ಮಧ್ಯಪ್ರದೇಶ: ಬಿಜೆಪಿ ಶಾಸಕ ರಾಜೇಂದ್ರ ದಾದು ಕಾರು ಅಪಘಾತದಲ್ಲಿ ಮೃತ್ಯು
ಭೋಪಾಲ್, ಜೂನ್ 10: ಮಧ್ಯಪ್ರದೇಶದ ಬಿಜೆಪಿ ಶಾಸಕ ರಾಜೇಂದ್ರ ದಾದು ಕಾರು ಅಪಘಾತದಲ್ಲಿ ಮೃತರಾಗಿದ್ದಾರೆ. ಗುರುವಾರ ರಾತ್ರೆ ಇಂದೋರ್-ಭೋಪಾಲ್ ರಸ್ತೆಯ ಸಿಹೋರ್ ಎಂಬಲ್ಲಿ ದುರ್ಘಟನೆ ನಡೆದಿದ್ದು ರಾಜೇಂದ್ರ ದಾದು ಸಂಚರಿಸಿದ್ದ ಕಾರು ಪಲ್ಟಿಯಾಗಿತ್ತು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರ ವಸತಿಗೃಹದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲು ಅವರು ತೆರಳುತ್ತಿದ್ದರು. ಅಪಘಾತದ ಸ್ಥಳದಲ್ಲಿಯೇ ಶಾಸಕರು ಮೃತರಾದರೆಂದು ಪೊಲೀಸರು ತಿಳಿಸಿದ್ದಾರೆ.ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ. ದಾದು ಮಧ್ಯಪ್ರದೇಶದ ನೆಪನಗರದ ಶಾಸಕರಾಗಿದ್ದಾರೆ.
Next Story