ಡೀಸೆಲ್ ಬೆಲೆಯಲ್ಲಿ 1.26 ರೂ., ಪೆಟ್ರೋಲ್ಗೆ 5 ಪೈಸೆ ಏರಿಕೆ
ಹೊಸದಿಲ್ಲಿ,ಜೂ.15: ಪ್ರತಿ ಲೀಟರ್ ಪೆಟ್ರೋಲ್ಗೆ ಐದು ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ಗೆ 1.26 ರೂ.ಬೆಲೆ ಏರಿಕೆಯನ್ನು ಮಾಡಲಾಗಿದ್ದು, ಬುಧವಾರ ಮಧ್ಯರಾತ್ರಿಯಿಂದಲೇ ನೂತನ ದರಗಳು ಜಾರಿಗೆ ಬಂದಿವೆ.ಮೇ 1ರಿಂದೀಚಿಗೆ ಇದು ಇಂಧನ ಬೆಲೆಗಳಲ್ಲಿ ನಾಲ್ಕನೇ ಏರಿಕೆಯಾಗಿದೆ. ಹಿಂದಿನ ಬಾರಿ ಜೂ.1ರಂದು ಪ್ರತಿ ಲೀ.ಪೆಟ್ರೋಲ್ಗೆ 2.58 ರೂ. ಮತ್ತು ಡೀಸೆಲ್ಗೆ 2.26 ರೂ.ಬೆಲೆ ಏರಿಕೆ ಮಾಡಲಾಗಿತ್ತು.
Next Story