ಅಮೃತಮಹೋತ್ಸವವು ಅನೃತೋತ್ಸವವಾಗದಿರಲಿ

-

ಮಾನ್ಯರೆ,
ಪ್ರಧಾನಿಯವರ ‘ಹರ್ ಘರ್ ತಿರಂಗಾ’ ಎಂಬ ಕರೆ ಹಾಗೂ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಾನಾ ರೀತಿಯ ಭಾವೋದ್ವೇಗದ ಪ್ರಚಾರಗಳು ಸಮರೋಪಾದಿಯಲ್ಲಿ ಸಾಗಿರುವುದು ಹಿಂಸೆಗೆ ದಾರಿಮಾಡಿಕೊಡದಿರಲಿ. ಏಕೆಂದರೆ ಇದು ಸ್ವಾತಂತ್ರ್ಯದ ಅಮೃತಮಹೋತ್ಸವದ ಸಹಜ ಸಂಭ್ರಮಕ್ಕಿಂತ ರಾಜಕೀಯ ಸ್ವರೂಪವನ್ನು ಪಡೆದಂತೆ ಭಾಸವಾಗುತ್ತಿದೆ. ಕೊರೋನ ಮತ್ತಿತರ ಸಂದರ್ಭಗಳಲ್ಲಿ ನಡೆದ ಮೇಣದ ಬತ್ತಿ, ಚಪ್ಪಾಳೆ, ಜಾಗಟೆ ಇತ್ಯಾದಿ ಮತ ಬ್ಯಾಂಕ್ ತಂತ್ರದ ಹಾಗೆ ದೇಶಭಕ್ತಿಯ ಹೆಸರಿನಲ್ಲಿ ಉನ್ಮಾದಕ್ಕೆ ಎಡೆಮಾಡಿಕೊಡುವುದು ಸೂಕ್ತವಲ್ಲ. ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ನಾವೆಲ್ಲರೂ ಹಬ್ಬದಂತೆ ಆಚರಿಸುವುದು ನಮ್ಮೆಲ್ಲರ ಕರ್ತವ್ಯ. ನಿಜವೇ, ಆದರೆ ನಮ್ಮ ತಿರಂಗಾವು ಮತ - ಧರ್ಮಗಳ ಸಾಮರಸ್ಯವನ್ನು, ಶಾಂತಿ, ಪಾವಿತ್ರ್ಯ, ತ್ಯಾಗ ಮುಂತಾದ ಮೌಲ್ಯಗಳನ್ನು ಹಾಗೂ ನಡುವೆ ಇರುವ ಅಶೋಕ ಚಕ್ರವು ಧರ್ಮವನ್ನು ಸಂಕೇತಿಸುತ್ತದೆ. ಬೌದ್ಧ ಕ್ಷೇತ್ರವಾದ ಸಾರಾನಾಥದ ಸಿಂಹಗಳ ಲಾಂಛನದಲ್ಲಿರುವ ಚಕ್ರವು ಇದಾಗಿದ್ದು, ಬುದ್ಧಸತ್ವವನ್ನು ಒಳಗೊಂಡದ್ದೂ ಆಗಿದೆ ಎಂಬುದನ್ನು ನಾವು ಯಾವುದೇ ಕಾರಣಕ್ಕೂ ಮರೆಯಬಾರದು. ಇಲ್ಲಿ ಆವೇಶಕ್ಕಿಂತ ಅನುಷ್ಠಾನದ ಜವಾಬ್ದಾರಿಯನ್ನು ಎಲ್ಲ ಭಾರತೀಯರ ಮನಸ್ಸಿನಲ್ಲಿ ಮೂಡಿಸಬೇಕಾಗಿದೆ. ಹೀಗಾಗಿ ನಮ್ಮ ಧ್ವಜವು ಸಂಕೇತಿಸುತ್ತಿರುವ ಅರ್ಥವು, ಭಾವವು ಮುಖ್ಯವಾಗಬೇಕಾಗಿದೆ.
ಗುರುದೇವ ರವೀಂದ್ರನಾಥ ಠಾಗೂರರ ‘Where the mind is without fear' ಎಂಬ ಪದ್ಯದಲ್ಲಿ ""Where the world has not been broken up into fragments by narrow domestic walls,..... In to that heaven of freedom, my father, let my country awake'' ಎಂದು ಸೂಚಿಸುವ ನೈಜ ದೇಶಭಕ್ತಿಯು ನಮ್ಮೆಲ್ಲರದಾಗಲಿ. ಅಮೃತ ಮಹೋತ್ಸವವು ಅನೃತೋತ್ಸವವಾಗದಿರಲಿ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top