ಉತ್ತರ ಪ್ರದೇಶ :ಪ್ರಸಾದ ಸೇವಿಸಿ ಇಬ್ಬರು ಮಕ್ಕಳು, 21 ಮಹಿಳೆಯರು ಅಸ್ವಸ್ಥ
ಲಕ್ನೊ,ಜುಲೈ 19: ಉತ್ತರ ಪ್ರದೇಶದ ಲಕ್ನೊ ಜಿಲ್ಲೆಯ ನರಹಿಯಲ್ಲಿ ಸಂಕಟಮಾತಾ ಮಂದಿರದಲ್ಲಿ ಪೂಜೆಯ ವೇಳೆ ನೀಡುವ ಪ್ರಸಾದ ಸೇವಿಸಿದ ಪರಿಣಾಮ 21 ಮಂದಿ ಮಹಿಳೆಯರು ಸಹಿತ ಇಬ್ಬರು ಮಕ್ಕಳು ಅಸ್ವಸ್ಥರಾದ ಘಟನೆ ವರದಿಯಾಗಿದೆ. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಇದೀಗ ಅವರು ಚೇತರಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಪೂಜೆ ಮುಗಿದ ಬಳಿಕ ಮಹಿಳೆಯರು ತಮ್ಮಮನೆಗೆ ಹೋಗಿದ್ದರು. ಮನೆಯಲ್ಲಿ ತಮ್ಮ ಮಕ್ಕಳಿಗೂ ತಿನ್ನಲು ಪ್ರಸಾದವನ್ನು ಕೊಟ್ಟಿದ್ದರು ಎನ್ನಲಾಗಿದೆ.
ಪ್ರಸಾದ ಸೇವಿಸಿದ ಸ್ವಲ್ಪಸಮಯದಲ್ಲಿ ಮಹಿಳೆಯರಿಗೆ ಹೊಟ್ಟೆನೋವು ವಾಕರಿಕೆ ಬರಲಾರಂಭವಾಗಿತ್ತು. ಸ್ವಲ್ಪದರಲ್ಲೇ ಮಹಿಳೆಯರ ಆರೋಗ್ಯ ಕೆಡತೊಡಗಿತ್ತು. ಕುಟುಂಬದವರು ಅವರನ್ನು ಹತ್ತಿರದ ಆಸ್ಪತ್ರೆಗೆಸೇರಿಸಿದ್ದರು. ಇವರಲ್ಲಿ ಹದಿನೆಂಟು ಮಹಿಳೆಯರನ್ನುಆಸ್ಪತ್ರೆಯ ತುರ್ತುವಿಭಾಗಕ್ಕೆ ದಾಖಲಿಸಲಾಗಿದೆ. ಆನಂತರ ಇಬ್ಬರು ಮಕ್ಕಳೂ ಅಸ್ವಸ್ಥಗೊಂಡರೆಂದು ವರದಿ ತಿಳಿಸಿದೆ.
Next Story