ನಟ ಆದಿತ್ಯ ಪಾಂಚೋಲಿಗೆ ಒಂದು ವರ್ಷ ಜೈಲುಶಿಕ್ಷೆ
ಮುಂಬೈ,ನವೆಂಬರ್ 6: ನೆರೆಮನೆಯಾತನಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಾಲಿವುಡ್ ನಟ ಆದಿತ್ಯ ಪಾಂಚೋಲಿಗೆ ಒಂದು ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ವರದಿಯಾಗಿದೆ. ಅಂಧೇರಿಯ ಸ್ಥಳೀಯ ಮ್ಯಾಜಿಸ್ಟ್ರೇಟ್ ಕೋರ್ಟು ಪಾಂಚೋಲಿಯನ್ನು ತಪ್ಪಿತಸ್ಥನೆಂದು ನಿರ್ಧರಿಸಿ ಒಂದುವರ್ಷ ಶಿಕ್ಷೆ ವಿಧಿಸಿದೆ. ನಂತರ ಮ್ಯಾಜಿಸ್ಟ್ರೇಟ್ ಅಮಿತಾಬ್ ಪಂಚಬ್ಭಾಯಿ ಹನ್ನೆರಡು ಸಾವಿರರೂಪಾಯಿ ಬಾಂಡ್ನಲ್ಲಿ ಜಾಮೀನು ನೀಡಿದ್ದಾರೆ. ಪಾಂಚೋಲಿ ತನ್ನ ನೆರೆಮನೆಯ ಪ್ರತಿಕ್ ಪಸ್ರಾನಿ ಎಂಬವರಿಗೆ ಹಲ್ಲೆ ನಡೆಸಿದ್ದರಿಂದ ಅವರ ಮೂಗಿಗೆ ಗಾಯವಾಗಿತ್ತು ಎಂದು ವರದಿತಿಳಿಸಿದೆ.
Next Story