಆಗಸ್ಟ್ 6.2022)
 
ವ್ಯಂಗ್ಯ ಪರಂಪರೆಯನ್ನು ಧ್ವನಿಸುವುದೇ ಸಾಹಿತ್ಯಾದಿ ಕಲೆಗಳ ಲಕ್ಷಣ. ಅಂತಹ ಕಲೆಗಳಲ್ಲಿ ವ್ಯಂಗ್ಯಚಿತ್ರ ಕಲೆಯೂ ಒಂದು. ಹತ್ತುಕಟ್ಟುವ ಕಡೆ ಒಂದು ಮುತ್ತುಕಟ್ಟು ಎಂಬಂತೆ ವ್ಯಂಗ್ಯಚಿತ್ರ ಪುಟಗಟ್ಟಲೆ ಕೊಡುವ ವಿವರಣೆಯನ್ನು ಒಂದೇ ಒಂದು ಚಿತ್ರದಲ್ಲಿ ಹೇಳಬಲ್ಲದು. ಒಟ್ಟಾರೆ ವ್ಯಂಗ್ಯಚಿತ್ರಗಳು ಹಿಡಿದರೆ ಹಿಡಿತುಂಬ ಬಿಟ್ಟರೆ ಜಗತುಂಬ. ವ್ಯಂಗ್ಯಚಿತ್ರ ಅಥವಾ ಕಾರ್ಟೂನ್ ಕಲಾತ್ಮಕ ಅಭಿವ್ಯಕ್ತಿಯ ಒಂದು ಚಿತ್ರರೂಪ.

ಪ್ರಧಾನಿ ನೆಹರೂರವರು ಆಗಿನ ಖ್ಯಾತ ವ್ಯಂಗ್ಯಚಿತ್ರಕಾರ ಶಂಕರ್ ಅವರನ್ನು ""Don’t spare me Shankar'' ಎನ್ನುತ್ತಿದ್ದರು. ಆದರೆ ಇತ್ತೀಚಿನ ರಾಜಕಾರಣಿಗಳು ವ್ಯಂಗ್ಯಚಿತ್ರಕಾರರ ಕಡೆಗೆ ಕೈ ತೋರುತ್ತಾ ""Don’t spare him'' ಎಂದು ಹೇಳುತ್ತಿದ್ದಾರೆ. ಭಾರತದ ಇವತ್ತಿನ ರಾಜಕೀಯ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಸಂಚು ಹಾಗೂ ಅಲಿಖಿತ ಮಾಧ್ಯಮ ಸೆನ್ಸಾರ್ ಕಟ್ಟಳೆ ಸದಾ ಜಾರಿಯಲ್ಲಿರುವುದು ಸರ್ವವಿಧಿತ. ಸರಕಾರದ ಜನಪರವಲ್ಲದ ನೀತಿ ಕಾಯ್ದೆಗಳನ್ನು ಧಿಕ್ಕರಿಸುವ, ಪ್ರತಿಭಟಿಸುವ, ಮುಷ್ಕರ ಹೂಡುವ ಯಾರೇ ಇರಲಿ ಅವರು ದೇಶದ್ರೋಹಿಗಳು; ಧಾರ್ಮಿಕ ಮೌಢ್ಯದ ವಿರುದ್ಧ ಧ್ವನಿಯೆತ್ತಿದವರು ಅವರು ಧರ್ಮದ್ರೋಹಿಗಳು ಆಗುತ್ತಾರೆ.

ಇದನ್ನು ಪ್ರಸ್ತಾಪಿಸಿದ ಕಾರಣವೆಂದರೆ ಇದೇ ಆಗಸ್ಟ್ 15ಕ್ಕೆ ಭಾರತ ಸ್ವಾತಂತ್ರವನ್ನು ಪಡೆದು 75 ವರ್ಷಗಳಾಗುತ್ತವೆ. ಇದು ಭಾರತೀಯರಿಗೆ ಸಹಜವಾಗಿಯೇ ಸ್ವಾತಂತ್ರ್ಯ ಸಂತೋಷದ ದಿನದ ಹಬ್ಬ! ನಿಜ. ಆದರೆ ನಮ್ಮ ಮೋದಿ ನೇತೃತ್ವದ ಬಿಜೆಪಿ ಸರಕಾರ ಸ್ವದೇಶಿ, ಆತ್ಮನಿರ್ಭರ ಎಂದೆಲ್ಲಾ ಘೋಷಣೆಮಾಡುತ್ತ ಅಮೃತ ಮಹೋತ್ಸವದ ಅಂಗವಾಗಿ ಪ್ರತಿಯೊಂದು ಮನೆಯ ಮೇಲೂ ತಿರಂಗಾ ಧ್ವಜವನ್ನು ಹಾರಿಸಿ ಎಂದು ಕರೆಕೊಡುತ್ತಿದೆ. ಆದರೆ ನಮ್ಮ ಖಾದಿ ಗ್ರಾಮೋದ್ಯೋಗಿಗಳ ಕೈಗೆ ಕೆಲಸ ಕೊಡುವುದಕ್ಕೆ ಬದಲಾಗಿ ಕಾರ್ಪೊರೇಟ್ ಕಂಪನಿಗಳಿಗೆ ಲಾಭವಾಗುವಂತೆ, ಅದೂ ಚೀನಾದಿಂದ 20 ಕೋಟಿ ಬಾವುಟಗಳನ್ನು ಆಮದು ಮಾಡಿಕೊಂಡಿರುವುದು ವಿಪರ್ಯಾಸ. ಇದು ಬಿಜೆಪಿ ಸರಕಾರ ಅಮೃತ ಮಹೋತ್ಸವವನ್ನು ಆಚರಿಸುವ ವೈಖರಿ. ಅದನ್ನು ಪಿ. ಮಹಮ್ಮದ್ 'ನೆಟ್ಟಗೆ ಹಿಡಿದುಕೋ' ಎಂಬ ಒಂದು ವ್ಯಂಗ್ಯ ಚಿತ್ರದ ಮೂಲಕ ಹತ್ತು ಕಟ್ಟುವ ಕಡೆ ಒಂದು ಮುತ್ತು ಕಟ್ಟು ಎಂಬಂತೆ ಧ್ವನಿಸಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top