-

ರೈಲಿನ ನಿಯಮವರಿತು ಪ್ರಯಾಣಿಸಿ

-

ತಿಳಿದೋ ತಿಳಿಯದೆಯೋ, ಕೇಂದ್ರ ಸರಕಾರದ ಭಾರತೀಯ ರೈಲ್ವೆಯು ಪ್ರಯಾಣಿಕರ ಹಿತಕ್ಕಾಗಿ ರೂಪಿಸಿದ ಚಲಿಸುವ ರೈಲಲ್ಲಿ ಹತ್ತಬಾರದು ಅಥವಾ ಇಳಿಯಬಾರದು, ವೈಟಿಂಗ್ ಲಿಸ್ಟ್ ಪ್ರಯಾಣಿಕರು ರಿಸರ್ವೇಶನ್ ಬೋಗಿಗಳಲ್ಲಿ ಪ್ರಯಾಣಿಸಬಾರದು, ಪ್ಲಾಟ್ ಫಾರ್ಮ್ ಟಿಕೇಟು ಇಲ್ಲದೆ ಫ್ಲಾಟ್‌ಫಾರ್ಮಿಗೆ ಹೋಗಕೂಡದು, ಪ್ಲಾಟ್ ಫಾರ್ಮ್ ಟಿಕೆಟ್ ಹೊಂದಿದವರು ರೈಲಿನೊಳಗೆ ಹೋಗಕೂಡದು, ಟಿಕೆಟ್ ಪಡೆದೇ ಪ್ರಯಾಣಿಸಬೇಕು, ಇತರ ಪ್ರಯಾಣಿಕರು ನೀಡಿದ ತಿನಿಸುಗಳನ್ನು ಸ್ವೀಕರಿಸಬಾರದು ಇತ್ಯಾದಿ ನಿಯಮಗಳನ್ನು ಗಾಳಿಗೆ ತೂರುವುದು ಹಾಗೂ ತಮ್ಮ ಜೀವಕ್ಕೆ ಸಂಚಕಾರ ತರುವುದು ಇತ್ತೀಚೆಗೆ ಕಂಡು ಬರುತ್ತದೆ.

ಪುತ್ತೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು, ತಮ್ಮ ಪುತ್ರಿಯನ್ನು ರೈಲಿಗೆ ಹತ್ತಿಸಿ, ಲಗೇಜ್‌ರೈಲಿನೊಳಗಿಟ್ಟು, 42 ವರ್ಷದ ಮಹಿಳೆಯೊಬ್ಬರು ರೈಲಿನಿಂದ ಇಳಿಯುತ್ತಿದ್ದಂತೆ, ರೈಲು ಸಂಚರಿಸಲಾರಂಭಿಸಿದಾಗ, ಅವರು ಆಯತಪ್ಪಿಕೆಳಗೆ ಬಿದ್ದು ಕಾಲು ಮುರಿತಕ್ಕೊಳಗಾಗಿದ್ದಾರೆ ಎಂದು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.
ರೈಲ್ವೆ ನಿಯಮಾವಳಿಗಳನ್ನು ಗಾಳಿಗೆ ತೂರಿ, ಅವರು ಪುತ್ರಿಯ ಲಗೇಜನ್ನು ರೈಲಿನೊಳಗಿಡಲು ರೈಲು ಹತ್ತಿದ್ದು ಅಪರಾಧ. ಲಗೇಜ್ ಅನ್ನು ರೈಲಿನೊಳಗಿಟ್ಟು ಚಲಿಸುವ ರೈಲಿನಿಂದ ಇಳಿದದ್ದು ಅಕ್ಷಮ್ಯ ಅಪರಾಧ. ಇಂತಹ ಅಪರಾಧಗಳಿಗೆ ರೈಲು ಇಲಾಖೆಯು ಕಾನೂನು ರೀತ್ಯಾ ದಂಡ ಹಾಗೂ ಸಜೆ ನೀಡಬಹುದಾಗಿದೆ.
ಅಷ್ಟೇ ಅಲ್ಲದೆ ಅವರಿಗಾದ ಮೂಳೆಮುರಿತಕ್ಕೆ ಭಾರತೀಯ ರೈಲ್ವೆ ಇಲಾಖೆ ಜವಾಬ್ದಾರವಾಗುವುದಿಲ್ಲ. ಆದುದರಿಂದ ಅವರ ವೈದ್ಯಕೀಯ ಖರ್ಚನ್ನು ನೈಋತ್ಯ ರೈಲ್ವೆಯು ನಿಯಮಾನುಸಾರ ಭರಿಸಲು ಆಗುವುದಿಲ್ಲ.
ಚಲಿಸುವ ರೈಲಿನಿಂದ ಇಳಿದಾಗ ಬಿದ್ದು ಮೂಳೆ ಮುರಿತಕ್ಕೊಳಗಾಗಿ ದ್ದರಿಂದ ನಿಗದಿತ ಸಮಯಕ್ಕಿಂತ ಹೆಚ್ಚಿನ ವೇಳೆ ಎಕ್ಸ್ ಪ್ರೆಸ್ ರೈಲು ಪುತ್ತೂರು ರೈಲು ನಿಲ್ದಾಣದಲ್ಲಿ ಇರಬೇಕಾಗಿ ಬಂತು. ಇದರಿಂದಾಗಿ ಮುಂದಿನ ನಿಲ್ದಾಣಕ್ಕೆ ಕ್ಲಪ್ತ ಸಮಯಕ್ಕೆ ತಲುಪಲಾಗಲಿಲ್ಲ. ಈ ಕಾರಣಕ್ಕೆ ಕೂಡ ನೈಋತ್ಯ ರೈಲ್ವೆ ಅವರ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಬಹುದಾಗಿದೆ.
ಈ ಮೇಲಿನ ಅವಘಡಕ್ಕೆ ಸಂಬಂಧಿಸಿದಂತೆ ಕೆಲವರು ಪ್ರತೀ ನಿಲ್ದಾಣದಲ್ಲಿ ರೈಲನ್ನು ಎರಡು ನಿಮಿಷಗಳ ಬದಲಿಗೆ ಐದು ನಿಮಿಷಗಳ ಕಾಲ ನಿಲ್ಲಿಸಬೇಕು ಎನ್ನುತ್ತಿದ್ದಾರೆ. ಅದು ಅಸಾಧ್ಯದ ಮಾತು. ಪ್ರತೀ ಹೊಸ ರೈಲನ್ನು ಆರಂಭಿಸುವ ಮುಂಚೆ ಐಆರ್‌ಎಸ್ ಉನ್ನತಾಧಿಕಾರಿಗಳು ಸಭೆ ನಡೆಸಿ, ಹೊರಡುವ ಹಾಗೂ ತಲುಪುವ ಸಮಯ; ನಿಲುಗಡೆ ಸಮಯವನ್ನು ಪ್ರಯಾಣಿಕರ ಸಂಖ್ಯೆ ಆಧರಿಸಿ ತಯಾರಿಸುತ್ತಾರೆ. ಪ್ರತೀ ಬೋಗಿಯ ಮೂರು ಅಡಿ ಅಗಲದ ಎರಡು ಬಾಗಿಲುಗಳ ಮೂಲಕ ಎರಡು ನಿಮಿಷದಲ್ಲಿ 80ರಿಂದ 100 ಪ್ರಯಾಣಿಕರು ಹತ್ತಬಹುದು. ಒಂದು ಬೋಗಿಯ ಬಾಗಿಲಲ್ಲಿ ಪ್ರಯಾಣಿಕರು ಜಾಸ್ತಿ ಇದ್ದರೆ, ಪಕ್ಕದ ಬೋಗಿಯೊಳಗೆ ಹೋಗಿ, ಒಳಗಿನಿಂದಲೇ ತಮ್ಮ ಸೀಟಿಗೆ ಸಲೀಸಾಗಿ ಹೋಗಬಹುದು.
ಎಲ್ಲಾ ಬೋಗಿಗಳಲ್ಲೂ ಏರಲು ಜನಸಂದಣಿ ಇದ್ದರೆ ಏರ್ ಕಂಡೀಶನ್ ಬೋಗಿಗೇರಿ ಆನಂತರ ತಮ್ಮ ಬೋಗಿಗೆ ಹೋಗಬಹುದಾಗಿದೆ. ಬಹುತೇಕ ಪ್ರಯಾಣಿಕರು ನಿಯಮವರಿಯದೆ ಏರ್ ಕಂಡಿಷನ್ ಬೋಗಿಯೊಳಗೆ ಕಾಲಿಡಲು ಹೆದರುತ್ತಾರೆ.

ಒಂದು ರೈಲು ಜಮ್ಮುವಿನಿಂದ ಪಂಜಾಬ್, ದಿಲ್ಲಿ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿಗೆ ಹೋಗುತ್ತದೆ. ಹೀಗೆ ಹತ್ತು ರಾಜ್ಯಗಳಲ್ಲಿ ಸುಮಾರು ನೂರರಷ್ಟು ನಿಲ್ದಾಣಗಳಲ್ಲಿ ಮಾತ್ರ ಅದಕ್ಕೆ ನಿಲುಗಡೆ ಇದೆ. ಪ್ರತೀ ರೈಲಿಗೆ, ಪ್ರತೀ ನಿಲ್ದಾಣದಲ್ಲಿ ಎರಡು ನಿಮಿಷ ಹಾಗೂ ಚಲಿಸುವ ಟಿಕೆಟ್ ಪರಿವೀಕ್ಷಕರು ಹಾಗೂ ಲೋಕೋ ಪೈಲೆಟ್ ಬದಲಾಗುವ ನಿಲ್ದಾಣಗಳಲ್ಲಿ ಹತ್ತು ನಿಮಿಷ ನಿಲುಗಡೆ ಇರುತ್ತದೆ.
ಹೀಗೆ ನಿಲುಗಡೆಗೆ 360 ನಿಮಿಷ ಹಾಗೂ ರೈಲು ಕ್ರಾಸಿಂಗ್ ಮಾಡಲು 180 ನಿಮಿಷ. ಒಟ್ಟು 540 ನಿಮಿಷ ಅಂದರೆ ಒಂಭತ್ತು ಗಂಟೆ ವ್ಯಯವಾಗುತ್ತದೆ. ಹೀಗಾಗಿ ಪ್ರತೀ ನಿಲುಗಡೆಯಲ್ಲಿಯೂ 5 ನಿಮಿಷ ಕೊಟ್ಟರೆ ಮತ್ತಷ್ಟು ಸಮಯ ವ್ಯಯವಾಗುತ್ತದೆ.

 ನ್ಯಾಷನಲ್ ಟ್ರೈನ್ ಎನ್ಕ್ವೈರಿ ಸಿಸ್ಟಮ್ ಹಾಗೂ ಇಂಡಿಯನ್ ರೈಲ್ವೇಸ್ ಇವೆರಡು ಭಾರತೀಯ ರೈಲ್ವೆಯ ಅಧಿಕೃತ ಅಂತರ್ಜಾಲಗಳು. ಇಲ್ಲಿ ಪ್ರತೀ ರೈಲು ತಲುಪುವ ಹಾಗೂ ಹೊರಡುವ ಸಮಯ, ಪ್ಲಾಟ್ ಫಾರ್ಮ್ ನಂಬರ್ ಇದೆ. ನಮ್ಮ ಬೋಗಿ ಎಸ್ 9 ಆಗಿದ್ದರೆ ಆ ಬೋಗಿಯು ಇಂಜಿನ್ ನಂತರದ ಎಷ್ಟನೇ ಬೋಗಿ ಎಂದು ಅಂತರ್ಜಾಲದಲ್ಲಿ ಕೋಚ್ ಪೊಜಿಷನ್ ನೋಡಿ ತಿಳಿದುಕೊಳ್ಳಬೇಕು. ನಾವು ಪ್ರಯಾಣಿಸುವ ಬೋಗಿ 14ನೆಯದ್ದು ಎಂದಾದರೆ ಪ್ಲಾಟ್ ಫಾರ್ಮ್ ನಲ್ಲಿ 14ನೇ ಬೋಗಿ ಎಂದು ಬರೆದಲ್ಲೇ ನಿಲ್ಲಬೇಕು. ರೈಲು ಹೊರಡುವ 30 ನಿಮಿಷ ಮೊದಲೇ ಸ್ಟೇಷನ್ ತಲುಪಬೇಕು. ಆಗ ರೈಲಿನ ಒಳ ಹೋಗಲು ಹೆಚ್ಚಿನ ಸಮಯವೂ ಬೇಕಾಗುವುದಿಲ್ಲ. ರೈಲು ದೂರದಲ್ಲಿ ಬಂದಾಗ ತಮ್ಮ ಬೋಗಿ ನಿಲ್ಲುವ ಕಡೆ, ಕಡೇಕ್ಷಣ ಓಡುವುದನ್ನು ತಪ್ಪಿಸಬೇಕು. ಆಗ ರೇಲನ್ನು ಹತ್ತಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ.

ರೈಲಿನ ನಿಯಮವರಿತು ಪ್ರಯಾಣಿಸೋಣ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top