-

ರೈಲು ಬವಣೆ

ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿ ಉದ್ಘೋಷಣೆ ಮಾಡಿ

-

ಪ್ರಸಕ್ತ ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿ ಸಲೀಸಾಗಿ ತೊಂದರೆ ನಿವಾರಣೆ ಮಾಡಲು ಸಾಧ್ಯವಿದ್ದರೂ ಕೊಂಕಣ ರೈಲ್ವೆಯು ಆ ಬಗ್ಗೆ ಆಲೋಚನೆಯನ್ನೇ ಮಾಡದೆ ಕನಿಷ್ಠ ಮಟ್ಟದ ತೊಂದರೆಯನ್ನು ಹಿಮಾಲಯದಷ್ಟು ಹಿಗ್ಗಿಸುವುದು ಪ್ರತೀದಿನ ಕಂಡುಬರುತ್ತಿದೆ.

ರೈಲು ಸಂಖ್ಯೆ 11004 ದಾದರ್‌ನಿಂದ ಸಾವಂತವಾಡಿಗೆ ಹೋಗುವ ತುತಾರಿ ಎಕ್ಸ್ ಪ್ರೆಸ್, ರೈಲು ಸಂಖ್ಯೆ 12619 ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಮಂಗಳೂರು ಸೆಂಟ್ರಲ್ ಗೆ ಹೋಗುವ ಮತ್ಸ್ಯಗಂಧ ಎಕ್ಸ್ ಪ್ರೆಸ್ ಹಾಗೂ ರೈಲು ಸಂಖ್ಯೆ 12133 ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್‌ನಿಂದ ಮಂಗಳೂರು ಜಂಕ್ಷನ್ ತನಕ ಹೋಗುವ ಮಂಗಳೂರು ಎಕ್ಸ್‌ಪ್ರೆಸ್-ಈ ಎಲ್ಲಾ ರೈಲುಗಳಲ್ಲಿ ಕಾದಿರಿಸಿದ ಬೋಗಿಗಳಲ್ಲಿ ಪ್ರಯಾಣಿಕರು ಜಾನುವಾರುಗಳಂತೆ ಸಂಚರಿಸುವುದು ವರ್ಷದ 365 ದಿನಗಳೂ ಕಂಡುಬರುತ್ತದೆ.

ರೈಲು ನಿಯಮಾವಳಿಗಳ ಪ್ರಕಾರ ಸೂಕ್ತ ಟಿಕೆಟ್ ಇಲ್ಲದವರು ಹಾಗೂ ವೈಟಿಂಗ್ ಲಿಸ್ಟ್ ಟಿಕೆಟ್ ಹೊಂದಿದವರು ಕಾದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸುವಂತಿಲ್ಲ. ಕನ್ಫರ್ಮ್ ಹಾಗೂ ಆರ್‌ಎಸಿ ಟಿಕೆಟ್ ಹೊಂದಿದವರು ಮಾತ್ರ ಪ್ರಯಾಣಿಸಬಹುದಾಗಿದೆ. ಆದರೆ ಇತ್ತೀಚೆಗೆ (ಸೆಪ್ಟ್ಟಂಬರ್ 6ರಂದು) ಗಮನಿಸಿದಾಗ ಈ ಮೇಲೆ ಹೆಸರಿಸಿದ 3ರೈಲುಗಳಲ್ಲೂ ಭರಣಿಯಲ್ಲಿ ಉಪ್ಪಿನಕಾಯಿ ತುಂಬಿದಂತೆ ಜನರಲ್ ಟಿಕೆಟ್ ಹಾಗೂ ವೈಟಿಂಗ್ ಟಿಕೆಟ್‌ಇದ್ದವರು ಕೂಡ ಒಳಹೊಕ್ಕು 4 ತಿಂಗಳ ಮೊದಲೇ ಟಿಕೆಟ್ ಕಾದಿರಿಸಿದವರು ಪರದಾಡುವಂತೆ ಮಾಡಿದರು. ಅವರಿಗೆ ಮೀಸಲಾದ ಸೀಟುಗಳಲ್ಲಿ ಇತರರು ಕೂತಿದ್ದರು. ರೈಲ್ವೆ ಪೊಲೀಸರು ಯಾರೂ ಕಣ್ಣಿಗೆ ಬೀಳಲಿಲ್ಲ. ಟಿಟಿಇ (ಟಿಕೆಟ್ ಪರಿವೀಕ್ಷಕರು) ಒಳ ಬರಲು ಸಾಧ್ಯವಿಲ್ಲ ಎಂದು ಬರಲೇ ಇಲ್ಲ.

 ಕನ್ಫರ್ಮ್ ಸೀಟಿನಲ್ಲಿ ಮಲಗಲೂ ಆಗಲಿಲ್ಲ. ಅದನ್ನು 6-7ಜನರು ಈಗಾಗಲೇ ಆಕ್ರಮಿಸಿಕೊಂಡಿದ್ದರು. ಮಲಗಿ ಪ್ರಯಾಣಿಸುವ ಟಿಕೇಟ್ ಇದ್ದರೂ ಕುಳಿತು ಪ್ರಯಾಣಿಸಲೂ ಸಾಧ್ಯವಿಲ್ಲದಷ್ಟು ಪ್ರಯಾಣಿಕರಿದ್ದರು. ಕೈ ತೊಳೆಯುವುದಂತೂ ಬಿಡಿ, ಶೌಚಾಲಯಕ್ಕೆ ಹೋಗಲೂ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುಂಬೈಯಿಂದ ಮಂಗಳೂರು ತನಕದ ಮಳೆಗಾಲದ ವೇಳಾಪಟ್ಟಿಯಂತೆ (19 ಗಂಟೆ) ಕಡಿಮೆ ವೇಗದಲ್ಲಿ ಚಲಿಸುವ ರೈಲುಗಳಲ್ಲಿ ಈ ರೀತಿ ಕಿಕ್ಕಿರಿದು ನಿಂತು ಕೂತು ಅಲ್ಲಾಡದೆ ಪ್ರಯಾಣಿಸುವುದು ತರುಣರಿಗೂ ಸಾಧ್ಯವಿಲ್ಲ. ಹಾಗಾದರೆ ಹಿರಿಯ ನಾಗರಿಕರು/ಗರ್ಭಿಣಿಯರು/ರೋಗಿಗಳು ವಾಶ್‌ಬೇಸಿನ್ ಶೌಚಾಲಯ ಉಪಯೋಗಿಸದೆ ಪಯಣಿಸುವುದು ಸಾಧ್ಯವೇ ಇಲ್ಲ

ಪರಿಹಾರವೇನು?

ಪ್ರಸಕ್ತ ಭಾರತದಲ್ಲಿನ 7,500ಕ್ಕಿಂತಲೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ಸ್ವಯಂ ಉದ್ಘೋಷಣಾ ವ್ಯವಸ್ಥೆ ಇದೆ. ಅದು ರೈಲು ಬರುವ ಸಮಯ/ನಿಲ್ದಾಣ/ಹೊರಡುವ ಸಮಯ ಇತ್ಯಾದಿಯನ್ನು ತನ್ನಿಂದ ತಾನೇ ಸೌಂಡ್‌ಬಾಕ್ಸ್ ಮುಖಾಂತರ ಕನ್ನಡ/ಮರಾಠಿ/ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಘೋಷಣೆ ಮಾಡುತ್ತದೆ. ಹೀಗೆ ಪ್ರಸಕ್ತ ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿ ‘‘ವೈಟಿಂಗ್ ಲಿಸ್ಟ್ ಪ್ರಯಾಣಿಕರು ಕಾದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸುವಂತಿಲ್ಲ, ಕಾದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸಿದರೆ ಅವರನ್ನು ‘ಟಿಕೆಟ್ ರಹಿತ’ ಪ್ರಯಾಣಿಕರು ಎಂದು ಗ್ರಹಿಸಿ, ಆ ಎಕ್ಸ್‌ಪ್ರೆಸ್ ರೈಲು ಹೊರಡುವ ಮೊದಲನೇ ನಿಲ್ದಾಣದಿಂದ ತಲುಪುವ ಕಡೆಯ ನಿಲ್ದಾಣದವರೆಗಿನ ಟಿಕೆಟ್ ಹಾಗೂ 250ರೂ. ದಂಡ ಸಂಗ್ರಹಿಸಲಾಗುವುದು’’ ಎಂದು ಕಂಪ್ಯೂಟರಲ್ಲಿ ಅಳವಡಿಸಿದರೆ ಹಾಗೂ ಪ್ರತೀ ರೈಲು ನಿಲ್ದಾಣಕ್ಕೆ ಬರುವ 30 ನಿಮಿಷ ಮೊದಲಿನಿಂದ ಆಗಾಗ ಉದ್ಘೋಷಣೆ ಮಾಡಿದರೆ ಈ ಸಮಸ್ಯೆಯನ್ನು ಶಾಶ್ವತವಾಗಿ ಕೊನೆಗಾಣಿಸಬಹುದು.

ಪ್ರಯಾಣಿಕರೇನು ಮಾಡಬಹುದು?

ಕಾದಿರಿಸಿದ ಬೋಗಿಗಳಲ್ಲಿ ಜಾನುವಾರುಗಳಂತೆ ಪ್ರಯಾಣಿಕರು ತುಂಬಿದ್ದರೆ ಒಂದು ಬೋಗಿಯ ದ್ವಾರದಿಂದ ಇನ್ನೊಂದು ಬೋಗಿಯ ದ್ವಾರದವರೆಗಿನ ವೀಡಿಯೊ ಹಾಗೂ ಫೋಟೊಗಳನ್ನು ತೆಗೆದು ಆನಂತರ ‘ಗ್ರಾಹಕರ ನ್ಯಾಯಾಲಯ’ದಲ್ಲಿ ದಾವೆ ಹಾಕಿದರೆ ರೂ. 30,000 ಪರಿಹಾರ ಸಿಗುತ್ತದೆ. ನಿಮಗಾದ ಮಾನಸಿಕ ಹಾಗೂ ದೈಹಿಕ ತೊಂದರೆಗೆ ಇಷ್ಟು ಹಣ ಕಡಿಮೆಯೇ. ಆದರೆ ಆ ಬೋಗಿಯಲ್ಲಿನ 80 ಕನ್ಫರ್ಮ್ ಪ್ರಯಾಣಿಕರಿಗೆ 30,000ದಂತೆ ಆ ರೈಲಿನ 12 ಸ್ಲೀಪರ್ ಬೋಗಿಗಳಲ್ಲಿ ಎಲ್ಲರೂ ಗ್ರಾಹಕ ನ್ಯಾಯಾಲಯದಲ್ಲಿ ದಾವೆ ಹಾಕಿ 30,000 ರೂ.ನಂತೆ ಪಡೆದರೆ ಕೊಂಕಣ ರೈಲ್ವೆಗೆ ರೂ. 2,88,00,000 ನಷ್ಟವಾಗುತ್ತದೆ. ಹೀಗೆ ಪ್ರತೀ ಎಕ್ಸ್‌ಪ್ರೆಸ್ ರೈಲಿನವರು ದಾವೆ ಹಾಕಿದರೆ ದಿನವೊಂದಕ್ಕೆ ಪರಿಹಾರವಾಗಿ ರೂ. 45 ಕೋಟಿಯಷ್ಟು ರೈಲ್ವೆಗೆ ನಷ್ಟ ಉಂಟಾಗಿ ಆಗ ನಿಯಮಾನುಸಾರ ಟಿಕೆಟ್ ಪರಿವೀಕ್ಷಕರು ಕಾರ್ಯ ನಿರ್ವಹಿಸುತ್ತಾರೆ. ಪ್ರಪಂಚದಲ್ಲಿ ಯಾವುದೇ ತೊಂದರೆ ಯೂ ಹೆಚ್ಚಾಗಲು ಅಥವಾ ಅದು ಪರಿಹಾರವಾಗದೆ ಉಳಿಯಲು ಸಭ್ಯ ಹಾಗೂ ಒಳ್ಳೆಯವರ ಮೌನವೇ ಕಾರಣವಂತೆ ಅದು ಸತ್ಯವೇ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top