-

ದಲಿತ ಬಾಲಕನ ಮೇಲೆ ಹಲ್ಲೆ ಖಂಡನೀಯ

-

 ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಮಿತಿ ಮೀರಿದೆ. ಕೆಟ್ಟ, ಅವಮಾನಕರ ಸಂಗತಿಗಳು ನಮ್ಮ ರಾಜ್ಯದಲ್ಲೂ ಆಗಾಗ ವರದಿಯಾಗುತ್ತಲೇ ಇವೆ. ಕಳೆದ ವರ್ಷ ಗೋಣಿಬೀಡು ಪೊಲೀಸ್ ಠಾಣೆಯ ಓರ್ವ ಪಿಎಸ್ಸೈ ದಲಿತ ಯುವಕನಿಗೆ ಮನಬಂದಂತೆ ಥಳಿಸಿ ಮೂತ್ರ ನೆಕ್ಕಿಸಿ ದೌರ್ಜನ್ಯ ಎಸಗಿದ ಮಾನವ ಕುಲ ತಲೆ ತಗ್ಗಿಸುವಂತಹ ಘಟನೆ ನಡೆಯಿತು. ರಾಜ್ಯದ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೇರಹಳ್ಳಿಯಲ್ಲಿ ಗ್ರಾಮದೇವತೆಯ ಮೆರವಣಿಗೆಯ ಸಂದರ್ಭದಲ್ಲಿ ದೇವತೆಯ ಗುಜ್ಜುಕೋಲನ್ನು ದಲಿತ ಬಾಲಕನೊಬ್ಬ ಮುಟ್ಟಿದ ಎಂಬ ಕಾರಣಕ್ಕೆ ದೇವರಿಗೆ ಮೈಲಿಗೆಯಾಗಿದೆ ಎಂದು ಊರಿನ ಪ್ರಬಲ ಮೇಲ್ಜಾತಿ ಸಮುದಾಯಕ್ಕೆ ಸೇರಿದ ಕೆಲವರು ದಲಿತ ಬಾಲಕನಿಗೆ ಥಳಿಸಿ ಅವಮಾನ ಮಾಡಿರುವುದು ಖಂಡನೀಯವಾಗಿದೆ. ಅಲ್ಲದೆ ಕುಟುಂಬಕ್ಕೆ 60 ಸಾವಿರ ರೂ. ದಂಡ ಕಟ್ಟುವಂತೆ ಅಥವಾ ಕಟ್ಟದಿದ್ದರೆ ಊರಿನಿಂದ ಬಹಿಷ್ಕಾರ ಹಾಕುವ ಬೆದರಿಕೆ ಒಡ್ಡಿರುವುದು ಮತ್ತು ಜೀವ ಬೆದರಿಕೆ ಹಾಕಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ.

ಸಮಾಜದಲ್ಲಿ ಹೆಪ್ಪುಗಟ್ಟಿರುವ ಜಾತೀಯ ಮನೋಭಾವ ಮತ್ತು ಅದರ ಪರಿಣಾಮವಾದ ಕ್ರೌರ್ಯದ ಅಭಿವ್ಯಕ್ತಿಯಂತಿರುವ ಈ ಪ್ರಕರಣವು ಸಮ ಸಮಾಜಕ್ಕಾಗಿ ಹಂಬಲಿಸುವವರನ್ನು ಕಳವಳಕ್ಕೆ ದೂಡುವಂತಹದ್ದು. ಮಕ್ಕಳನ್ನು ದೇವರ ರೂಪದಲ್ಲಿ ನೋಡುವ ಸಮಾಜದಲ್ಲಿ ದಲಿತ ಬಾಲಕನೊಬ್ಬ ಮುಟ್ಟಿದ ಎಂಬ ಕಾರಣದಿಂದ ದೇವರಿಗೆ ಮೈಲಿಗೆಯಾಗಿದೆಯೆಂಬ ಮೌಢ್ಯವನ್ನು ಕಲ್ಪಿಸಿಕೊಳ್ಳುವುದೇ ಅಸಹ್ಯ. ಪ್ರೀತಿ ಮತ್ತು ಮಾನವೀಯತೆಯ ಸಂವಹನಕ್ಕೆ ಕಾರಣವಾಗುವ ಸ್ಪರ್ಶದಲ್ಲಿ ರೋಗಗ್ರಸ್ತ ಮನಸ್ಸುಗಳಿಗಷ್ಟೇ ಮೈಲಿಗೆ ಕಾಣಿಸಲು ಸಾಧ್ಯ.

ದೌರ್ಜನ್ಯಕ್ಕೆ ತುತ್ತಾದ ದಲಿತ ಬಾಲಕನು ಈಗ ವಿದ್ಯಾರ್ಥಿಯಾಗಿದ್ದಾನೆ. ಇಂತಹ ಅಪ್ರಾಪ್ತ ವಯಸ್ಕ ಬಾಲಕ ದೌರ್ಜನ್ಯಕ್ಕೆ ಒಳಗಾಗಿದ್ದರಿಂದ ಅವನ ಭವಿಷ್ಯದ ಬದುಕಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ದೇಶದ ದಲಿತ ಮಕ್ಕಳು ಜಾತಿಯ ಕಾರಣದಿಂದಾಗಿ ಅವಮಾನಕ್ಕೆ ಗುರಿಯಾಗುವ ಘಟನೆಗಳು ಎಳೆಯ ಮಕ್ಕಳ ಮನಸ್ಸಿನ ಮೇಲೆ ಮಾಡಬಹುದಾದ ಗಾಯಗಳನ್ನು ಊಹಿಸಿಕೊಳ್ಳುವುದೂ ಕಷ್ಟಕರವಾಗುತ್ತದೆ. ಸಣ್ಣ ಮಕ್ಕಳ ಮನಸ್ಸಿನಲ್ಲಿ ಪ್ರೀತಿ ಸಹಬಾಳ್ವೆಗೆ ಅವಕಾಶವಿರುವ ಸಮಾಜದ ಚಿತ್ರಣವನ್ನು ಮೂಡಿಸಬೇಕೇ ಹೊರತು ಒಡಕಿನ ಬಿಂಬಗಳನ್ನಲ್ಲ ಎಂದು ಇಂದಿನ ಸಮಾಜ ಅರಿತುಕೊಳ್ಳುವುದು ಸೂಕ್ತ.

ಇಂತಹ ಮೌಢ್ಯ ಅನಿಷ್ಠಗಳ ವಿರುದ್ಧ ಕಾನೂನು ನಿಯಮಗಳ ಜೊತೆಗೆ ಸಮಾಜವನ್ನು ಮಾನವೀಯಗೊಳಿಸುವ ಪ್ರಯತ್ನಗಳೂ ವ್ಯಾಪಕವಾಗಿ ನಡೆಯಬೇಕಾದುದು ಇಂದಿನ ತುರ್ತಾಗಿದೆ. ದೇಶದಲ್ಲಿ ಸಮಾನತೆ ಸಾರುವ ಸಂವಿಧಾನವಿದ್ದರೂ ಅದಕ್ಕೆ ತಕ್ಕಂತೆ ಆಡಳಿತ ಕಾರ್ಯರೂಪಕ್ಕೆ ಬರಲೇ ಇಲ್ಲ. ಸರಕಾರ ಇನ್ನಾದರೂ ಜಾತಿಯ ವ್ಯಸನಕ್ಕೊಳಗಾದವರು ಕಾನೂನನ್ನು ಕೈಗೆ ತೆಗೆದುಕೊಂಡು ದುರ್ಬಲ ವರ್ಗದವರ ಮೇಲೆ ದೌರ್ಜನ್ಯ ನಡೆಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಈ ರೀತಿಯ ಘಟನೆ ಮರುಕಳಿಸದಂತೆ ಕ್ರಮ ವಹಿಸಬೇಕಾಗಿದೆ.
 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top