ಸೆನ್ಸಾರ್ ಮಂಡಳಿಯ ಪುನಃಶ್ಚೇತನಕ್ಕೆ ನಿರ್ದೇಶಕ ಶ್ಯಾಮ ಬೆನೆಗಲ್ ಸಾರಥ್ಯ
ಹೊಸದಿಲ್ಲಿ,ಜ.1: ಸೆನ್ಸಾರ್ ಮಂಡಳಿಯ ಪುನಾರಚನೆಯ ಬಗ್ಗೆ ಶಿಫಾರಸುಗಳನ್ನು ಮಾಡಲು ಮತ್ತು ಸಿನೆಮಾಟೋಗ್ರಾಫ್ ಕಾಯ್ದೆಯಲ್ಲಿ ಬದಲಾವಣೆಗಳನ್ನು ಸೂಚಿಸಲು ಖ್ಯಾತ ನಿರ್ದೇಶಕ ಶ್ಯಾಮ ಬೆನೆಗಲ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಶುಕ್ರವಾರ ರಚಿಸಿದೆ.
ಸೆನ್ಸಾರ್ ಮಂಡಳಿಯನ್ನು ವಿವಾದ ಮುಕ್ತವನ್ನಾಗಿಸಲು ಅದರಲ್ಲಿ ಬದಲಾವಣೆಗಳನ್ನು ತರುವ ಬಗ್ಗೆ ವಾರ್ತಾ ಮತ್ತು ಪ್ರಸಾರ ಸಚಿವ ಅರುಣ್ ಜೇಟ್ಲಿಯವರು ಇತ್ತೀಚಿಗೆ ಸುಳಿವು ನೀಡಿದ್ದರು.
ಬಾಲಿವುಡ್ ನಿರ್ಮಾಪಕ ಪಹಲಾಜ್ ನಿಹಲಾನಿ ಅವರು 2015ರ ಆರಂಭದಲ್ಲಿ ಸೆನ್ಸಾರ್ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಮಂಡಳಿಯು ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕುತ್ತಲೇ ಬಂದಿದೆ.
Next Story